23.5 C
Karnataka
April 4, 2025
ಮುಂಬಯಿ

“ಕನ್ನಡಿಗರ ಜ್ಞಾನ ವಿಕಾಸ ಮಂಡಲ ಮೆಹತಾ ಮಹಾವಿದ್ಯಾಲಯ ಐರೋಲಿ: 78ನೇ ಸ್ವಾತಂತ್ರೋತ್ಸವ ಸಂಭ್ರಮದ ಆಚರಣೆ



ನವಿ ಮುಂಬಯಿ 24. ಹೊರನಾಡು ಕನ್ನಡಿಗರು ಕಟ್ಟಿದ ಜ್ಞಾನ ವಿಕಾಸ ಮಂಡಲದ ಮೆಹತಾ ಮಹಾವಿದ್ಯಾಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ನಿಮಿತ್ತ ಧ್ವಜಾರೋಹಣವನ್ನು ಬೆಳಗ್ಗೆ 9 ಘಂಟೆಗೆ ಮೆಹತಾ ಕಾಲೇಜಿನ ಸುಂದರವಾಗಿ ಅಲಂಕೃತವಾದ ದ್ವಜಕಟ್ಟೆಯ ಸ್ಥಳದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಜ್ಞಾನ ವಿಕಾಸ ಮಂಡಲ ಮಹಾವಿಧ್ಯಾಲಯ ಹಾಗು ಕಿರಿಯ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಸಮ್ಮುಖದಲ್ಲಿ ಜ್ಞಾನ ವಿಕಾಸ ಮಂಡಲದ ಸಂಸ್ಥಾಪಕ ಸದಸ್ಯ ರಮೇಶ ಪಾಟೀಲ ಇವರು ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಭಾಗೃಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜ್ಞಾನ ವಿಕಾಸ ಮಂಡಲದ ಅಧ್ಯಕ್ಷ ವಿ ಎನ್ ಹೆಗಡೆ ಇವರು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದ ಏಕತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಅಂದು ಬ್ರಿಟಿಷರು ಒಡೆದು ಆಳುವ ನೀತಿಯನ್ನು ಕೆಲವು ಸಂಸ್ಥೆ ಹಾಗೂ ಜನ ಮುಂದುವರೆಸಿಕೊಂಡು ಬಂದಿರುವದು ದುರದೃಷ್ಟಕರ ಎಂದು ತಿಳಿಸಿದರು.
ಶಿಕ್ಷಕರು ತಮ್ಮ ಸ್ವಹಿತ ಹಾಗು ಸಂಕುಚಿತ ಭಾವನೆಯಿಂದ ವಿಧ್ಯಾರ್ಥಿಗಳಿಗೆ ಒಡೆದು ಆಳುವ ನೀತಿಯನ್ನು ಕಲಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಬಾರದೆಂದು ತಿಳಿ ಹೇಳಿದರು.ಅಭಿವೃದ್ಧಿ ಹೊಂದಿದ ಹಾಗು ಬಲಿಷ್ಠ ದೇಶ ಕಟ್ಟುವಾದಕ್ಕಾಗಿ ವಿದ್ಯಾರ್ಥಿಗಳು ನಿಷ್ಠೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಕಿವಿ ಮಾತು ಹೇಳಿದರು. ಹಲವಾರು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಣಬಡಿಸಿ ಆಡಳಿತ ಮಂಡಳಿಯ ಹಾಗು ಶಿಕ್ಷಕ ಹಾಗು ಶಿಕ್ಷಕೇತರ ಸಿಬ್ಬಂದಿಯ ಮನಗೆದ್ದರು.
ಸ್ವಾತಂತ್ರ್ಯ ಸಂಭ್ರಮದಲ್ಲಿ ಜ್ಞಾನ ವಿಕಾಸ ಮಂಡಲ ದ ಕಾರ್ಯಾಧ್ಯಕ್ಷ ಕೆ ಚ್ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ವ್ಯಾಸಮೂರ್ತಿ ಮುಗಳಿ, ಪ್ರಭಾರಿ ಪ್ರಾಚಾರ್ಯ ಡಾ.ಬಿ.ಆರ್.ದೇಶಪಾಂಡೆ,ಆಡಳಿತ ಮಂಡಳಿಯ ಸದಸ್ಯರಾದ ಸತೀಶ ಕಿಲಾರಿ, ಅವಧೂತ ಆಕ್ಲೇಖರ, ಪಾಂಡುರಂಗ ಮಿರ್ಜಿ, ಆರ್. ಜೆ ಪಾಟೀಲ, ರಾಹುಲ ಮಾಂಗ್ಲೆ ಹಾಗೂ ಜ್ಞಾನ ವಿಕಾಸ ಮಂಡಲದ ಸದಸ್ಯರಾದ ಗಾಯತ್ರಿ ಕುಲಕರ್ಣಿ,ಶಿವಾಜಿ ಪುರಿ ಮುಂತಾದ ಮಹನೀಯರು ಪಾಲ್ಗೊಂಡಿದ್ದರು. ಮೆಹತಾ ಕಾಲೇಜಿನ ಸಾಂಸ್ಕೃತಿಕ ಸಮಿತಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗು ಸ್ಟೂಡೆಂಟ್ಸ್ ಕೌನ್ಸಿಲ್ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಹಲವಾರು ದೇಶಾಭಿಮಾನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Related posts

ಸಾಯನ್,ಗೋಕುಲ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾಪನಾ ದಿನ

Mumbai News Desk

ಮೊಗವೀರ ಬ್ಯಾಂಕಿನ ಆಡಳಿತ ಮಂಡಳಿ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಭೇಟಿ

Mumbai News Desk

ಕುಲಾಲ ಸಂಘ ಮುಂಬಯಿ, ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಮಿಲನ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Mumbai News Desk

ಬಂಟರ ಸಂಘ ಮುಂಬೈ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ  ನವರಾತ್ರಿ ಉತ್ಸವ, ಮಾತಾ ಕೀ ಚೌಕಿ .  ದಾಂಡಿಯಾ ರಾಸ್.

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆ.

Mumbai News Desk