
ಸಮಿತಿಗೆ ಯುವಕರ ಸೇರ್ಪಡೆ ಅಗತ್ಯ – ಮೋಹನ್ ಕೊಡಿಕಲ್.
ವರದಿ : ವಾಣಿ ಪ್ರಸಾದ ಸಾಲ್ಯಾನ್
ಕದಿಕೆಯ ಸಾಲ್ಯಾನ್ ಮೂಲಸ್ಥಾನದ ವಾರ್ಷಿಕ ಮಹಾಸಭೆ, ಸಾಲ್ಯಾನ್ ಪಾರಿವಾರದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಜನೆಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವು ಆಗಸ್ಟ್ 11ರಂದು, ಬೆಳ್ಳಿಗ್ಗೆ ಧರ್ಮದೈವದ ಪ್ರಾಂಗಣದಲ್ಲಿ ನಡೆಯಿತು.
ಮೊದಲಿಗೆ ಅಧ್ಯಕ್ಷರಾದ ಮೋಹನ್ ಕೊಡಿಕಲ್ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.
ಗೌರವ ಕಾರ್ಯದರ್ಶಿ ಗಣೇಶ್ ಎ ಸಾಲ್ಯಾನ್ ಎಲ್ಲರನ್ನೂ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.


ಕೋಶಾಧಿಕಾರಿ ಅರವಿಂದ್ ಸಾಲ್ಯಾನ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.
ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮೊಕ್ತೇಸರ ದೇವದಾಸ್ ಬೈಕಂಪಾಡಿ “ಮಕ್ಕಳಿಗೆ ಚಿಕ್ಕಂದಿನಲ್ಲಿ ನಮ್ಮ ಸಂಸ್ಕಾರವನ್ನು ತಿಳಿ ಹೇಳಬೇಕು. ಮನೆಯಲ್ಲಿ ದೇವರಿಗೆ ನೀರು, ಹೂ, ದೀಪ ಇಡುವ ಕಾರಣ, ಮಹತ್ವವನ್ನು ಅವರಿಗೆ ತಿಳಿಸುವುದು, ಹಿರಿಯರ ಕರ್ತವ್ಯ. ಕಳೆದ 13 ವರ್ಷಗಳಿಂದ, ದಾನಿಗಳ ನೆರವಿನಿಂದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುತಿದ್ದೇವೆ. ಇಂದು ಪ್ರೋತ್ಸಾಹ ಧನ ಪಡೆದ ಮಕ್ಕಳು, ಮುಂದೆ ಯಶಸ್ಸುಗಳಿಸಿ, ವಿದ್ಯಾಧಾನಕ್ಕಾಗಿ ದಾನ ನೀಡಿ. ಇದು ನಮ್ಮ ಮೂಲಸ್ಥಾನ ಎಂಬ ಭಾವನೆ ಎಲ್ಲರಲ್ಲಿ ಇರಲಿ” ಎಂದರು.

ಇನ್ನೋರ್ವ ಮೊಕ್ತೇಸರ ಕೇಶವ ಸಾಲ್ಯಾನ್ ಮಾತನಾಡುತ್ತಾ “ನಮ್ಮ ಮೂಲಸ್ಥಾನ ಒಂದು ಪವಿತ್ರ ಸ್ಥಾನ, ಯುವಕರು ಸಮಿತಿಗೆ ಸೇರಬೇಕು.ಎಲ್ಲರಿಗೂ ಜವಾಬ್ದಾರಿ ಇದೆ. ನಮ್ಮ ಮೂಲಸ್ಥಾನ, ನಮ್ಮ ನಾಗದೇವರು ಎಂಬ ಭಾವನೆ ನಮ್ಮಲಿರಬೇಕು. ಕಷ್ಟ ಬಂದ ಬಳಿಕ ಮೂಲಸ್ಥಾನಕ್ಕೆ ಬರಬೇಡಿ, ನಾಗ ದೇವರ ಅನುಗ್ರಹಕ್ಕೆ ಇಲ್ಲಿ ನಡೆಯುವ ಸೇವೆಯಲ್ಲಿ ಭಾಗಿಯಾಗಿ” ಎಂದು ನುಡಿದರು.

ಮುಂಬಯಿ ಸಮಿತಿಯ ಉಮೇಶ್ ಸಾಲ್ಯಾನ್ ತನ್ನ ಅಭಿಪ್ರಾಯ ತಿಳಿಸುತ್ತಾ “ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸವಾಯಿತು.ಇಂದು ಪ್ರೋತ್ಸಾಹ ಧನ ಪಡೆದ ಮಕ್ಕಳು ಜೀವನದಲ್ಲಿ ಯಶಸ್ಸುಗಳಿಸಿ, ಎಲ್ಲೇ ಇದ್ದರೂ ನಮ್ಮ ಮೂಲಸ್ಥಾನ ನೀಡಿದ ಪುರಸ್ಕಾರ ಎಂದೂ ಮರೆಯಬೇಡಿ. ನಮ್ಮಲ್ಲಿ ಏನಾದರೂ ವೈಮನಸು ಇದ್ದರೆ ಅದನ್ನು ಸರಿಪಡಿಸೋಣ. ಮೂಲಸ್ಥಾನದ ಎಲ್ಲಾ ಕಾರ್ಯಗಳೂ ಒಳ್ಳೆ ರೀತಿಯಲ್ಲಿ ನಡೆಯುತದೆ ಎಂದರು.

ಬಳಿಕ ಸಾಲ್ಯಾನ್ ಮೂಲಸ್ಥಾನದ ಕದಿಕೆ ಹಳೆಯಂಗಡಿಗೆ ಒಳಪಟ್ಟ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ 90% ಅಂಕ ಗಳಿಸಿದ ಮಕ್ಕಳಿಗೆ ವೇದಿಕೆ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು.
ಹಾಗೂ ಎಸ್ ಎಸ್ ಎಲ್ ಸಿ, ದ್ವಿತೀಯ ಪಿ ಯು ಸಿ ಮತ್ತು ಪದವಿ ಶಿಕ್ಷಣ ಮಾಡುತ್ತಿರುವ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಅಧ್ಯಕ್ಷೀಯ ಭಾಷಣ ಮಾಡಿದ ಅಧ್ಯಕ್ಷ ಮೋಹನ್ ಕೊಡಿಕಲ್ “ಕಾರ್ಯಕ್ರಮ ಬಹಳ ಉತ್ತಮ ರೀತಿಯಲ್ಲಿ ನಡೆದಿದೆ, ನಾವು ನೀಡಿದ ಪ್ರೋತ್ಸಾಹ ಧನ ಸಣ್ಣ ಮೊತ್ತವೇ ಇರಬಹುದು ಆದರೆ ಇದನ್ನು ಶ್ರೀ ನಾಗದೇವರ ಪ್ರಸಾದವೆಂದು ಮಕ್ಕಳು ಸ್ವೀಕರಿಸಿ ಮುಂದಿನ ವಿದ್ಯಾರ್ಜನೆಯನ್ನು ಮಾಡಬೇಕು. ಪ್ರತಿಭಾ ಪುರಸ್ಕಾರ ಪಡೆದವರು ಹಾಗೂ ಪ್ರೋತ್ಸಾಹ ಧನ ಪಡೆದವರು ಮುಂದೆ ವಿದ್ಯಾಭ್ಯಾಸ,ಉದ್ಯೋಗದಲ್ಲಿ ಯಶಸ್ಸು ಗಳಿಸಲಿ ಎಂಬ ಹಾರೈಕೆ ನಮ್ಮದು. ದಾನಿಗಳು ನೀಡಿದ ಹಣವನ್ನು ನಾವು ಮಕ್ಕಳಿಗೆ ನೀಡುತ್ತಿದ್ದೇವೆ.ಈಗ ನಮ್ಮ ಸಮಿತಿಯಲ್ಲಿ ಜನ ಕಡಿಮೆ ಇದ್ದಾರೆ, ಸಮಿತಿಗೆ ಯುವಕರು ಸೇರ್ಪಡೆಯಾಗಬೇಕು ಹಾಗೂ ವಾರ್ಷಿಕ ಪೂಜೆಗೆ ಕರಸೇವೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮಹಿಳೆಯರು ಬರಬೇಕು” ಎಂದರು.
ನಾಗರ ಪಂಚಮಿಯಂದು ಅನ್ನ ಸಂತರ್ಪಣೆಗೆ ಧನ ಸಹಾಯ ಮಾಡಿದ ವೆಂಕಟೇಶ್ ಸಾಲ್ಯಾನ್ ರನ್ನು ಗೌರವಿಸಲಾಯಿತು.


ಕವಿತಾ ಸಾಲಿಯಾನ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮಿತಿಯ ಗೌರವಾಧ್ಯಕ್ಷ ಸಾಧು ಸಾಲ್ಯಾನ್, ಅಧ್ಯಕ್ಷ ಮೋಹನ್ ಕೊಡಿಕಲ್, ಮೊಕ್ತೇಸರುಗಳಾದ ದೇವದಾಸ್ ಬೈಕಂಪಾಡಿ, ಕುಮಾರ ಕಾಂಚನ್, ಕೇಶವ ಸಾಲ್ಯಾನ್, ಮುಂಬೈ ಸಮಿತಿಯ ಉಮೇಶ್ ಸಾಲ್ಯಾನ್, ಕೋಶಾಧಿಕಾರಿ ಅರವಿಂದ ಸಾಲ್ಯಾನ್, ಉಪಾಧ್ಯಕ್ಷ ತಾರನಾಥ್ ಸಾಲ್ಯಾನ್, ಜತೆ ಕಾರ್ಯದರ್ಶಿ ರಾಜೇಶ್ ಸಾಲ್ಯಾನ್ ಉಪಸ್ಥಿತರಿದ್ದರು. ಕೊಡುಗೈ ದಾನಿ ತೇಜಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಹೇಮಾವತಿ ಸಾಲ್ಯಾನ್ ಚಿತ್ರಾಪು ಪ್ರಾರ್ಥಿಸಿದರು.
ಪ್ರೀತಿ ಭೋಜನದೊಂದಿಗೆ ಒಟ್ಟು ಕಾರ್ಯಕ್ರಮ ಸಮಾಪನಗೊಂಡಿತು.