ಮುಂಬಯಿ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಇದರ ಮುಂಬಯಿ ಶಾಖೆಯ ವಾರ್ಷಿಕ ಮಹಾಸಭೆಯು ಆಗಸ್ಟ್ 25 ರಂದು ರವಿವಾರ ಅಂಧೇರಿಯ ಮೊಗವೀರ ಭವನದಲ್ಲಿ ಸಂಘದ ಅಧ್ಯಕ್ಷರಾದ ಪೊಲಿಪು ದಿವಾಕರ್ ಪಿ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಒಡೆಯರಬೆಟ್ಟು ಅಶೋಕ ಸುವರ್ಣ ಅವರು ಗ್ರಾಮ ಸಭಾಗಳ ಪ್ರತಿನಿಧಿಗಳನ್ನು ಸ್ವಾಗತಿಸಿ ಮಹಾಸಭೆಯ ಸುತ್ತೋಲೆಯನ್ನು ಓದಿದರು.
ಬಳಿಕ ಅಧ್ಯಕ್ಷರು ಬೆಣ್ಣ ಕುದ್ರು ಕುಲ ಮಹಾಸ್ತಿ ಹಾಗೂ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಅಮ್ಮನವರ ಸನ್ನಿದಾನಕ್ಕೆ
ಪ್ರಾರ್ಥನೆ ಸಲ್ಲಿಸಿದರು,
ಕಾರ್ಯದರ್ಶಿಯವರು 2/10/2023ರಂದು ನಡೆದಿರುವ ಸಂಘದ 96 ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿ ಓದಿದರು, ಅದು ಕೋಟೆಕೊಪ್ಪಲ ಲಲಿತ್ ಸುವರ್ಣ ಅವರ ಸೂಚನೆ ಮತ್ತು ಕದಿಕೆ ಉಮೇಶ್ ಸಾಲ್ಯಾನ್ ಅವರ ಅನುಮೋದನೆಯೊಂದಿಗೆ
ಮಂಜುರಾಯಿತು.ನಂತರ ಕಾರ್ಯದರ್ಶಿಯವರು 2023-2024 ರ ಅವಧಿಯ ವರದಿಯನ್ನು ಮಂಡಿಸಿದರು.
ಕೋಶಾಧಿಕಾರಿ ಬಪ್ಪನಾಡು ನಾರಾಯಣ ತಿಂಗಳಾಯ ಅವರು 2023-2024ರ ಆಯ ವ್ಯಯ ಮತ್ತು ಆಸ್ತಿ ವಾ ಸೊತ್ತುಗಳ ಲೆಕ್ಕಪಟ್ಟಿಯನ್ನು ಓದಿದರು. ಅದು ಪೊಲಿಪು ಟಿ.ಜೆ ಮೆಂಡನ್ ಅವರ ಸೂಚನೆ ಮತ್ತು ಕದಿಕೆ ಉಮೇಶ್ ಸಾಲ್ಯಾನ್ ಅವರ ಅನುಮೋದನೆಯೊಂದಿಗೆ ಮಂಜುರಾಯಿತು.
ಇನ್ನಿತರ ವಿಷಯಗಳಲ್ಲಿ ಪ್ರತಿಭಾ ಪುರಸ್ಕಾರ ಯೋಜನೆಯನ್ನು ಜಾರಿ ಮಾಡುವ ಬಗ್ಗೆ ನಡೆದ ಚರ್ಚೆಯಲ್ಲಿ ಪೊಲಿಪು ನೀಲಾಧರ ಕುಂದರ್ ಈ ಯೋಜನೆಗಾಗಿ ಒಂದು ನಿದ್ರಿಷ್ಟ ಮೊತ್ತದ ನಿಧಿಯು ಜಮೆಯಾದ ಬಳಿಕ ಆ ನಿಧಿಯಿಂದ ಬಂದ ಬಡ್ಡಿಯಿಂದ ಮಾತ್ರ ಪ್ರತಿಭಾ ಕಾರ್ಯಕ್ರಮ ನಡೆಯಬೇಕು ಹಾಗು ಅದು ನಿರಂತರ ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು. ಈ ವಿಷಯದಲ್ಲಿ ಗುಡ್ಡೆಕೊಪ್ಪಲ ಹರೀಶ್ ಶ್ರೀಯಾನ್, ಚರಂತಿಪೇಟೆ ಕೃಷ್ಣ ಕೋಟ್ಯಾನ್,ಪಲಿಮಾರು ಶ್ರೀಧರ್ ಸಾಲ್ಯಾನ್,ಕಣ್ಣಂಗಾರು ದಾಮೋದರ ಡಿ .ಪುತ್ರನ್ ಕುಳೂರು ಶ್ರೀನಿವಾಸ ಶ್ರೀಯಾನ್ ಹೊಸಬೆಟ್ಟು ಆರ್. ಆರ್. ಕರ್ಕೇರ, ಪೊಲಿಪು ಡಿ. ಕೆ.ಕಾಂಚನ್, ಮುಳೂರು ಗಿರಿಧರ್ ಸುವರ್ಣ,ಹೊಸಬೆಟ್ಟು ಉಮೇಶ್,ಪೊಲಿಪು ಪ್ರಭಾಕರ್ ಕಾಂಚನ್,ಉಚ್ಚಿಲ ಅಶೋಕ್ ಕೋಟ್ಯಾನ್, ಒಡೆಯರಬೆಟ್ಟು ಗೋವಿಂದ ಪುತ್ರನ್, ಮಟ್ಟು ಪ್ರೇಮನಾಥ್ ಸಾಲ್ಯಾನ್, ಚರಂತಿಪೇಟೆ ಸೋಮನಾಥ್ ಆರ್ ಕರ್ಕೇರ,ಉದ್ಯಾವರ ಯು.ಕೆ.ಸಿ. ಬಂಗೇರ .ಕೈಪುಂಜಾಲ್ ಧನ್ ರಾಜ್ ಕುಂದರ್, ಕಾಪು ಸತೀಶ್ ಕುಮಾರ್ ಕರ್ಕೇರ. ಹೊಸಬೆಟ್ಟು ನವೀನ್ ಸಾಲ್ಯಾನ್, ಎರ್ಮಾಲ್ ಬಡಾ ಮೋಹನ್ ಸಾಲ್ಯಾನ್, ಕಾಪು ರಮೇಶ್ ಕರ್ಕೇರ, ದೊಡ್ಡಕೊಪ್ಪಳ ಶ್ಯಾಮ್ ಸುರತ್ಕಲ್, ಹೊಸಬೆಟ್ಟು ಮಧುಸೂದನ್,ಪಡುಬಿದ್ರಿ ಶೇಕರ್.ಎಸ್ .ಕೋಟ್ಯಾನ್, ಕುಳೂರು ನಾಗೇಶ್ ಎಲ್ ಮೆಂಡನ್. ಪೊಲಿಪು ಟ. ಜೆ .ಮೆಂಡನ್, ಚಿತ್ರಾಪು ಪ್ರಮೋದ್ ಪುತ್ರನ್, ಕನ್ನಂಗಾರ್ ದಿನೇಶ್ ಸುವರ್ಣ, ಮನೋಜ್ ಕೋಟ್ಯಾನ್ ಮತ್ತು ದಿನೇಶ್ ಕೋಟ್ಯಾನ್. ಕೋಟೆಕೊಪ್ಪಳ ಸಂಜೀವ ಸಿ ಬಂಗೇರ, ಬೈಕಂಪಾಡಿ ಶ್ಯಾಮ್ ಕೆ ಪುತ್ರನ್, ಕೈಪುಂಜಾಲ್ ಏಕನಾಥ್ ಕುಂದರ್, ದೊಡ್ಡಕೊಪ್ಪಳ ಧೀರಜ್ ಬಿ. ಪುತ್ರನ್, ಪಡುಬಿದ್ರಿ ನಡಿಪಟ್ಟ ಮಾಧವ ಟಿ. ಪುತ್ರನ್. ಲಚ್ಚಿಲ್ ಹೇಮಾನಾಥ್ ಪುತ್ರನ್ ಅವರು ಸಭೆಯ ಚರ್ಚೆಯಲ್ಲಿ ಭಾಗವಹಿಸಿದರು.
ವೇದಿಕೆಯಲ್ಲಿಉಪಾಧ್ಯಕ್ಷರಾದ ಬಪ್ಪನಾಡು ಮುಖೇಶ್ ಬಂಗೇರ ಉಪಸ್ಥಿತರಿದ್ದರು.ಅಧ್ಯಕ್ಷರು ತಮ್ಮ ಭಾಷಣದಲ್ಲಿ ನಮ್ಮ ಸಂಘವು ಹೆಚ್ಚು ಕ್ರಿಯಾಶೀಲವಾಗಲು ಗ್ರಾಮ ಸಭಾಗಳ ಸರ್ವ ಪ್ರತಿನಿಧಿಗಳು ಉತ್ಸುಕತೆಯಿಂದ ಭಾಗವಹಿಸಬೇಕು .ಪ್ರತಿಭಾ ಪುರಸ್ಕಾರದ ನಿಧಿ ಆದಷ್ಟು ಬೇಗ ಜಮೆಯಾಗುವಂತೆ ಪ್ರಯತ್ನ ಮಾಡಬೇಕು ಎಂದು ವಿನಂತಿಸಿದರು .