ವರದಿ. ಉಮೇಶ್. ಕೆ. ಅಂಚನ್.
ಮುಂಬಯಿ, ಸೆ. 16:ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಂದರ್ ಇದರ 8ನೇ ವಾರ್ಷಿಕ ಮಹಾಸಭೆಯು ಸೆ. 14ರಂದು ಮೀರಾರೋಡ್ ಪೂರ್ವದ ಶಾಂತಿನಗರ ಸೆಕ್ಟರ್ 5ರಲ್ಲಿರುವ ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯಲ್ಲಿ ಸಮಿತಿಯ ಅದ್ಯಕ್ಷರಾದ ಗೋಪಾಲಕೃಷ್ಣ ಜಿ. ಗಾಣಿಗರವರ ಅದ್ಯಕ್ಷತೆಯಲ್ಲಿ ನಡೆಯಿತು.
ಆರಂಭದಲ್ಲಿ ಗುರುದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು.
ಗೌ. ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಅಮವಾಸ್ಯೆಬೖಲು ವಾರ್ಷಿಕ ವರದಿ ಓದಿದರೆ ಕೋಶಾಧಿಕಾರಿ ಶೖಲೇಶ್ ಶೆಟ್ಟಿ ಸೂಡ ಲೆಕ್ಕಪತ್ರ ಮಂಡಿಸಿದರು ಹಾಗೂ ಸಭೆಯಲ್ಲಿ ಅಂಗೀಕರಿಸಲಾಯಿತು. ವಿಶಾಲ್ ಅಸೋಸಿಯೇಟ್ಸ್ ಎಂಡ್ ಕಂಪನಿಯವರನ್ನು ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು. ವಾರ್ಷಿಕ ಗಣೇಶಪುರಿ ಪಾದಯಾತ್ರೆಯನ್ನು ಫೆಬ್ರುವರಿ ಒಂದನೇ ತಾರೀಕಿಗೆ ನಿಗದಿಪಡಿಸಲಾಯಿತು.
ಸಂಸ್ಥೆಯ ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ ಸಂಸ್ಥಯ ಮುಂದಿನ ಕಾರ್ಯಕಲಾಪಗಳ ಬಗ್ಗೆ ವಿವರಿಸಿದರು.
ಎಸ್. ಸಿ. ಶೆಟ್ಟಿ, ವಸಂತಿ ಶೆಟ್ಟಿ, ಜಯಶ್ರೀ ಶೆಟ್ಟಿ, ಗೀತಾ ಶೆಟ್ಟಿ, ಕಸ್ತೂರಿ ಶೆಟ್ಟಿ, ರಾಜೇಶ್ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಹರ್ಷಕುಮಾರ್ ಡಿ. ಶೆಟ್ಟಿ,ರವೀಂದ್ರ ಶೆಟ್ಟಿ, ಆನಂದ ಶೆಟ್ಟಿ, ಲೋಲಾಕ್ಷಿ ಕೋಟ್ಯಾನ್, ಲತಾ ಪುತ್ರನ್, ಲೀಲಾ ಗಣೇಶ್, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಸಮಿತಿಯ ಅದ್ಯಕ್ಷ ಗೋಪಾಲಕೃಷ್ಣ ಗಾಣಿಗರು ಮಾತನಾಡಿ ಸದಸ್ಯರು ಹಿಂದಿನಂತೆ ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿ ಆದಷ್ಟು ಹೊಸ ಸದಸ್ಯರನ್ನು ಸೇರಿಸಬೇಕೆಂದು ವಿನಂತಿಸಿದರು ಹಾಗೂ ಸಮಿತಿಗೊಂದು ಸ್ವಂತ ಜಾಗದ ಅವಶ್ಯಕತೆ ಇದ್ದು ಎಲ್ಲರೂ ಪ್ರಯತ್ನಿಸಬೇಕೆಂದರು.
ದನ್ಯವಾದದೊಂದಿಗೆ ಮಹಾಸಭೆಯು ಮುಕ್ತಾಯವಾಯಿತು.
.