30.1 C
Karnataka
April 4, 2025
ಮುಂಬಯಿ

ಕನ್ನಡ ಸಂಘ, ಸಯನ್ ಇದರ ಆಟಿಡೊಂಜಿ ದಿನ



ನಮ್ಮ ಸಂಘವು ಪ್ರಗತಿ ಪಥದಲ್ಲಿ ಸಾಗಬೇಕಾದರೆ ಸದಸ್ಯರ ಪಾತ್ರ ಮಹತ್ವದ್ದು.- ಡಾ.ಸದಾನಂದ ಶೆಟ್ಟಿ

‘ ಕನ್ನಡ ಸಂಘ ಇದೀಗ ಸಣ್ಣ ಕೂಸು ಆದರೂ ಮುಂಬೈ ನಗರದಲ್ಲಿ ಇದೀಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಸಯನ್ ಪರಿಸರದ ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಯಶಸ್ಸನ್ನು ಪಡೆದಿದೆ. ಸಂಘವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕು. ಸ್ಥಾಪಕ ಸದಸ್ಯ ಹ್ಯಾರಿ ಸಿಕ್ವೇರಾ, ಜೊತೆ ಕಾರ್ಯದರ್ಶಿಗಳಾದ ದಯಾನಂದ ಮೂಲ್ಯ, ಉಮೇಶ್ ಶೆಟ್ಟಿ, ಕುಕ್ಕುಂದೂರು ,ಜಯಶೀಲ ಮೂಲ್ಯ ಮತ್ತು ಇತರರು ಶಕ್ತಿಮೀರಿ ಸಂಘದ ಉನ್ನತಿಗಾಗಿ ದುಡಿಯುತ್ತಿರುವುದು ಶ್ಲಾಘನೀಯ. ಸಂಘದ ಸದಸ್ಯರ ಸಂಖ್ಯೆಯಲ್ಲಿ ಏರಿಕೆಯಾಗಬೇಕು ಸದಸ್ಯತ್ವದ ಹಣವನ್ನು ತುಂಬಿಸಲು ಅಸಾಧ್ಯ ವಾಗುವವರಿಗೆ ನಾವು ಸಹಾಯ ಮಾಡಲು ಸಿದ್ದರಿದ್ದೇವೆ. ಆದಷ್ಟು ಸಂಖ್ಯೆಯಲ್ಲಿ ಕನ್ನಡಿಗರನ್ನು ಸಂಘದತ್ತ ಕರೆತನ್ನಿ ‘ಎಂದು ಸಂಘದ ಗೌರವಾಧ್ಯಕ್ಷರಾದ, ಅಜಂತಾ ಕ್ಯಾಟರ್ಸ್ನ ಮಾಲಕರಾದ ಶ್ರೀ ಜಯರಾಮ್ ಶೆಟ್ಟಿ ಅವರು ಕರೆ ನೀಡಿದರು. ಅವರು ಕನ್ನಡ ಸಂಘದ ವತಿಯಿಂದ ತಾ. 11/08/2024 ರಂದು ಸ್ವಾಮಿ ನಿತ್ಯಾನಂದ ಸಭಾ ಗೃಹದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಂಘದ ಮಹಾಪೋಷಕರು, ಹಿರಿಯ ಸಲಹೆಗಾರರು ಆಗಿರುವ ಅಂತರರಾಷ್ಟ್ರೀಯ ಖ್ಯಾತಿಯ ಹೃದಯ ರೋಗ ತಜ್ಞ ಡಾಕ್ಟರ್ ಸದಾನಂದ ಶೆಟ್ಟಿಯವರು ಮಾತನಾಡುತ್ತಾ ಕಳೆದ 60 ವರ್ಷಗಳಿಂದ ಸಯನ್ ನಲ್ಲಿ ವಾಸವಾಗಿರುವ ನನಗೆ ಸಯನ್ ಪರಿಸರದಲ್ಲಿ ಕನ್ನಡ ಸಂಘ ಒಂದು ಬೇಕು ಎಂದು ಅನ್ನಿಸುತ್ತಿತ್ತು.
ಕಳೆದ ವರ್ಷ ಸಯನ್ ಪರಿಸರದಲ್ಲಿ ಸಂಘ ಹುಟ್ಟಿ ಕೊಂಡಾಗ ನಿಜಕ್ಕೂ ತುಂಬಾ ಸಂತೋಷವಾಯಿತು.
ಸಂಘದ ಮೂಲಕ ನಾವು ಈ ಪರಿಸರದ ಜನರ ಆಶೋತ್ತರಗಳಿಗೆ ಸ್ಪಂದಿಸಬಹುದಾಗಿದೆ. ಸಂಘವು ಪ್ರಗತಿ ಪಥದಲ್ಲಿ ಸಾಗಬೇಕಾದರೆ ಸದಸ್ಯರ ಪಾತ್ರ ಮಹತ್ವದ್ದು.ಎಂದರು. ಅವರು ಮುಂದುವರಿಯುತ್ತಾ ಆರೋಗ್ಯದ ಬಗ್ಗೆ ಕೆಲವು ಮುನ್ನೆಚ್ಚರಿಕೆ ಗಳನ್ನೂ ನೀಡಿದರು.

‘ಸಯನ್ ಪರಿಸರದಲ್ಲಿ ಕಳೆದ ವರ್ಷ ಹುಟ್ಟಿಕೊಂಡ ನಮ್ಮ ಕನ್ನಡ ಸಂಘವು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದೆ. ಬರುವ ಅಕ್ಟೋಬರ್ ತಿಂಗಳಲ್ಲಿ ಒಂದು ವರ್ಷವನ್ನು ಪೂರೈಸಲಿರುವ ಈ ಸಂಸ್ಥೆಗೆ ತಮ್ಮೆಲ್ಲರ ಬೆಂಬಲ ಅಗತ್ಯ. ಅರ್ಥಪೂರ್ಣವಾಗಿ ವಾರ್ಷಿಕೋತ್ಸವವನ್ನು ಆಚರಿಸೋಣ’ ಎಂದು ಸಂಘದ ಅಧ್ಯಕ್ಷರಾದ ಡಾ ಎಂ ಜೆ ಪ್ರವೀಣ್ ಭಟ್ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಕವಯಿತ್ರಿ ಗಾಯಕಿ ಶ್ರೀಮತಿ ಮಾಲಾ ಮೇಸ್ತ ಅವರು ಆಷಾಡ ತಿಂಗಳ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಇತ್ತೀಚೆಗೆ ಕುಶಾಲನಗರ ಪ್ರೆಸ್‌ ಕ್ಲಬ್ ಟ್ರಸ್ಟ್‌ ವತಿಯಿಂದ ಕಾವೇರಿ ರತ್ನ ಪ್ರಶಸ್ತಿಯನ್ನು ಪಡೆದ ಸಂಘದ ಉಪಾಧ್ಯಕ್ಷರಾದ ಶ್ರೀ ಸದಾಶಿವ ಬಿ.ಎನ್. ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಸನ್ಮಾನಿಸಿದರು.

ತದನಂತರ ಅಂದು ತುಳುನಾಡಿನ ವಿಶೇಷ ತಿಂಡಿ ತಿನಿಸುಗಳನ್ನು ಮನೆಯಲ್ಲಿ ತಯಾರಿಸಿ ತಂದಂತಹ 21 ಮಹಿಳೆಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಕುಮಾರಿ ಚೈತನ್ಯ ಆಚಾರ್ಯ ಅವರು ಮಕ್ಕಳಿಗಾಗಿ ಮತ್ತು ಎಲ್ಲಾ ಸಭಿಕರಿಗಾಗಿ ಹಲವು ವಿಧದ ಗೇಮ್ಸ್, ಕ್ವಿಜ್ ಸ್ಪರ್ಧೆಗಳನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸಂಘದ ವಾರ್ಷಿಕೋತ್ಸವದಂದು ಅವರಿಗೆ ಬಹುಮಾನಗಳನ್ನು ನೀಡಲಾಗುವುದು.

ಪ್ರಾರಂಭದಲ್ಲಿ ಚೈತನ್ಯ ಆಚಾರ್ಯ ಪ್ರಾರ್ಥನೆಗೈದರು. ಗೌ.ಪ್ರ.ಕಾರ್ಯದರ್ಶಿ
ಡಾ. ಜಿ.ಪಿ.ಕುಸುಮ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related posts

ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ.

Mumbai News Desk

ಡೊಂಬಿವಿಲಿ ಶ್ರೀ ವರದ ಸಿದ್ಧಿವಿನಾಯಕ ಮಂಡಲದಲ್ಲಿ ದಿ. ಕುಕ್ಕೇಹಳ್ಳಿ  ವಿಠಲ್ ಪ್ರಭು ಸ್ಮರಣಾರ್ಥ ಯಕ್ಷಗಾನ ಪ್ರದರ್ಶನ

Mumbai News Desk

ಅಭಿನಯ ಮಂಟಪ ( ರಿ.) ಮುಂಬಯಿ ಎರಡು ನಾಟಕಗಳ ಮುಹೂರ್ತ

Mumbai News Desk

ಬಿಲ್ಲವರ ಅಸೋಸಿಯೇಷನ್, ಮುಂಬೈ, ಇದರ ದೊಂಬಿವೀಲಿ ಸ್ಥಳೀಯ ಕಚೇರಿಯ 2024-2027 ರ ನೂತನ ಕಾರ್ಯಾಧ್ಕ್ಷರಾಗಿ ಶ್ರೀ ಶ್ರೀಧರ್ ಬಿ. ಅಮೀನ್ ಅಯ್ಕೆ

Mumbai News Desk

ಮೊಗವೀರ  ವ್ಯವಸ್ಥಾಪಕ ಮಂಡಳಿಯಲ್ಲಿ  ” ಆಟಿಡ ಒಂಜಿ ಕೂಟ “

Mumbai News Desk

ಹಿಂದೂ ಜೂನಿಯರ್ ಕಾಲೇಜು ಶಿರ್ವ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಸಮಿತಿಯ  ಕುಟುಂಬೋತ್ಸವ ಹಾಗೂ ದಶಮಾನೋತ್ಸವದ  ವಿಜಯೋತ್ಸವ

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ