ಮುಂಬಯಿ ಸೆ 16. ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ, ಯೋಗ ಸಂಸ್ಥೆಯ ಹಿಂದೆ ಇರುವ ಶ್ರೀ ಪೇಜಾವರ ಮಠಕ್ಕೆ ಉಡುಪಿ ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅವರು ತಮ್ಮ 4ನೇ ಚಾತುರ್ಮಾಸ್ಯವ್ರತವನ್ನು ಮುಂಬೈನಲ್ಲಿ ಮುಗಿಸಿ ದಿನಾಂಕ 18 ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ.
ಸ್ವಾಮೀಜಿಯವರು ಆಗಮಿಸಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಅವರು ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ..
ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಪೇಜಾವರ ಮಠದ ಮುಖ್ಯ ಪ್ರಬಂಧಕರಾದ ಡಾ.ರಾಮದಾಸ್ ಉಪಾಧ್ಯಾಯ ರೆಂಜಾಳ, ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ,ನಿರಂಜನ್ ಗೋಗೈ ಮತ್ತು ಪೂರ್ಣಪ್ರಜ್ಞ ವಿದ್ಯಾಪೀಠದ ಆಡಳಿತ ಪದಾಧಿಕಾರಿಗಳು, ವಿಶ್ವಸ್ತರು ವಿನಂತಿಸಿಕೊಂಡಿದ್ದಾರೆ.
.
.
.