
ಸಮಾರಂಭದ ಯಸಸ್ಸಿಗೆ ಪ್ರತಿಯೊಬ್ಬರ ಸಹಕಾರವಿರಲಿ – ಎಲ್. ವಿ. ಅಮೀನ್
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ : ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗಾಗಿ ಉಭಯ ಜಿಲ್ಲೆಗಳ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವುದರೊಂದಿಗೆ ಜಿಲ್ಲೆಗಳ ಅಭಿವೃದ್ಧಿಗಾಗಿ ಕ್ರೀಯಾಶೀಲವಾರಿಗುವ ಮುಂಬಯಿಯಲ್ಲಿರುವ ಜಿಲ್ಲೆಗಳ ಎಲ್ಲಾ ಸಮುದಾಯಗಳ ಮುಖಂಡರನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ವಿವಿಧ ರೀತಿಯಲ್ಲಿ ಸದಾ ಪ್ರೋತ್ಸಾಹ ನೀಡುತ್ತಿದ್ದ, ಮಾಜಿ ಕೇಂದ್ರ ಸಚಿವ, ಜಿಲ್ಲೆಯವರೇ ಆದ ಜಾರ್ಜ್ ಫೆರ್ನಾಂಡಿಸ್ ಅವರ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ಪ್ರಧಾನ ಸಮಾರಂಭ 5 ನೇ ಸೆಪ್ಟೆಂಬರ್, 2024 ರಂದು (ಗುರುವಾರ) ಸಂಜೆ 5 ಗಂಟೆಗೆ ಬಂಟರ ಭವನ, ಅನೆಕ್ಸ್ ಹಾಲ್, ಕುರ್ಲಾ ಪೂರ್ವ, ಮುಂಬಯಿ ಇಲ್ಲಿ ನಡೆಯಲಿದ್ದು
ಈ ಸಲದ ಪ್ರಶಸ್ತಿಯನ್ನು “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಇವರಿಗೆ ಪ್ರದಾನಿಸಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೇಂದ್ರದ ರಾಜ್ಯ ಸಚಿವರು – ರೈಲ್ವೆ ಮತ್ತು ಜಲ ಶಕ್ತಿ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಹತ್ತು ಕ್ಯಾಬಿನೆಟ್ ಖಾತೆಗಳನ್ನು ಹೊಂದಿದ್ದ ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ಮುಖ್ಯ ಅತಿಥಿಯಾಗಿ ಆಗಮಿಸಿ ದಿಕ್ಕೂಚಿ ಭಾಷಣ ಮಾಡಲಿರುವರು.
ಈ ಬಗ್ಗೆ ಪೂರ್ವ ಸಿದ್ಧತೆಯ ಸಭೆ ಇತ್ತೀಚಿಗೆ
ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್ ಇವರ ಅಧ್ಯಕ್ಷತೆಯಲ್ಲಿ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಬಿಲ್ಲವ ಭವನದಲ್ಲಿ ಸಭೆ ನಡೆಯಿತು
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಲ್. ವಿ. ಅಮೀನ್ ಯವರು ಮಾತನಾಡುತ್ತ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಈ ಸಮಾರಂಭದಲ್ಲಿ ಸಮಿತಿಯ ಪ್ರತಿಯೊಬ್ಬರು ಉಪಸ್ಥಿತರಿದ್ದು ಸಮಾರಂಭವನ್ನು ಯಶಸ್ಸಿಗೊಳಿಸುವಲ್ಲಿ ಸದಸ್ಯರು ಹಿತೈಷಿಗಳು ಸಮಯದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕು. ಪರಿಸರ ಪ್ರೇಮಿಯ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳು ಜನ ಮಾನಸದಲ್ಲಿ ಹುಳಿವಂಥ ಸೇವೆಯನ್ನು ಮಾಡಿದ್ದೇವೆ. ಮುಂದೆ ಮತ್ತಷ್ಟು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಭೆಯಲ್ಲಿ ತಿಳಿಸಲಾಗುವುದು. ಜಿಲ್ಲೆಯ ಅಭಿವೃದ್ಧಿಗಾಗಿ ಈಗಾಗಲೇ ಸಮಿತಿ ಒಂದನ್ನು ಉಭಯ ಜಿಲ್ಲೆಗಳಲ್ಲಿ ಆರಂಭಗೊಂಡಿದೆ ಅದು ಸಕ್ರಿಯವಾಗಿ ಸೇವೆ ಮಾಡುತ್ತಿದೆ ಪದಾಧಿಕಾರಿಗಳು ಜಾತಿಯ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಪ್ರಾಪ್ತ ಸಮಯದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಉಪಾಧ್ಯಕ್ಷರಾದ ಪಿ.ಧನಂಜಯ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಮೋಹನದಾಸ್,, ನ್ಯಾ. ಆರ್. ಎಂ. ಭಂಡಾರಿ, ಗಿರೀಶ್ ಬಿ.ಸಾಲಿಯಾನ್, ಕಾರ್ಯದರ್ಶಿ , ಹ್ಯಾರಿ ಸಿಕ್ವೆರಾ , ಗೌ, ಕೋಶಾಧಿಕಾರಿ ತುಳಸೀದಾಸ್ ಎಲ್.ಅಮಿನ್, ಜೊತೆ ಕೋಶಾಧಿಕಾರಿ ತೋನ್ಸೆ ಸಂಜೀವ ಪೂಜಾರಿ, ಸದಸ್ಯರಾದ ಡಾ.ಪ್ರಭಾಕರ ಶೆಟ್ಟಿ ಬೋಳ, ಎಂ. ಎನ್. ಕರ್ಕೇರ, ದಯಾಸಾಗರ ಚೌಟ.ಸುರೇಂದ್ರಕುಮಾರ್ ಹೆಗ್ಡೆ, , ಚಿತ್ರಾಪು ಕೆ.ಎಂ.ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು
ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್ ಎಲ್ಲರನ್ನೂ ಸ್ವಾಗತಿಸಿ ವಂದನಾರ್ಪಣೆ ಮಾಡಿದರು.