
ಬಿಲ್ಲವರ ಅಸೋಸಿಯೇಶನ್, ಮುಂಬೈಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದೇಶದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪ್ರಾರಂಬದಲ್ಲಿ ಪುರೋಹಿತರಾದ ಐತ್ತಪ್ಪ ಸುವರ್ಣ ರವರು ಗುರು ಪೂಜೆ ಮಾಡಿ ಪ್ರಾರ್ಥನೆ ಮಾಡಿದರು. ಸಭಾಗ್ರಹದಲ್ಲಿ ನೆರೆದಿದ್ದ ಗಣ್ಯರು, ಮಹಿಳೆಯರು , ಯುವಬ್ಯೂದಯ ಸಮಿತಿ ಸದಸ್ಯರು, ಮಕ್ಕಳು ದೇಶದ ಪ್ರಗತಿಗಾಗಿ ಗುರು ಸನ್ನಿಧಿಯಲ್ಲಿ ಪ್ರಾರ್ಥಿಸಿದರು.
78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಯ ಮುಖ್ಯ ಅತಿಥಿ ಗಣ್ಯರಾಗಿ ಆಗಮಿಸಿದ ಶ್ರೀಮತಿ ಶ್ವೇತಾ ರೋಹಿತ್ ಪೂಜಾರಿ (ಭಾರತ್ ಬ್ಯಾಂಕ್ , ಡೊಂಬಿವಲಿ ಶಾಖೆಯ ಪ್ರಬಂಧಕರು ) ರವರು ದ್ವಜಾರೋಹಣಗೈದರು. ನೆರದ ಎಲ್ಲರೂ ರಾಷ್ಟ್ರಗೀತೆ ಹಾಡಿ ದ್ವಜಕ್ಕೆ ವಂದನೆ ಸಲ್ಲಿಸಿದರು.
ತದನಂತರ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶ್ರೀ ಚಂದ್ರಹಾಸ್ ಪಾಲನ್ ರವರ ಅದ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನೆಡೆಯಿತು ಹಾಗು ಮುಖ್ಯ ಅತಿಥಿಯಾಗಿ ಬಂದಂತಹ ಶ್ರೀಮತಿ ಶ್ವೇತಾ ರೋಹಿತ್ ಪೂಜಾರಿ (ಭಾರತ್ ಬ್ಯಾಂಕ್ , ಡೊಂಬಿವಲಿ ಶಾಖೆಯ ಪ್ರಬಂಧಕರು ) ಉಪಾದ್ಯಕ್ಷರುಗಳಾದ ಶ್ರೀಯುತ ಪುರಂದರ ಪೂಜಾರಿ , ಶ್ರೀಧರ್ ಅಮೀನ್, ಗೌ. ಕೋಶಾಧಿಕಾರಿ ಆನಂದ್ ಪೂಜಾರಿ ರವರು ವೇದಿಕೆಯಲ್ಲಿ ಉಪಸ್ತಿಥರಿದ್ದರು. ಉಪ ಕಾರ್ಯದರ್ಶಿ ಶ್ರೀಯುತ ಕೃಷ್ಣ ಪೂಜಾರಿ ಯವರು ಎಲ್ಲರನ್ನು ಸ್ವಾಗತಿಸುತ್ತಾ ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ನೀಡಿದರು.
ಶ್ರೀ ಜಗದೀಶ್ ಕೋಟಿಯನ್ , ಈಶ್ವರ ಕೋಟಿಯನ್ , ರತನ್ ಪೂಜಾರಿ, ರಾಘವೇಂದ್ರ ಕಾಪು , ಯಶೋದಾ ಕರ್ಕೇರ, ನಿಶಾ ಪೂಜಾರಿ, ಕುನಲ್ ಪೂಜಾರಿ, ತ್ರಿಷಾ ಪೂಜಾರಿ, ರಯಾನ್ ಪೂಜಾರಿ, ಭವ್ಯ ಪೂಜಾರಿ, ಕಾರ್ತಿಕ್ ಪೂಜಾರಿ, ಶಮಿತಾ ಪೂಜಾರಿ, ರಿತ್ವಿಕ್ ದಿನೇಶ್ ಪೂಜಾರಿ, ಸ್ವಾತಂತ್ರ್ಯ ದಿನಾಚರಣೆ ಯಾ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು. ಹಾಗು ಹಾಗು ಮಹಿಳಾ ವಿಭಾಗ ದ ಸದಸ್ಯರು ದೇಶ ಭಕ್ತಿ ಗೀತೆ ಹಾಡಿದರು .

ಸ್ಥಳೀಯ ಕಚೇರಿಯ ಉಪ ಕಾರ್ಯದರ್ಶಿ ಶ್ರೀಯುತ ಕೃಷ್ಣ ಪೂಜಾರಿ ರವರು ಸ್ವತಂತ್ರ ದಿನಾಚರಣೆ ಯಾ ಮಹತ್ವ ಮತ್ತು ಪ್ರಸ್ತುತತೆಯನ್ನು ವಿವರಿಸಿದರು..
ಮುಖ್ಯ ಅತಿಥಿ ಗಣ್ಯರಾಗಿ ಆಗಿ ಆಗಮಿಸಿದ ಶ್ರೀಮತಿ ಶ್ವೇತಾ ರೋಹಿತ್ ಪೂಜಾರಿ (ಭಾರತ್ ಬ್ಯಾಂಕ್ , ಡೊಂಬಿವಲಿ ಶಾಖೆಯ ಪ್ರಬಂಧಕರು ) ಮಾತನಾಡುತ್ತಾ ಒಂದು ದೇಶ ಸಮದೃದ್ದ ವಾಗಿ ಬೆಳೆಯಬೇಕಾದರೆ ಶಿಕ್ಷಣ ಅತಿ ಮುಖ್ಯ ಪಾತ್ರ ವಹಿಸುತ್ತದೆ ಹಾಗು ನೆರೆದ ಎಲ್ಲ ಸಮಾಜ ಬಂದವರಿಗೆ ಸ್ವತಂತೋತ್ಸವದ ಸುಭಾಶಯವಿತ್ತರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಚಂದ್ರಹಾಸ್ ಪಾಲನ್ ರವರು ನಮ್ಮ ಮುಂದಿನ ಜನಾಂಗ ಎಂದಿಗೂ ಶಿಕ್ಷಣದಿಂದ ವಂಚಿತರಾಗಬಾರದು ಹಾಗು ಇದಕ್ಕೆ ನಾವೆಲ್ಲರೂ ಸಹಕರಿಸಿದರೆ ಮಾತ್ರ ಸಾಧ್ಯಾ ಎನ್ನುತ ಅಸೋಸಿಯೇಷನ್ ನ ಉನ್ನತಿಗೆ ಸಹಕರಿಸುತ್ತಿರುವ ಎಲ್ಲ ಸಮಾಜಭಾಂದವರನ್ನು ವಂದಿಸಿದರು.
ಉಪ ಕಾರ್ಯದರ್ಶಿಗಳು ಕಾರ್ಯಕ್ರಮ ನಿರೂಪಿಸಿದರು,. ಕಾರ್ಯಕ್ರಮದ ಕೊನೆಯಲ್ಲಿ ಗೌರವ ಕೋಶಾಧಿಕಾರಿ ಶ್ರೀಯುತ ಆನಂದ್ ಪೂಜಾರಿ ವಂದನಾರ್ಪಣೆ ಸಲ್ಲಿಸಿದ ಬಳಿಕ ಸೇರಿದ್ದ ಎಲ್ಲರಿಗೂ ಸಿಹಿ ತಿಂಡಿ ಹಾಗೂ ಲಘು ಉಪಹಾರ ನೀಡಲಾಯಿತು.