
ಥೈಲ್ಯಾಂಡ್, ಸೆ.28- ಥಾಯ್ಲೆಂಡ್‌ನ ಬ್ಯಾಂಕಾಕ್ ನಲ್ಲಿ ನಡೆದ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಥಾಣೆಯ ದಿವಿನಾ ಸಿ.ಕಣ್ಣಂಗಾರ್ 3 ಚಿನ್ನದ ಪದಕಗಳ ಸಾಧನೆ ಗೈದಿದ್ದಾಳೆ. ಈಕೆ ಥಾಣೆಯ ದಶರಥ್ ಬಂಡ್ ಅವರಿಂದ ಸ್ಕೇಟಿಂಗ್ ಕೋಚಿಂಗ್ ಪಡೆಯುತ್ತಿದ್ದಾಳೆ.ಥೈಲ್ಯಾಂಡ್ ನಲ್ಲಿ ಮಹಾರಾಷ್ಟ್ರದ ಪರವಾಗಿ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮುಂಬಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ವೈದ್ಯಕೀಯ ಸಹಾಯಕ ನಿಧಿಯ ಮುಖ್ಯಸ್ಥ ಮಂಗೇಶ್ ಚಿವಟೆಯವರು ದಿವಿನಾ ಕಣ್ಣಂಗಾರ್ ಅವಳನ್ನು ಗೌರವಿಸಿದರು. ಕೌಡೂರು ರಂಗನಪಲ್ಕೆ,ಎಲಿಯಾಲ್ ದರ್ಕಾಸ್ ಮನೆ ವನಿತಾ ಸಿ.ಕಣ್ಣಂಗಾರ್ ಮತ್ತು ಚೇತನ್ ಪಿ. ಕಣ್ಣಂಗಾರ್ ದಂಪತಿಯ ಪುತ್ರಿ ದಿವಿನಾ ಕಣ್ಣಂಗಾರ್ ಅವಳು ಥಾಣೆ ಕಾಪೂರ್ ಬಾವ್ಡಿ ಸಿ.ಪಿ.ಗೋಯೆಂಕಾ ಇಂಟರ್‌ನ್ಯಾಷನಲ್ ಸ್ಕೂಲ್ ಇದರ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವಳು.
.
.
.