ವರದಿ : ದಿನೇಶ್ ಕುಲಾಲ್
ಮುಂಬಯಿ ಸೆ 9.ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ( ಬಿಕೆಸಿ-ಜಿ ಬ್ಲಾಕ್) ಕಿಮಾ ಹೋಟೆಲ್‌ನ ಕಾರ್ಪೊರೇಟ್ ಕಟ್ಟಡದಲ್ಲಿ ಹೊರಾಂಗಣದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆ ಯಲ್ಲಿ ಗಾಯಗೊಂಡ ತುಳು-ಕನ್ನಡಿಗ ತಾರಾನಾಥ ವಾಮಯ ಬಂಜನ್ ನಿಧನರಾದರು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು 4 ದಿನಗಳಿಂದ ಚಿಕಿತ್ಸೆ ನಡೆಯುತ್ತಿದ್ದು ಫಲಕಾರಿಯಾಗದೆ 50 ವರ್ಷ ಪ್ರಾಯದ ತಾರಾನಾಥ ಬಂಜನ್ ಸೆ.8
ಭಾನುವಾರ ತೀರಿಕೊಂಡರು.
ಕಿಮಾ ಹೋಟೆಲ್‌ನ ಏರ್ ಕಂಡಿಷನರ್ ಕೆಟ್ಟು ಹೋಗಿದ್ದರಿಂದ ಅದನ್ನು ರಿಪೇರಿ ಮಾಡುವ ಸಲುವಾಗಿ ಬಂದಿದ್ದ ಖಾಸಗಿ ಕಂಪನಿಯ ಎ ಸಿ. ಕೆಲಸಗಾರರಾಗಿದ್ದ ವಾಮಯ ಬಂಜನ್ ಮತ್ತು ಸುಜಿತ್ ಪಾಲ್ ಘಟಕದ ದುರಸ್ತಿ ಸಂದರ್ಭದಲ್ಲಿ ಗಾಯಗೊಂಡಿದ್ದರು.
ಘಟನೆ ನಡೆದು 4 ದಿನಗಳ ಬಳಿಕ ತಾರಾನಾಥ್
ಕುರ್ಲಾದ ಭಾಭಾ ಆಸ್ಪತ್ರೆಯಲ್ಲಿ ಗಾಯಗಳು ಉಲ್ಬಣಗೊಂಡು ಕೊನೆಯುಸಿರೆಳೆದರು.
ಶೆ.80 ರಷ್ಟು ಸುಟ್ಟಗಾಯಗಳಾಗಿರುವ ಸುಜಿತ್ ಪಾಲ್ ಅವರು ಪ್ರಸ್ತುತ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಆಸ್ಪತ್ರೆಯ ಖರ್ಚ ವೆಚ್ಚ ಭರಿಸಿ ಮಾನವೀಯತೆ ಮೆರೆದ ಎನ್ ಟಿ ಪೂಜಾರಿ
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಗಮನಿಸಿದ ಕೀಮಾ ಹೋಟೆಲ್ ಮಾಲಕ ಎನ್ ಟಿ ಪೂಜಾರಿ, ಹೊರಗುತ್ತಿಗೆಯ ಏಜೆನ್ಸಿಯ ಅಜಾಗರೂಕತೆಯಿಂದ ನಡೆದ ಪ್ರಮಾದಕ್ಕೆ ತಾನು ಮಾನವೀಯ ನೆಲೆಯಲ್ಲಿ ಸ್ಪಂದಿಸಿ ಗಾಯಾಳುಗಳ ಚಿಕಿತ್ಸೆಗೆ ನೆರವಾದರು. ಬಂಜನ್ ಅವರು ಆಸ್ಪತ್ರೆಯಲ್ಲಿದ್ದ ಸಂದರ್ಭದ ಸಂಪೂರ್ಣ ಚಿಕಿತ್ಸೆಯ 8 ಲಕ್ಷ ರೂ. ವೆಚ್ಚವನ್ನು ತಾನೇ ಭರಿಸಿ ಸಾಂದರ್ಭಿಕ ಮಾನವೀಯತೆ ಮೆರೆದರು.
ಬಳಿಕ ಅಂತ್ಯಕ್ರಿಯೆಯ ವರೆಗೂ ತಮ್ಮ ಸಿಬ್ಬಂದಿ ಉಪಸ್ಥಿತರಿದ್ದು, ಮೃತ ಬಂಜನ್ ಅವರ ಇಬ್ಬರು ಮಕ್ಕಳ ಶಿಕ್ಷಣಕ್ಕೂ ತಾನು ನೆರವಾಗುವುದಾಗಿ ಎನ್ ಟಿ ಪೂಜಾರಿ ಭರವಸೆ ನೀಡಿದರು.
ಮೂಲತಃ ಸೂರಿಂಜೆಯವರಾದ ತಾರಾನಾಥ ವಾಮಯ ಬಂಜನ್ ಅವರು ಬಾಯಂದರ್ ಪೂರ್ವದ ಸಾಯಿ ಬಾಬಾ ನಗರ ಬಾಲಕೃಷ್ಣ ಅಪ್ಟ್ಮೆಂಟ್ ನಿವಾಸಿಯಾಗಿದ್ದು,
ಪತ್ನಿ , ಒಂದು ಹೆಣ್ಣು ಒಂದು ಗಂಡು ಮಕ್ಕಳು, ಹಾಗೂ ಐವರು ಸೋದರರು, ಇಬ್ಬರು ಸೋದರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯಲ್ಲಿ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ ಮುಂಡ್ಕೂರು ಸದಸ್ಯರು. ಕುಲಾಲ ಸಂಘ ಮುಂಬೈಯ ಮೀರಾ ರೋಡ್-ವಿರಾರ್ ಸಮಿತಿಯ ಸದಸ್ಯರು ಉಪಸ್ಥಿರಿದ್ದರು.