
ಮುಂಬಯಿ ಅ.27 : ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಧಾರವಿ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ ಅ.21 ರಂದು ಭಾರತ್ ಬ್ಯಾಂಕ್ ನಿರ್ದೇಶಕರಾದ ಸುರೇಶ್ ಬಿ ಸುವರ್ಣ. ಸಯನ್ ಕನ್ನಡ ಸಂಘದ ಗೌ. ಅಧ್ಯಕ್ಷ ಜಯರಾಮ ಶೆಟ್ಟಿ, ಮತ್ತಿತರ ಗ್ರಾಹಕರಉಪಸ್ಥಿತಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಲಾಯಿತು.
ಭಾರತ್ ಬ್ಯಾಂಕಿನ ಸ್ಥಾಪಕ ಸದಸ್ಯ ಹೊನ್ನಯ ನಾರಾಯಣ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಮಾಜಿ ಜಂಟಿ ಕಾರ್ಯದರ್ಶಿಅಶೋಕ್ ಸಸಿಹಿತ್ಲು, ಕನ್ನಡ ಸಂಘ ಸಯನ್ ನ ಅಧ್ಯಕ್ಷ ಡಾ. ಪ್ರವೀಣ್ ಭಟ್, ದೇವಿಪ್ರಸಾದ್ ಹೋಟೆಲ್ ದಿನೇಶ್ ಶೆಟ್ಟಿ, ಗ್ರಾಹಕರುಗಳುದ ಸುಂದರ್ ಉದಯರ್, ಅಂಕುಶ್ ಹಜಾರೆ, ಅಂತೋನಿ ಅರುಳಪ್ಪನ್, ವಾಮನ್ ಕರ್ಕೇರ, ಪದ್ಮಾ ಆಚಾರ್ಯ, ಗಿರೀಶ್ ಮುರ್ಜಿ ನಾಡಿಯಾಪರ, ಅಜಯಕುಮಾರ್ ಜಿ. ಗುಪ್ತಾ ಮತ್ತಿತರ ಗ್ರಾಹಕರು ಪಾಲ್ಗೊಂಡಿದ್ದರು.

ಎಲ್ಲರನ್ನು ಶಾಖೆಯ ಮುಖ್ಯಸ್ಥರಾದ ರಾಜೇಶ್ ಜೆ.ಬಂಗೇರ, ಉಪ ಪ್ರಬಂಧಕಿ ನಯನಾ ಬಿ.ಸೋಮೇಶ್ವರ್, ಸಿಬ್ಬಂದಿ ವರ್ಗದವರಾದ ಶ್ರೀನಿವಾಸ ಅಂಚನ್, ಶ್ರುತಿ ಸಾಲಿಯಾನ್, ಉಷಾ ಕೋಟ್ಯಾನ್, ಧನಶ್ರೀ ಪೂಜಾರಿ, ಶ್ರದ್ಧಾ ಪೂಜಾರಿ ಗೌರವಿಸಿದರು.