ಶಿವಸೇನೆ (ಯುಬಿಟಿ)ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವುತ್ ಮಾನವನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದು ಅವರಿಗೆ 15 ದಿನಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ, ನ್ಯಾಯಾಲಯ ಆದೇಶ ಹೊರಡಿಸಿದೆ.
ಭಾರತೀಯ ಜನತಾ ಪಕ್ಷದ ನಾಯಕ ಕಿರೀಟ್ ಸೋಮಯ್ಯ ಅವರ ಪತ್ನಿ ಪರವಾಗಿ ರಾವುತ್ ವಿರುದ್ಧ ಪ್ರಕರಣ ದಾಖಲಾಗಿದ್ದು ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ರಾಜ್ಯಸಭಾ ಸದಸ್ಯ ರಾವುತ್ ಅವರನ್ನು ಭಾರತೀಯ ದಂಡ ಸಹಿತೆಯ ಸೆಕ್ಷನ್ 500( ಮಾನನಷ್ಟ ಶಿಕ್ಷೆ )ರ ಅಡಿಯಲ್ಲಿ ದೋಷಿ ಎಂದು ಘೋಷಿಸಿದೆ. ಕಿರಿಟ್ ಸೋಮಯ್ಯ ಅವರ ಪತ್ನಿ, ಮೇಧಾ ಸೋಮಯ್ಯ ಅವರು ವಕೀಲ ವಿವೇಕಾನಂದ ಗುಪ್ತ ಮೂಲಕ ಸಲ್ಲಿಸಿದ ದೂರಿನಲ್ಲಿ ರಾವುತ್ ತಮ್ಮ ಮತ್ತು ತಮ್ಮ ಪತಿ ವಿರುದ್ಧ ಆಧಾರ ರಹಿತ ಮತ್ತು ಸಂಪೂರ್ಣ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು.ಅವರ ದೂರನ್ನು ಪರಿಶೀಲನೆ ಮಾಡಿದ ನ್ಯಾಯಾಲಯ ರಾವುತ್ ಅವರನ್ನು ದೋಷಿ ಎಂದು ಘೋಷಿಸಿ ಇಂದು (ಸೆ. 26) ಆದೇಶ ಹೊರಡಿಸಿದೆ.
