
ಚಿತ್ರ, ವರದಿ: ರಮೇಶ್ ಉದ್ಯಾವರ
ಜೊಗೇಶ್ವರಿ, ಆ 21:. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನ ಮಹೋತ್ಸವ ಆ. 21 ರಂದು ಜೋಗೇಶ್ವರಿ ಪಶ್ಚಿಮದ ರಿಲೀಫ್ ರೋಡ್ ಗುಲ್ಶನ್ ನಗರದ ರಾಯರ ಅಭಿನವ ಮಂತ್ರಾಲಯ ಮಠದಲ್ಲಿ ಮಧ್ವಾಚಾರ್ಯ ಮೂಲ ಸಂಸ್ಥಾನದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥರ ಶುಭಾಶೀರ್ವಾದೊಂದಿಗೆ ಪೂರ್ವಾರಾಧನೆಯಿಂದ, ಮಧ್ಯಾರಾಧನೆ, ಉತ್ತಾರಾರಾಧನೆ ಸಹಿತ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳೊಂದಿಗೆ ಭಕ್ತಿ ಭಾವದೊಂದಿಗೆ ಜರಗಿತ್ತು.
ಆ 22 ರಂದು ಮಧ್ಯಾರಾಧನೆಯ ಪ್ರಯುಕ್ತ ಬೆಳಿಗ್ಗೆ ಪ್ರಾತಃಕಾಲದಲ್ಲಿ ನೈರ್ಮಲ್ಯ ವಿಸರ್ಜನೆ ವೇದಪರಾಯಣ ಪಂಚಾಮೃತ ಅಭಿಷೇಕ ಸರ್ವ ಸೇವೆ ಜರುಗಿದ ನಂತರ ಗಜರಥದಲ್ಲಿ ರಾಯರ ಪ್ರತಿಬಿಂಬದೊಂದಿಗೆ ಬೃಂದಾವನದ ವೃತ್ತದಲ್ಲಿ ಚಂಡೆ ಭಜನೆಯೊಂದಿಗೆ ರಾಯರ ರಥೋತ್ಸವ ಮೆರವಣಿಗೆ ಜರುಗಿತು. ಶ್ರೀ ಪ್ರಹ್ಲಾದರಾಯರ ಕನಕಮ್ಮ ಪೂಜೆ ಬ್ರಾಹ್ಮಣ ಅಲಂಕಾರ ಹಷ್ಟೋಧಕ ನೆರವೇರಿದ ಬಳಿಕ ಮಧ್ಯಾಹ್ನದ ಮಹಾಮಂಗಳಾರತಿ ಜರುಗಿದ ಬಳಿಕ ತೀರ್ಥ ಪ್ರಸಾದ ಅನ್ನ ಸಂತರ್ಪಣೆ ನೆರವೇರಿತು.

ರಾಯರ ಧಾರ್ಮಿಕ ಆರಾಧನೆಯಲ್ಲಿ ವಿವಿಧ ಭಜನಾ ಸಂಘಟನೆಗಳಿಂದ ಸಾಮೂಹಿಕ ಭಜನಾ ಕಾರ್ಯಕ್ರಮಗಳು ಜರುಗಿದವು.
ಭೌತಿಕವಾಗಿಯೂ ಆಧ್ಯಾತ್ಮಿಕವಾಗಿ ಗುರುರಾಯ ರೆಂದೇ ಕರೆಯಲ್ಪಡುವ ಮಹಾ ಗುರುವಿನ ಪ್ರಪಂಚಾದ್ಯಂತ ಸಹಸ್ರಾರು ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತಿರುವ ಆರಾಧನೆಯಲ್ಲಿ ರಾಯರ ಜೊಗೇಶ್ವರಿಯ ಅಭಿನಯ ಮಂತ್ರಾಲಯದ ಬೃಂದಾವನದಲ್ಲಿ ಪ್ರಬಂಧಕರಾದ ಕಿಶೋರ್ ದೇಸಾಯಿ ವಿಚಾರಕರ್ತರಾದ ದೀಪಕ್ ವೈದ್ಯ, ರಾಘವೇಂದ್ರ ಆಚಾರ್, ಪ್ರಹ್ಲಾದ ಆಚಾರ್ ಇನ್ನಿತರ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಸದ್ಭಕ್ತರಿಗೆ ತೀರ್ಥಪ್ರಸಾದ ಮಂತ್ರಾಕ್ಷತೆ ವಿತರಿಸಿದರು.

ಆಗಸ್ಟ್ 20 ರಿಂದ ಪ್ರಾರಂಭಗೊಂಡು ಆ 22. ರಂದು ಉತ್ತರಾಧನೆಯೊಂದಿಗೆ ಕೊನೆಗೊಂಡ ಮೂರು ದಿನಗಳ ಆರಾಧನೆಯಲ್ಲಿ ದಿನಂಪ್ರತಿ ರಾಯರ ಬೃಂದಾವನಕ್ಕೆ ಅಭಿಷೇಕ, ಪೂಜಾ ವಿಧಿ ವಿಧಾನಗಳ ಜೊತೆಗೆ ರಥೋತ್ಸವ ಮೆರವಣಿಗಳು ಜರಗುತ್ತಿದ್ದು ಭಕ್ತರಿಗೆಲ್ಲಾ ಅನ್ನ ಸಂತರ್ಪಣೆ ನೆರವೇರಿತು.
(Bold) ವಿಶ್ವ ಹಿತಬಯಸಿ, ವಿಶ್ವಧರ್ಮದ ಉದ್ದಾರಕರಾಗಿ ಚಲನಶೀಲ ಬದುಕಿಗೆ ವರ್ತಮಾನದಲ್ಲಿ ಜೀವನ ಮೌಲ್ಯಗಳೇ ಮುಖ್ಯವೆಂಬುದನ್ನು ಸಾರಿದವರು ಶ್ರೀ ರಾಘವೇಂದ್ರ ಸ್ವಾಮಿಗಳು. ಶ್ರೀ ಮೂಲ ರಾಮದೇವರು ರಾಘವೇಂದ್ರ ಯತಿ ಸಾರ್ವಭೌಮರ ಪರಂಪರೆಗೆ ಆರಾಧ್ಯ ದೇವರಾದ ಶ್ರೀರಾಮಚಂದ್ರರ ಅಪ್ರತಿಮ ಆರಾಧಕರಾಗಿ ಮನುಕುಲದ ಉತ್ಕ್ರಾಂತಿಯ ಒಂದು ದಿವ್ಯ ಮನಸ್ಥಿತಿಯ ವ್ಯಾಖ್ಯಾನದ ಕಾರ್ಯನಿರ್ವಹಿಸಿದರು. ಆಚಾರ್ಯ ಮಧ್ವರ ತಾತ್ವಿಕ ಸಿದ್ದಾಂತವನ್ನು ರಾಯರು ಸಮಸ್ತ ಭಕ್ತರ ಮುಂದೆ ಅನಾವರಣಗೊಳಿಸಿದರು. ಹಲವಾರು ಪವಾಡಗಳ ಮೂಲಕ ಮೆರೆದು ಅವಧೂತರಾಗಿ ಲೋಕದ ಒಳಿತನ್ನು ಬಯಸಿದವರು. ಸರ್ವ ಜನಾಂಗದರು ಪೂಜಿತರಾಗಿರುವ ರಾಘವೇಂದ್ರ ಸ್ವಾಮಿಗಳು ಸರ್ವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಮಂತ್ರಾಲಯ ಅಧಿಪೀಠದ ಬೃಂದಾವನದಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರು ಎನ್ನುವ ಒಂದೇ ದೃಷ್ಟಿಯಲ್ಲಿ ಎಲ್ಲರನ್ನು ಆಧರಿಸಲಾಗುತ್ತಿದೆ.