
ಡೊಂಬಿವಲಿ ಅ.21: ಡೊಂಬಿವಲಿ ಪರಿಸರದಲ್ಲಿ ಕಳೆದ 27 ವರ್ಷಗಳಿಂದ ತುಳು ಸಂಸ್ಕೃತಿಯನ್ನು ಬೆಳೆಸುವ, ತುಳು- ಕನ್ನಡಿಗರಲ್ಲಿ ಸ್ವಾವಲಂಬನೆ ಮೂಡಿಸುವ ಕೆಲಸ, ಭಜನಾ ತರಗತಿ, ಯಕ್ಷಗಾನ ಕಲಿಕಾ ಕೇಂದ್ರ, ಕನ್ನಡ ಕಲಿಕಾ ತರಗತಿ, ಯೋಗ ಕೇಂದ್ರ, ವೈದ್ಯಕೀಯ ನೆರವು,ಮಹಿಳಾ ವಿಭಾಗ ಹಾಗೂ ಇನ್ನಿತರ ಸಮಾಜ ಸೇವೆ ಮಾಡುತ್ತಿರುವ ತುಳು ವೆಲ್ ಫೇರ್ ಎಸೋಸಿಯೇಶನ್ ಡೊಂಬಿವಲಿ ಇದರ 27 ನೇ ವಾರ್ಷಿಕೋತ್ಸವವು ಅಗಸ್ಟ್ 25-8-2024 ರ ರವಿವಾರದಂದು ಅಪರಾಹ್ನ 3.30 ಕ್ಕೆ ಸರಿಯಾಗಿ ಡೊಂಬಿವಲಿ ಎಂ.ಐ.ಡಿ.ಸಿ ಅಗ್ನಿಶಾಮಕ ಕೇಂದ್ರದ ಮತ್ತು ಎಲ್.ಐ.ಸಿ ಕಚೇರಿಯ ಸಮೀಪದಲ್ಲಿರುವ ಶಿವಂ ಬ್ಯಾಂಕ್ವೇಟ್ ಸಭಾಗೃಹದಲ್ಲಿ ಜರಗಲಿದೆ.
ಕಾರ್ಯಕ್ರಮದ ಮದ್ಯಾಂತರದಲ್ಲಿ ತುಳು ವೆಲ್ ಫೇರ್ ಎಸೋಸಿಯೇಶನ್ ಇದರ ಅಧ್ಯಕ್ಷರಾದ ರವಿ ಸನಿಲ್ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ಜರಗಲಿದ್ದು ಅತಿಥಿಗಳಾಗಿ ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಾಧ್ಯಕ್ಷರಾದ ಡಾ.ದಿವಾಕರ್ ಶೆಟ್ಟಿ ಇಂದ್ರಾಳಿ, ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ಸುಕುಮಾರ್ ಎನ್. ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಸುಬ್ಬಯ್ಯ ಎ.ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾದ್ಯಕ್ಷ ಆನಂದ ಡಿ.ಶೆಟ್ಟಿ ಎಕ್ಕಾರ್, ಅಂಬರ್ನಾಥ ಪರಿಸರದ ಬಿಲ್ಡರ್ ಜಗದೀಶ್ ಆರ್. ಬಂಜನ್, ಶ್ರೀ ರಾಧಾಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಸೋಮನಾಥ ಅರ್.ಪೂಜಾರಿ, ಹೋಟೆಲ್ ಉದ್ಯಮಿ, ಕರ್ನಾಟಕ ಸಂಘ ಡೊಂಬಿವಲಿ ಇದರ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಭಾಕರ್ ಆರ್.ಶೆಟ್ಟಿ, ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಇದರ ಮಾಜಿ ಅಧ್ಯಕ್ಷ ಕರುಣಾಕರ ಜೆ.ಶೆಟ್ಟಿ, ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಇದರ ಕೋಶಾಧಿಕಾರಿ ಜಗನ್ನಾಥ ಆರ್.ಅಮೀನ್ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಮತ್ತು ಸದಸ್ಯರ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ತುಳು ವೆಲ್ ಫೇರ್ ಎಸೋಸಿಯೇಶನ್ ಯಕ್ಷಗಾನ ತರಬೇತಿ ಶಿಬಿರದ ವಿದ್ಯಾರ್ಥಿಗಳಿಂದ ಗುರು ಹೆಜ್ಮಾಡಿ ಮನೋಜ್ ಕುಮಾರ್ ಇವರ ನಿರ್ದೇಶನದಲ್ಲಿ ಮಹಿಷ ಮರ್ಧಿನಿ ತುಳು ಯಕ್ಷಗಾನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ತುಳು- ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸ ಬೇಕೆಂದು ಸಂಸ್ಥೆಯ ಗೌ.ಅಧ್ಯಕ್ ಯು.ಲಕ್ಷ್ಮಣ್ ಸುವರ್ಣ, ಉಪಾಧ್ಯಕ್ಷ ವಸಂತ ಸುವರ್ಣ, ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ, ಕೋಶಾಧಿಕಾರಿ ಪ್ರಕಾಶ್ ವಿ.ಅಮೀನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದ ಪಿ.ಪುತ್ರನ್, ಕಾರ್ಯದರ್ಶಿ ಶಾಂತಾ ಜೆ.ಅಮೀನ್,ಕೋಶಾಧಿಕಾರಿ ಪ್ರತಿಭಾ ಯು.ಕರ್ಕೇರ, ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಭಾಸ್ಕರ್ ಎನ್. ಕೋಟ್ಯಾನ್ , ಕಾರ್ಯದರ್ಶಿ ತಾರಾನಾಥ ಜಿ. ಕುಂದರ್, ಕೋಶಾಧಿಕಾರಿ ಸುನಂದಾ ಆರ್. ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ ಮತ್ತು ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.