
ಮೀರಾ – ಭಾಯಂದರ್ ಪರಿಸರದ ಬಂಟ ಬಂಧುಗಳ ಪ್ರತಿಷ್ಟಿತ ಸಂಸ್ಥೆ ಬಂಟ್ಸ್ ಫೋರಮ್ ಇದರ ಪದಾಧಿಕಾರಿಗಳು ಸದಸ್ಯರು ಅಕ್ಟೊಬರ್ 3ರಂದು ತಿರುಪತಿ ಪ್ರವಾಸಗೈದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ಸಂಸ್ಥೆಯ ಅದ್ಯಕ್ಷ ಉದಯ ಎಮ್. ಶೆಟ್ಟಿಯವರ ಮುಂದಾಳತ್ವದಲ್ಲಿ, ಚಂದ್ರಹಾಸ್ ಕೆ. ಶೆಟ್ಟಿ ಇನ್ನ, ಹರೀಶ್ ಶೆಟ್ಟಿ ಕಾಪು, ಅನಿಲ್ ಶೆಟ್ಟಿ ಎಲ್ಲೂರು ಒಡಿಪರಗುತ್ತು ಹಾಗೂ ಸುಖವಾಣಿ ಶೆಟ್ಟಿಯವರ ಸಹಕಾರದಿಂದ ನಡೆದ ಈ ಧಾರ್ಮಿಕ ಪ್ರವಾಸದಲ್ಲಿ ಸಂಸ್ಥೆಯ 40 ಮಂದಿ ಸದಸ್ಯರು ಭಾಗವಹಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.