
ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಆಶ್ರಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಸಂಯೋಜನೆಯಲ್ಲಿ ಸೆಪ್ಟಂಬರ್ 1, ರವಿವಾರದಂದು ಥಾಣೆ ಪಶ್ಚಿಮದಲ್ಲಿರುವ ಸಂಘದ ಕಿರು ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವವನ್ನು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬಲು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಘದ ಪದಾಧಿಕಾರಿಗಳೊಂದಿಗೆ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ದೀಪ ಪ್ರಜ್ವಲನೆಗೈದ ಬಳಿಕ ಸಂಘದ ನಾರಾಯಣಗುರು ಭಜನಾ ಮಂಡಳಿ ಮತ್ತು ಸದಸ್ಯರಿಂದ ಭಜನೆ ನೆರವೇರಿತು ತದನಂತರ ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಪ್ರಧಾನ ಅರ್ಚಕ ಶ್ರೀಧರ ವಿ. ಪೂಜಾರಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದರು ಮಾಜಿ ಉಪಾಧ್ಯಕ್ಷರಾದ ಸಿ. ಎ. ಪೂಜಾರಿ ಗುರು ಸ್ತೋತ್ರ ಪಠಿಸಿ ಪ್ರಾರ್ಥನೆ ಸಲ್ಲಿಸಿದರು ಬಳಿಕ ಅನ್ನ ಸಂತರ್ಪಣೆ ಜರಗಿತು. ಗುರು ಮಂಟಪದ ಅಲಂಕಾರವನ್ನು ಸದಾನಂದ ಬಿ. ಪೂಜಾರಿ ಶ್ರೀಧರ ಪೂಜಾರಿ ಹಾಗೂ ರವಿ ಪೂಜಾರಿ ಮಾಡಿದ್ದರು.

ಪ್ರತಿವರ್ಷ ಗುರು ಜಯಂತಿಯನ್ನು ಸಂಘವು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುವಂತೆ ಈ ವರ್ಷ ಕೂಡ ಅದೇ ರೀತಿ ಗುರು ಜಯಂತಿಯನ್ನು ಆಚರಿಸಿದ್ದು ಸದಸ್ಯರು, ಹಿತಚಿಂತಕರು, ಸಮುದಾಯ ಬಾಂಧವರು ಹಾಗೂ ಗುರುಗಳ ತತ್ವಾದರ್ಶ ಪಾಲಕರು ತೀರ್ಥ ಪ್ರಸಾದ ಸ್ವೀಕರಿಸುವುದರೊಂದಿಗೆ ಗುರುವರ್ಯರ ಕೃಪಾ ಕಟಾಕ್ಷಕ್ಕೆ ಪಾತ್ರರಾದರು.

ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಉಪಾಧ್ಯಕ್ಷರುಗಳಾದ ನರಸಿಂಹ ಎಮ್. ಬಿಲ್ಲವ ಆನಂದ ಕೆ. ಪೂಜಾರಿ ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ ಸಂಘದ ಮಾಜಿ ಅಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು, ಅರುಣಾ ಟೆಕ್ಸ್ ಟೈಲ್ಸ್ ಮಾಲಕರಾದ ವಿಶ್ವನಾಥ ಎ. ಪೂಜಾರಿ ಕೋಡಿ, ಅರುಣಾ ಡಿಸೈರ್ನಸ್ ಮಾಲಕರಾದ ಸುಜಾತ ವಿ. ಪೂಜಾರಿ, ಜಗನ್ನಾಥ ಆರ್. ಪೂಜಾರಿ ಆಡಳಿತ ಸಮಿತಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಈ ಗುರು ಜಯಂತಿ ಉತ್ಸವದಲ್ಲಿ ಉಪಸ್ಥಿತರಿದ್ದರು.