33.1 C
Karnataka
April 1, 2025
ಪ್ರಕಟಣೆ

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳ ಡೊಂಬಿವಲಿ : ಅ. 3ರಿಂದ ವಜ್ರ ಮಹೋತ್ಸವ ಆಚರಣೆ

ಕಳೆದ 59 ವರ್ಷಗಳಿಂದ ನವರಾತ್ರಿ ಉತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಡೊಂಬಿವಲಿಯ ಪಶ್ಚಿಮ ವಿಭಾಗ ನವತರಾತ್ರೋತ್ಸವ ಮಂಡಳವು 60ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ವಜ್ರ ಮಹೋತ್ಸವ ಆಚರಣೆ ಅಕ್ಟೋಬರ್ 3 ರಿಂದ 12ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡೊಂಬಿವಲಿ ಪಶ್ಚಿಮ ರೇತಿ ಭವನದಲ್ಲಿ ಜರಗಲಿದೆ.

ಕಾರ್ಯಕ್ರಮದ ವಿವರ :
ಸಾಂಸ್ಕೃತಿಕ ಕಾರ್ಯಕ್ರಮ
3.10.2024ನೇ ಗುರುವಾರ ಸಾಯಂ. 6:00 ರಿಂದ
ಊರಿನ ಸುಪ್ರಸಿದ್ಧ ಕಲಾವಿದರಾದ ಕಲ್ಲಡ್ಕ ಶ್ರೀ ವಿಠಲ್ ನಾಯಕ್ ಹಾಗೂ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ
ಪ್ರಯೋಜಕರು : ಉಳ್ಳೂರುಗುತ್ತು ಶ್ರೀ ಭಾಸ್ಕರ ಶೆಟ್ಟಿ
(ಮಹಾರಾಷ್ಟ್ರ ಜನರಲ್ ಸ್ಟೋರ್ ಹಾಗೂ ರಾಧಾಕೃಷ್ಣ ಹೋಟೆಲ್, ಡೊಂಬಿವಲಿ)
4.10.2024ನೇ ಶುಕ್ರವಾರ ಸಾಯಂ. 6:00 ರಿಂದ ಸ್ಥಾನಿಕ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಪ್ರಯೋಜಕರು : ದಿ| ಕಿಟ್ಟಣ್ಣ ಶೆಟ್ಟಿ ಯವರ ಸ್ಮರಣಾರ್ಥ ಮಕ್ಕಳಿಂದ
(ಹೋಟೆಲ್ ಮೋಡರ್ನ್ ಕೆಫೇ ಡೊಂಬಿವಲಿ ಪೂರ್ವ)
5.10.2024ನೇ ಶನಿವಾರ ಸಾಯಂ. 6:00 ರಿಂದ
ಕಲರ್ಸ್ ಕನ್ನಡ ಖ್ಯಾತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ
ಪ್ರಯೋಜಕರು : ದಿ| ಸಂಜೀವ್ ಕೆ. ಶೆಟ್ಟಿ ಯವರ ಸ್ಮರಣಾರ್ಥ ಶ್ರೀ- ಶ್ರೀಮತಿ ಶುಭಾ ಸುರೇಶ್‌ರವರಿಂದ
6.10.2024ನೇ ರವಿವಾರ ಸಾಯಂ. 6:00 ರಿಂದ ಮರಾಠಿ ಕಲಾವಿದರಿಂದ ವಿವಿಧ ಕಾರ್ಯಕ್ರಮ
ಸಿ ಎ ಅಸ್ಮಿತಾ ಚಂದ್ರಹಾಸ್ ರೈ
ಹಾಗೂ ಶ್ರೀಮತಿ- ಶ್ರೀ ಸತೀಶ್ ಕೊಟ್ಯಾನ್ (ಮಮತಾ ಡೆಂಟಲ್ ಲ್ಯಾಬ್ ಡೊಂಬಿವಲಿ ಪೂರ್ವ)
7.10.2024ನೇ ಸೋಮವಾರ ಸಾಯಂ. 6:00 ರಿಂದ ಶ್ರೀ ಶನೀಶ್ವರ ಮಹಾತ್ಮ
(ತುಳು ತಾಳ ಮದ್ದಳೆ)
ಪಶ್ಚಿಮ ವಿಭಾಗ ನವರಾತ್ರಿ ಮಂಡಳಿಯ ಮಹಿಳಾ ಸದಸ್ಯರಿಂದ
ಪ್ರಯೋಜಕರು : ಶ್ರೀಮತಿ- ಶ್ರೀ ಕರುಣಾಕರ್ ಶೆಟ್ಟಿ ಕಲ್ಲಡ್ಕ (ಹೋಟೆಲ್ ಸುಯೋಗ್ ಡೊಂಬಿವಲಿ ಪೂರ್ವ )
8.10.2024ನೇ ಮಂಗಳವಾರ ಸಾಯಂ. 6:00 ರಿಂದ
ಸುದರ್ಶನ ವಿಜಯ (ತುಳು ಯಕ್ಷಗಾನ)
ಬ್ರಾಮರಿ ಯಕ್ಷನೃತ್ಯ ಕಲಾನಿಲಯ ಚ್ಯಾರಿಟೆಬಲ್ ಟ್ರಸ್ಟ್ ಮುಂಬೈ ಇವರ ನುರಿತ ಕಲಾವಿದರಿಂದ ಪ್ರಯೋಜಕರು : ಶ್ರೀಮತಿ- ಶ್ರೀ ರಾಜೇಂದ್ರ ವಿ. ಶೆಟ್ಟಿ
(ಮಾಲಕರು : ಶ್ರೀ ಪಂಜುರ್ಲಿ ಗ್ರೂಪ್ ಅಪ್ ಹೊಟೇಲ್ಸ್ ಹುಬ್ಬಳ್ಳಿ )
9.10.2024ನೇ ಬುಧವಾರ ಸಾಯಂ. 6:00 ರಿಂದ
ಡೊಂಬಿವಲಿ ಪರಿಸರದ ಸಂಘ ಸಂಸ್ಥೆಯ ಕಲಾವಿದರಿಂದ ನಾಟ್ಯ ವೈಭವ ಪ್ರಯೋಜಕರು : ಶ್ರೀಮತಿ-ಶ್ರೀ ಪ್ರಭಾಕರ್ ಶೆಟ್ಟಿ (ಹೋಟೆಲ್ ಅಂಬಿಕ ಡೊಂಬಿವಲಿ ಪೂರ್ವ )
10.10.2024ನೇ ಗುರುವಾರ ಸಾಯಂ. 6:00 ರಿಂದ ಸುಪ್ರಸಿದ್ದ ಭರತ ನಾಟ್ಯ ವಿಶಾರದ ಹಾಗೂ ಗುರುಗಳಾದ ಶ್ರೀ ಪವಿತ್ರ ಭಟ್ ಅವರಿಂದ ಭರತ ನಾಟ್ಯ ವೈಭವ
ಪ್ರಯೋಜಕರು : ದಿ| ಸಂಜೀವ್ ಕೆ. ಶೆಟ್ಟಿಯವರ ಸ್ಮರಣಾರ್ಥ ಶ್ರೀಮತಿ ಕಸ್ತೂರಿ ಎಸ್. ಶೆಟ್ಟಿ ಹಾಗೂ ಶ್ರೀಮತಿ- ಶ್ರೀ ಸುನೀಲ್ ಎಸ್. ಶೆಟ್ಟಿ
(ವ್ಯಾಲ್ಯೂ ಸೆಕ್ಯೂರಿಟಿಸ್ ಮುಂಬಯಿ / ಮಂಗಳೂರು)
11.10.2024ನೇ ಶುಕ್ರವಾರ ಸಾಯಂ. 6:00 ರಿಂದ ಶ್ರೀ ದೇವಿ ಮಹಾತ್ಮ (ಯಕ್ಷಗಾನ ಬಯಲಾಟ)
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ (ಅಧ್ಯಕ್ಷರು: ಶ್ರೀ ಪ್ರವೀಣ ಶೆಟ್ಟಿ ಪುತ್ತೂರು) ಪ್ರಯೋಜಕರು : ಶ್ರೀಮತಿ ಲತಾ ಸಾಧು ಶೆಟ್ಟಿ
(ಹೋಟೆಲ್ ದ್ವಾರಕ ಡೊಂಬಿವಲಿ )

ಮಂಡಳಿಯ ಸಂಸ್ಥಾಪಕರಾದ ಇನ್ನ ಕುರ್ಕಿಲಬೆಟ್ಟು ಬಾಳಿಕೆ ದಿ| ದಾಸು ಬಾಬು ಶೆಟ್ಟಿಯವರ ಸಂಸ್ಮರಣಾರ್ಥವಾಗಿ ಕೊಡಲ್ಪಡುವ ಸನ್ಮಾನ ಸನ್ಮಾನಿತರು : ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು (ಅಧ್ಯಕ್ಷರು- ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ)

ದಿನಾಂಕ 06-10-2024 ನೇ ರವಿವಾರದ ವಿಶೇಷ ಪೂಜೆ ಹಾಗೂ ಶೃಂಗಾರದ ಸೇವೆ ಶ್ರೀಮತಿ/ಶ್ರೀ ಗಂಗಾಧರ ಸೇಸು ಪೂಜಾರಿ, ಮುಳುಂಡ್.

ಸೂಚನೆ : ಪ್ರತೀ ದಿನ ಭಜನಾ ಸೇವೆ ನಡೆಯಲಿರುವುದು. ಭಜನೆ ಮಾಡಲಿಚ್ಚಿಸುವ ಮಂಡಳಿಯವರು ಮುಂಚಿತವಾಗಿ ತಿಳಿಸಿದರೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು.
ಸಂಪರ್ಕ : ಶ್ರೀಮತಿ ಆರತಿ ರೈ – 9702467616/ ಶ್ರೀಮತಿ ಸುಜಾತ ಹೆಗ್ಡೆ – 8369889806

ಆಮಂತ್ರಿತ ಭಜನಾ ಮಂಡಳಿ :
04/10/2024 ನೇ ಶುಕ್ರವಾರ ಮಧ್ಯಾಹ್ನ 12:00 ರಿಂದ 2:30 ತನಕ ಶ್ರೀ ವಿಜಯ್‌ ಕುಮಾರ್ ಶೆಟ್ಟಿ ಮೂಡುಬೆಳ್ಳೆ ಇವರಿಂದ
07/10/2024 ನೇ ಸೋಮವಾರ ಮಧ್ಯಾಹ್ನ 12:00 ರಿಂದ 2:30 ತನಕ ಶ್ರೀ ಪುತ್ತೂರು ಚಂದ್ರಹಾಸ ರೈ ಹಾಗೂ ಬಳಗ
08/10/2024 ನೇ ಮಂಗಳವಾರ ಬೆಳಿಗ್ಗೆ 11:30 ರಿಂದ 2:00 ತನಕ ಶ್ರೀ ಹರೀಶ್ ಶೆಟ್ಟಿ, ಎರ್ಮಾಳ್ ಇವರಿಂದ

09/10/2024 ನೇ ಬುಧವಾರ ಮಧ್ಯಾಹ್ನ 12:00 ರಿಂದ 2:30 ತನಕ ಶ್ರೀ ಸುರೇಶ್ ಶೆಟ್ಟಿ, ಪನ್ವೆಲ್ ಇವರಿಂದ

ದಿ. 02-10-2024 ಬುಧವಾರ ಸಾಯಂ. 6:00 ಕ್ಕೆ ಶ್ರೀದೇವಿಯ ಆಗಮನಾ ಮೆರವಣಿಗೆ
ಡೊಂಬಿವಲಿ ಪೂರ್ವ, ಬ್ರಾಹ್ಮಣ ಸಭಾಗೃಹದ ಎದುರುಗಡೆಯಿಂದ ಮೆರವಣಿಗೆಯಲ್ಲಿ ಭಾಗವಹಿಸುವ ಭಕ್ತರಿಗೆ ಉಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ವ್ಯವಸ್ಥಾಪಕರು : ಶ್ರೀಮತಿ ಹಾಗೂ ಶ್ರೀ ಉಪೇಂದ್ರ ನಾಯಕ್, ನಿಂಜೂರು ಕಾರ್ಕಳ ತಾಲೂಕ್

12-10-2024 ಶನಿವಾರ ಸಾಯಂಕಾಲ 5:00 ರಿಂದ
ವಿಸರ್ಜನಾ ಮೆರವಣಿಗೆ

ವಿ. ಸೂ. : ಮಹಿಳೆಯರು ಹಾಗೂ ಪುರುಷರು ತಮ್ಮ ಪಾರಂಪರಿಕ ವಸ್ತ್ರದಲ್ಲಿ ಬರಬೇಕಾಗಿ ವಿನಂತಿ.

ಪೂಜಾ ಕಾರ್ಯಕ್ರಮ
. 03-10-2024 ಗುರುವಾರ ಬೆಳಿಗ್ಗೆ 8:00 ರಿಂದ ಗಣಹೋಮ ಬೆಳಿಗ್ಗೆ 9:30 ಕ್ಕೆ ವಜ್ರದ ಆಭರಣ ಮೆರವಣಿಗೆಯಿಂದ ತಂದು ಶ್ರೀದೇವಿಗೆ ಸಮರ್ಪಣೆ

06-10-2024 ರವಿವಾರ ಬೆಳಿಗ್ಗೆ 7:30 ರಿಂದ ಸಾಯಂ. 6:30 ತನಕ ಆಮಂತ್ರಿತ ಭಜನಾ ಮಂಡಳಿಯವರಿಂದ ಅಖಂಡ ಭಜನೆ

06-10-2024 ರವಿವಾರ ಸಾಯಂ. 7:00 ರಿಂದ ರಂಗಪೂಜೆ

08-10-2024 ಮಂಗಳವಾರ ಸಾಯಂ. 7:00 ರಿಂದ ರಂಗಪೂಜೆ
10-10-2024 ಗುರುವಾರ ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ (ಸಾರ್ವಜನಿಕ)

ದಿ. 11-10-2024 | ಶುಕ್ರವಾರ ಮಧ್ಯಾಹ್ನ 3:00 ರಿಂದ
ಹಳದಿ-ಕುಂಕುಮ ಕಾರ್ಯಕ್ರಮ
ಪ್ರತಿದಿನ ಬೆಳಿಗ್ಗೆ 11:00 ತನಕ ತುಲಾಭಾರ ಸೇವೆ
ಹೆಚ್ಚಿನ ಮಾಹಿತಿಗಾಗಿ : ಜಯಪ್ರಸನ್ನ ಶೆಟ್ಟಿ : 9322336911
For More Information Contact : Jayaprasanna Shetty : 9322336911

ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಜ್ರಮಹೋತ್ಸವದ ಈ ನವರಾತ್ರಿಯ ಸಂದರ್ಭದಲ್ಲಿ ಉಪಸ್ಥಿತರಿದ್ದು, ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗ ಬೇಕಾಗಿ ಮಂಡಳಿಯ ಪರವಾಗಿ ಧರ್ಮದರ್ಶಿಗಳಾದ ಶ್ರೀ ಅಶೋಕ್ ಡಿ ಶೆಟ್ಟಿ, ಅಧ್ಯಕ್ಷರಾದ ಗೋಪಾಲ್ ಕೆ ಶೆಟ್ಟಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಯವರಾದ ಶ್ರೀಮತಿ ವಿಲಾಸಿನಿ ಸುರೇಶ್ ಶೆಟ್ಟಿ, ಕಾರ್ಯಕಾರಿ ಸಮಿತಿ ಹಾಗೂ ಮಂಡಳಿಯ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ಕುಲಾಲ ಸಂಘ ಮುಂಬಯಿ, ಮಾ.8ಕ್ಕೆ ಕುಲಾಲ ಭವನ ಮಂಗಳೂರು, ಇದರ ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ.

Mumbai News Desk

ಶ್ರೀ ರಜಕ ಸಂಘ ಮುಂಬಯಿ, ಜ.6 ರಂದು ಸಾಮೂಹಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ

Mumbai News Desk

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ: ಆಗಸ್ಟ್ -18 ರಂದು 47 ನೇ ವಾರ್ಷಿಕ ಮಹಾಸಭೆ

Mumbai News Desk

    ಕುಲಾಲ ಸಂಘ ಮುಂಬಯಿ :  ಅ 27ರಂದು  94ನೇ ವಾರ್ಷಿಕ ಮಹಾಸಭೆ.

Mumbai News Desk

ಡಿ.10 ರಂದು ಬಿಲ್ಲವ ಭವನದಲ್ಲಿ ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಆಶ್ರಯದಲ್ಲಿ “ಪಿರಾವುಡು ಒರಿ ಉಲ್ಲೆ”ನಾಟಕ ಪ್ರದರ್ಶನ  

Mumbai News Desk