ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಸಾವರ್ಕರ್ ನಗರ, ಥಾಣೆ ಪಶ್ಚಿಮ, ಇಲ್ಲಿ ನವರಾತ್ರಿ ಪೂಜೆಯ ನಿಮಿತ್ತ ಅಕ್ಟೊಬರ್ 08 ರಂದು ಬೆಳಿಗ್ಗೆ ಗಂಟೆ 09.00 ಕ್ಕೆ ” ಶ್ರೀ ದುರ್ಗಾ ಹೋಮ” ಮತ್ತು ಬೆಳಿಗ್ಗೆ ಗಂಟೆ 11:00 ಕ್ಕೆ ” ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ” ಸೇವೆಯು ದೇವಿ ಪಾತ್ರಿ ಪ್ರಸಾದ್ ಸಾಲ್ಯಾನ್ ಕಲ್ಯಾ ಅವರಿಂದ ನಡೆಯಲಿದೆ.
ಸಂಜೆ ಗಂಟೆ 5ರಿಂದ ಸಾಯಿ ನಿತ್ಯಾನಂದ ಭಜನಾ ಮಂಡಳಿ, ಕಲ್ಯಾಣ್ ರೋಡ್ ಭಿವಂಡಿ ಇವರಿಂದ ಭಜನಾ ಕಾರ್ಯಕ್ರಮ ಜರಗಲಿದೆ.
ಭಕ್ತಾಭಿಮಾನಿಗಳು ಪೂಜೆಯಲ್ಲಿ ಪಾಲ್ಗೊಂಡು ದೈವ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ : 9004318009 ಸಂಪರ್ಕಿಸಿ.