
ಸಮಾಜದ ಮೇಲೆ ಗೌರವವಿದ್ದಾಗ ಸಂಘದಲ್ಲಿ ಸೇವೆ ಮಾಡಲು ಅನುಕೂಲವಾಗುತ್ತದೆ,: ರಘು ಮೂಲ್ಯ ಪಾದೆ ಬೆಟ್ಟು.
ನವಿ ಮುಂಬಯಿ ಸೆ 27. ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಸೆ.21 ರಂದು ನವಿ ಮುಂಬಯಿ ಕನ್ನಡ ಸಂಘ ಪ್ಲಾಟ್ ನಂಬರ್ -2 ಸಿ, ಸೆಕ್ಟರ್ ನಂಬರ್ -9 ಏ, ವಾಶಿ ಬಸ್ ಡಿಪೋ ಸಮೀಪ ,ನವಿ ಮುಂಬಯಿ ಇಲ್ಲಿ ನಡೆಯಿತು..
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ರಘುಮೂಲ್ಯ ಪಾದೆ ಬೆಟ್ಟು ಅವರು ನವಿ ಮುಂಬೈಯ ಸಮಿತಿ ಸರ್ವ ಸದಸ್ಯರು ಎಲ್ಲಾ ವಿಧದಲ್ಲಿ ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ .ಯುವ ವಿಭಾಗ. ಮಹಿಳಾ ವಿಭಾಗ ಸ್ನೇಹ ಸಮ್ಮಿಲನ ಯಶಸ್ವಿಗೆ ವಿಶೇಷವಾಗಿ ಶ್ರಮಿಸಿದ್ದಾರೆ ಅಲ್ಲದೆ ದತ್ತ ಸ್ವೀಕಾರ. ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ್ದಾರೆ. ಸಂಘದ ಬಹ ಕೋಟಿ ವೆಚ್ಚದ ಮಂಗಳೂರಿನ ಕುಲಾಲ ಭವನ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣವಾಗುತ್ತಿದೆ. ಬಹಳಷ್ಟು ತಡವಾಗಿದ್ದರು ಸುಸರ್ಜಿತ ವಾಗಿ ನಿರ್ಮಾಣಗೊಳ್ಳುತ್ತಿದೆ. ಸಮಾಜ ಬಾಂಧವರು ನೀಡಿದ ಸಹಕಾರ. ದಾನಿಗಳ ನೆರವು ಸಮಾಜದಲ್ಲಿ ಸದಾ ನೆನಪಾಗಿ ಉಳಿಯುತ್ತದೆ. ಯುವ ಸಮುದಾಯ ಸಂಘದ ಕಚೇರಿಯಲ್ಲಿ ನಡೆಯುವ ಕೆಲಸ ಕಾರ್ಯಗಳಲ್ಲಿ ಸಮಯವನ್ನು ನೀಡಿ ಸೇವೆ ಮಾಡಬೇಕು. ವಿದ್ಯಾವಂತರು ತಮ್ಮ ವೃತ್ತಿಪರ ಬದುಕಿನ ನಡೆಯುವ ಕೂಡ ಸಂಘದ ಮೇಲೆ ಗೌರವಿರಿಸಿ ಸೇವೆ ಮಾಡಬೇಕು.
ನಿವೃತ್ತಿ ಹೊಂದಿದ ಹಿರಿಯರು ಸಂಘದ ಸೇವೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಯೋಜನೆಗಳು ಸುಸಂಗವಾಗಿ ನಡೆಯಲು ಇದು ಸಾಧ್ಯವಾಗುತ್ತದೆ. ಇಂದಿನ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿದ ಸನ್ಮಾನಿತರು ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದವರು ಅವರ ಸೇವಾಕರಿಗಳು ಇನ್ನಷ್ಟು ಅಗತ್ಯವಿದೆ. ಎಂದು ನುಡಿದರು.

ಸಂಘದ ಉಪಾಧ್ಯಕ್ಷ ಡಿ ಐ ಮೂಲ್ಯ ಮಾತನಾಡುತ್ತಾ ಸ್ಥಳೀಯ ಸಮಿತಿಯ ಕಾರ್ಯಕ್ರಮಗಳು ಯುವಕರಿಗೆ .ಮಹಿಳೆಯರಿಗೆ ನೀಡಿದರೆ ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಾರೆ .ಈ ಸಮಿತಿ ಸಂಘದ ಚಟುವಟಿಕೆಗಳಿಗೆ ಸ್ಪೂರ್ತಿಯಾಗುವ ಕಾರ್ಯಗಳನ್ನು ಮಾಡುತ್ತಿದೆ. ಸಂಘದಲ್ಲಿ ಕೆಲಸ ಕಾರ್ಯಗಳು ಹೆಚ್ಚಾಗಿರುವುದರಿಂದ ಇದನ್ನು ಕರುಣಾಕರ್ ಸಾಲಿಯನ್ .ಜಯ ಅಂಚನ್ಅವರು 8 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ .ಅವರ ಒತ್ತಡದ ಕೆಲಸದ ನಡುವೆ ಕೂಡ ಸಮಾಜಕ್ಕೆ ಬಹಳಷ್ಟು ಸಮಯವನ್ನು ನೀಡುತ್ತಾರೆ. ಯುವ ಸಮುದಾಯ ಸಮಯವಿದ್ದಾಗ ಸಂಘದ ಕಾರ್ಯಾಲಯದಲ್ಲಿ ನಡೆಯುವ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಮಂಗಳೂರಿನಲ್ಲಿ ನಿರ್ಮಾಣವಾಗಿರುವ ಕುಲಾಲ ಭವನವನ್ನು ಸಮಾಜ ಬಾಂಧವರು ಊರಿಗೆ ಹೋದಾಗ ನೋಡಬೇಕು ಇದು ನಿಮ್ಮೆಲ್ಲರ ಜವಾಬ್ದಾರಿಎಂದು ನುಡಿದರು .
ಸಂಘದ ಮೀರಾ ರೋಡ್ -ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ ಮೂಲ್ಯ ಮಾತನಾಡುತ್ತಾ ಸಮಾಜದ ಮಕ್ಕಳಿಗೆ ವಿದ್ಯೆಯೊಂದಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳಿ .ಭಗವದ್ಗೀತೆಯನ್ನು ದಿನಕ್ಕೊಂದು ಬಾರಿಯಾದರೂ ಪಠಿಸಲು ಪ್ರೇರಣೆ ಮಾಡಿ. ದಾನ ಮಾಡುವ ಪ್ರವೃತಿಯನ್ನು ಬೆಳೆಸಿ .ಸಂಪತ್ತನ್ನು ಮಕ್ಕಳ ಆಡಂಬರದ ಜೀವನಕ್ಕೆ ಯುನಿಯೋಗಿಸುವಂತಾಗಬಾರದು. ಅವರಿಗೂ ಬದುಕಿನ ಕಷ್ಟಗಳು ಅನುಭವಾಗಬೇಕು. ಸನಾತನ ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ ಅದಕ್ಕೆ ಯುವ ಸಮುದಾಯ ಮುಂದೆ ಬರಬೇಕು. ಹಿಂದುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳು ಹೆಚ್ಚಾದಾಗ ಶಿಕ್ಷಣ ನೀಡಲು ಎಲ್ಲಾ ರೀತಿಯ ತೊಂದರೆಗಳಾಗುತ್ತದೆ ಎನ್ನುವ ನಮ್ಮ ದೂರ ಆಲೋಚನೆಯನ್ನು ದೂರ ಮಾಡಿ. ಸರಕಾರ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿದೆ ಅದನ್ನು ಯುನಿಯೋಗಿಸಿಕೊಳ್ಳಿ. ಸಂಪತ್ತು ಇದ್ದವರು ಸಮಾಜಕ್ಕೆ ನೀಡಿ ಸಮಾಜವನ್ನು ಬೆಳೆಸಿ ಎಂದು ನುಡಿದರು.

ಸಂಘದ ಮಂಗಳೂರಿನ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ ಮಾತನಾಡಿ ಮಂಗಳೂರಿನ ಕುಲಾಲ ಭವನಕ್ಕೆ ಸರಕಾರದ ಅನುದಾನವನ್ನು ಪಡೆದುಕೊಂಡಿದ್ದೇವೆ. ಸರಕಾರದ ಬಹಳಷ್ಟು ಒತ್ತಡಗಳಿದೆ ವೇಗದಲ್ಲಿ ಕೆಲಸಪೂರ್ತಿಗೊಳಿಸಿ ಕುಲಾಲ ಭವನ ಲೋಕರ್ಪಣೆಗೊಳ್ಳಬೇಕಾಗಿದೆ ಅದಕ್ಕೆ ಮುಂಬೈ ಕುಲಾಲ ಸಂಘ ಶೀಘ್ರಗತಿಯಲ್ಲಿ ಭವನದ ಕೆಲಸ ಕಾರ್ಯಗಳನ್ನು ಪೂರ್ತಿಗೊಳಿಸಬೇಕು ಅದು ನಮ್ಮೆಲ್ಲರ ಶಕ್ತಿಕೇಂದ್ರವಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಕರುಣಾಕರ್ ಸಾಲಿಯನ್. ಕೋಶಧಿಕಾರಿ. ಜಯ ಅಂಚನ್. ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಸಾಲಿಯಾನ್. ಮಹಿಳಾ ವಿಭಾಗದ ಜೊತೆ ಕೋಶ ಧಿಕಾರಿ ರೇಣುಕಾ ಸಾಲಿಯನ್. ಜ್ಯೋತಿ ಕೋ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪಿ ಶೇಖರ್ ಮುಲ್ಯ . ವಿವಿಧ ಸ್ಥಳೀಯ ಸಮಿತಿಯ ಕಾರ್ಯ ಧ್ಯಕ್ಷರುಗಳಾದ ಶಂಕರ್ ವೈ ಮೂಲ್ಯ .ಆನಂದ ಕುಲಾಲ್ ಜೋಗೇಶ್ವರಿ. ಸಂಜೀವ ಬಂಗೇರ ಸಯನ್. ಲಕ್ಷ್ಮಣ್ ಸಿ ಮೂಲ್ಯ. ಹಾಗೂ ನವಿ ಮುಂಬೈ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಏಸ್ ಬಂಗೇರ,
ಉಪಕಾರ್ಯಧ್ಯಕ್ಷ ಸದಾನಂದ ಕುಲಾಲ್,ಕಾರ್ಯದರ್ಶಿ ಎಲ್ ಆರ್ ಮೂಲ್ಯ ಕೆಂಜಾರು,ಕೋಶಾಧಿಕಾರಿ ಸೂರಜ್ ಏಸ್ ಕುಲಾಲ್,ಜೊತೆ ಕಾರ್ಯದರ್ಶಿ ಕ್ರಪೇಶ್ ಕುಲಾಲ್ .ಜೊತೆ ಕೋಶಾಧಿಕಾರಿ ಆನಂದ್ ಮೂಲ್ಯ ಖಾಮೋಟೆ.ಕ್ರೀಡೆ ಮತ್ತು ಸಾಂಸ್ಕೃತಿಕ ಸಂಚಾಲಕ ಪ್ರಸಾದ್ ಎಸ್ ಮೂಲ್ಯ.. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಏಸ್ ಕುಲಾಲ್ . ಕಾರ್ಯದರ್ಶಿ ಬೇಬಿ ವಿ ಬಂಗೇರ .ಕೋಶಾಧಿಕಾರಿ ಉಷಾ ಆರ್ ಮೂಲ್ಯ . ಉಪ ಕಾರ್ಯದರ್ಶಿ ಶೋಭಾ ಏನ್ ಬಂಗೇರ .ಉಪ ಕೋಶಾಧಿಕಾರಿ ಸುಶೀಲಾ ಪಿ ಬಂಗೇರಾ,ಸಾಂಸ್ಕೃತಿಕ ಮತ್ತು ಕ್ರೀಡೆ ಪ್ರೇಮ ಎಲ್ ಮೂಲ್ಯ ಮತ್ತಿತರರು ಉಪಸ್ಥರಿದ್ದರು
ಈ ಸಂದರ್ಭದಲ್ಲಿ ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟ ಕಾರ್ಯಾಧ್ಯಕ್ಷ ಹಾಗೂ ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲಿಯಾನ್. ಸಂಘದ ಕಾರ್ಯದರ್ಶಿ ಕರುಣಾಕರ ಸಾಲಿಯಾನ್. ಮತ್ತು ನವಿ ಮುಂಬೈ ಸ್ಥಳೀಯ ಸಮಿತಿಯ ಜೊತೆ ಕೋಶಾಧಿಕಾರಿ ಆನಂದ್ ಆರ್ ಮೂಲ್ಯ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಹಾಗೂ
ವಿಶೇಷ ಪ್ರತಿಭೆ ಪುರಸ್ಕಾರವನ್ನು
ಡಾ.ಶ್ರುತಿ ಜಯ ಅಂಚನ್ .MBBS.
ಪೂಜಾ ಶೇಖರ್ ಮೂಲ್ಯ .C.A.
ಇಶಾನ್ ಜಯ ಅಂಚನ್ HSC.Science. CBSE 93.20%.
ಶ್ರೀಶಾ ಕುಶಲಪ್ಪ ಮೂಲ್ಯ SSC. 93.60%.
ಮತ್ತು ನವಿ ಮುಂಬಯಿ ಪರಿಸರದ ಕುಲಾಲ ಸಮಾಜದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಪದವಿ ದಾರರ ಹೆಸರನ್ನು ಜಯ ಅಂಚನ್ ಮತ್ತು ಸೂರಜ್ ಕುಲಾಲ್ ಓದಿ ಅವರಿಗೆ ಪ್ರತಿಭೆ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಹಾಗೂ ಸ್ಥಳಿಯ ವಿದ್ಯಾರ್ಥಿ ಒಬ್ಬಳಿಗೆ ಶಿಕ್ಷಣಕ್ಕೆ ಆರ್ಥಿ ಕೆ ನೆರವು ನ್ನು ಯುವ ವಿಭಾಗ ಮತ್ತು ಮಹಿಳಾ ವಿಭಾಗ ಒಟ್ಟಾಗಿ ನೀಡಿದರು.
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಗ್ಗೆ ಶೈಕ್ಷಣಿಕ ಮಾಹಿತಿಯನ್ನು. ದಾರಾ ಬಂಗೇರ ನೀಡಿದರು.
ಸಂಘದ ಸ್ಥಳೀಯ ಸಮಿತಿಯ ಸದಸ್ಯರಿಂದ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನವಿ ಮುಂಬಯಿ ಸ್ಥಳೀಯ ಸಮಿತಿಯ ಸದಸ್ಯರಿಂದ ಗಂಗಾಧರ ಬಂಟ್ವಾಳ ರಚಿಸಿದ ,ಧನಂಜಯ ಮೂಳೂರು ನಿರ್ದೇಶನದ , ಎರೆಗಾವು ಕಿರಿ ಕಿರಿ
ತುಳು ಕಿರು ಸಾಮಾಜಿಕ ಹಾಸ್ಯ ನಾಟಕ ಹಾಗೂ ಮಹಿಲಾ ವಿಭಾಗದ ವತಿಯಿಂದ ಅನಿಲ್ ಹೆಗ್ಡೆ ಪೆರ್ಡೂರು ಇವರು ಬರೆದ ಕಿರು ತುಳುನಾಟಕ ” ಮಾಮಿ ಮರ್ಮಲ್ “ಪ್ರದರ್ಶನವಿದೆ.
ಸಭಾ ಕಾರ್ಯಕ್ರಮವನ್ನು ಕಾರ್ಯದರ್ಶಿ ಎಲ್ ಆರ್ ಮೂಲ್ಯ,ಮತ್ತು ಜೊತೆ ಕಾರ್ಯದರ್ಶಿ ಕೃಪೇಶ್ ಕುಲಾಲ್ ನಿರೂಪಿಸಿದರು . ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ವಾಸು ಬಂಗೇರ ಸ್ವಾಗತಿಸಿದರು.ಸನ್ಮಾನಿತರ ಪತ್ರವನ್ನು ಜಯ ಅಂಚನ್ ,ಭವ್ಯ ಕುಲಾಲ್ ,ರೇಖಾ ಮೂಲ್ಯ ,ವಾಚಿಸಿದರು.ಪೂಜಾ ನೃತ್ಯವನ್ನು ನವಿಸ್ತಾ ಆರ್ ಮೂಲ್ಯ, ನಡೆಸಿದರು.
ಪ್ರಾರ್ಥನೆಯನ್ನು ಬೇಬಿ ಬಂಗೇರ ,ಉಷಾ ಆರ್ ಮೂಲ್ಯ ,ಭವ್ಯ ಕುಲಾಲ್. ಮಾಡಿದರು
ಪ್ರತಿವರ್ಷದಂತೆ ಈ ವರ್ಷವೂ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯ ಧ್ಯಕ್ಷೆ ದೇವಕಿ ಸುನಿಲ್ ಸಾಲಿಯಾನ್ ರವರ ವತಿಯಿಂದ 6 ಲಕ್ಕಿ ಬಹುಮಾನ ವನ್ನು ಸಭಿಕರಿಗಾಗಿ ನೀಡಲಾಗಿತ್ತು..
ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಮಾಲತಿ ಜಯ ಅಂಚನ್. ಪ್ರಸಾದ್ ಮೂಲ್ಯ ,ಸೂರಜ್ ಕುಲಾಲ್,ದೀಕ್ಷಾ ಕುಲಾಲ್ ,ಚೈತನ್ಯ ಸಂದೀಪ್ ಕುಲಾಲ್ ಸಹಕರಿಸಿದರು. ಪ್ರೇಮ ಎಲ್ ಮೂಲ್ಯ ಧನ್ಯವಾದ ಮಾಡಿದರು.
——-
ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸುವ: ಗಿರೀಶ್ ಬಿ. ಸಾಲ್ಯಾನ್.
ಸನ್ಮಾನಿತರಾದ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲಿನ್ ಮಾತನಾಡುತ್ತಾನೆ ನವಿ ಮುಂಬೈ ಸಮಿತಿಯ ಎಲ್ಲಾ ಸದಸ್ಯರು ಬಹಳ ಉತ್ಸಾಹದಿಂದ ಈ ಕಾರ್ಯಕ್ರಮವನ್ನು ನಡೆಸಿದ್ದಾರೆ. ಸಮಾಜವನ್ನು ಸಂಘವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ. ಸಂಘದ ಜ್ಯೋತಿಕಾ ಸೊಸೈಟಿಯ ಯೋಜನೆಗಳನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಮತ್ತು ಹೆಚ್ಚಿನ ವ್ಯವಹಾರಗಳನ್ನು ಇಲ್ಲಿಂದಲೇ ಮಾಡಬೇಕು. ಎಂದು ನುಡಿದರು
ಸಂಘದ ಸೇವಾ ಕಾರ್ಯಯ ಸಮಾಜ ಬಂಧುಗಳ ಜವಾಬ್ದಾರಿ ; ಕರುಣಾಕರ ಸಾಲಿಯನ್
ಸನ್ಮಾನವನ್ನು ಸ್ವೀಕರಿಸಿದ ಕರುಣಾಕರ್ ಸಾಲಿಯನ್ ಮಾತನಾಡಿ ವರ್ಷಪೂರ್ತಿ ಸಂಘ ಸಮಾಜದ ಅಭಿವೃದ್ಧಿಗಾಗಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಮುಂದಿನ ತಿಂಗಳು ಅಕ್ಟೋಬರ್ 27ರಂದು ವಾರ್ಷಿಕ ಮಹಾಸಭೆ ನಡೆಯಲಿದೆ. ಈ ವರ್ಷ ಸಂಘದ ಆಡಳಿತ ಸಮಿತಿಗೆ ರಚನೆಯಾಗಲಿದೆ ಹೊಸ ಮುಖಗಳು ಸಮಾಜದ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಅದರಿಂದ ಹೊಸ ಯೋಜನೆಗಳು ರೂಪುಗೊಳ್ಳುತ್ತಿದೆ. ಮಂಗಳೂರಿನ ಕುಲಾಲ ಭವನ ಜಿಲ್ಲೆಗೆ ಶೋಭೆ ತರಲಿದೆ ಸಂಘವನ್ನು ಗೌರವಿಸಿ ಸಂಘ ನಿಮ್ಮೊಂದಿಗೆ ಸದಾ ವಿರುತ್ತದೆ. ಕಷ್ಟದ ಸಮಯದಲ್ಲಿ ಬಂಧುಗಳಿಗೆ ನೆರವಾಗಬೇಕಿದ್ದರೆ ನಾವು ಸಂಘದಲ್ಲಿ ತೊಡಗಿ ಕೊಳ್ಳಬೇಕು ಎಂದು ನುಡಿದರು.
——
ಸನ್ಮಾನ ನನ್ನ ಸೇವ ಕಾರ್ಯಕ್ಕೆ ಸ್ಪೂರ್ತಿ ನೀಡಿದೆ.: ಆನಂದ್ ಆರ್ ಮೂಲ್ಯ
ಸನ್ಮಾನವನ್ನು ಸ್ವೀಕರಿಸಿದ ಆನಂದ ಆರ್ ಮೂಲ್ಯ ಮಾತನಾಡುತ್ತಾ ಕುಲಾಲ ಸಂಘದಲ್ಲಿ ಹಲವಾರು ಜವಾಬ್ದಾರಿಯನ್ನು ನಿರ್ವಹಿಸಿದ ಸಂತೋಷ ನನಗಿದೆ. ಇಂದು ನನ್ನನ್ನು ಗುರುತಿಸಿ ಸನ್ಮಾನಿಸಿದ ಈ ಸನ್ಮಾನ ನನ್ನ ಸೇವಾ ಕಾರ್ಯಗಳಿಗೆ ಸ್ಪೂರ್ತಿಯಾಗಿದೆ ಎಂದು ನುಡಿದರು.