
ಚಿತ್ರ ವರದಿ : ಧನಂಜಯ ಪೂಜಾರಿ
ಮುಂಬಯಿಯ ಉಪನಗರ ಡೊಂಬಿವಲಿಯ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿಯ ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯುತ್ತಿದ್ದು ಸಾವಿರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ನಿಮಿತ್ತ ಹಲವಾರು ಸ್ಥಳೀಯ ಸಂಘ-ಸಂಸ್ಥೆಗಳು ಮಂಡಳಿಗೆ ಹೊರೆ ಕಾಣಿಕೆ ಸಮರ್ಪಿಸುತಿವೆ. ಅದರಲ್ಲಿ ಮುಖ್ಯವಾಗಿ ಶ್ರೀ ಸಾಯಿನಾಥ ಮಿತ್ರ ಮಂಡಳಿ, ಅಕ್ಟೋಬರ್ 6 ರ ರವಿವಾರ ಶ್ರೀ ಸಾಯಿನಾಥ ಮಿತ್ರ ಮಂಡಳಿ ಇವರಿಂದ ಹೊರೆ ಕಾಣಿಕೆ ಮೆರವಣಿಗೆ ಮೂಲಕ ನಡೆಯಿತು. ಜುನ ಡೊಂಬಿವಲಿಯ ಗಿರಿಜಾಮಾತ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಬ್ಯಾಂಡ್ ವಾಲಗದ ಮೂಲಕ ಪಶ್ಚಿಮ ವಿಭಾಗ ಪೂಜಾ ಸ್ಥಳಕ್ಕೆ ತಲುಪಿತು. ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲಾಸಿನಿ ಶೆಟ್ಟಿ ಹಾಗೋ ಪದಾಧಿಕಾರಿಗಳು ಮೆರವಣಿಗೆಯನ್ನು ಆದರಪೂರ್ವಕವಾಗಿ ಸ್ವಾಗತಿಸಿದರು.
ಸಾಯಿನಾಥ ಮಿತ್ರ ಮಂಡಳಿ ಅಧ್ಯಕ್ಷ ಮೋಹನ್ ಸಾಲ್ಯಾನ್, ಕಾರ್ಯದರ್ಶಿ ಸುರೇಶ್ ಮೊಗವೀರ, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

















