30 C
Mumbai
April 24, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಮಹಿಳಾ ವಿಭಾಗದಿಂದ ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್





Hggxಮುಂಬಯಿ : ಇಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಬೆಂಗಳೂರಿನ ಉಪಾಧ್ಯಕ್ಷೆ ಕಾಂತಿ ಶೆಟ್ಟಿ ಯವರು ಅವರ ಸಾಧನೆಯಿಂದ ಮಹಿಳೆಯರಿಗೆ ಮಾದರಿ. ಅಂತೆಯೇ ಮುಂಬಯಿ ಬಂಟರ ಸಂಘವು ಇತರ ಬಂಟರ ಸಂಘಕ್ಕೆ ಮಾದರಿ. ಮುಂಬಯಿ ಬಂಟರ ಸಂಘದಲ್ಲಿರುವಷ್ಟು ಒಗ್ಗಟ್ಟು ಇತರ ಯಾವುದೇ ಬಂಟರ ಸಂಘದಲ್ಲಿಲ್ಲ. ಅವೆನ್ಯೂ ಹೋಟೇಲಿನ ಮಾಲಕರಾದ ರಘುರಾಮ ಶೆಟ್ಟಿಯವರು ಅಸೌಕ್ಯದಿಂದ ಚೇತರಿಸಿಕೊಂಡು ಇಂದು ನಮ್ಮ ಸಮಾರಂಭಕ್ಕೆ ಆಗಮಿಸಿದ್ದು ನಮ್ಮೆಲ್ಲರ ಸೌಬಾಗ್ಯ. ಅವರು ಮಾಡಿದ ದಾನ ಧರ್ಮ ಹಾಗೂ ಉತ್ತಮ ಕಾರ್ಯಗಳಿಂದ ದೇವರ ಅನುಗ್ರಹ ಅವರಿಗಿದೆ, ಎಲ್ಲರಿಗೂ ನವರಾತ್ರಿಯ ಶುಭಾಶಯಗಳು, ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜಶೆಟ್ಟಿಯವರು ನುಡಿದರು.


ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ನಿಮಿತ್ತ ಅ. 4 ರಂದು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಇವರ ನೇತೃತ್ವದಲ್ಲಿ, ಯಕ್ಷಗಾನ ತಾಳಮದ್ದಳೆ ಮತ್ತು ದಾಂಡಿಯಾ ರಾಸ್ ಕಾರ್ಯಕ್ರಮವು ಕಾಂದಿವಲಿ ಪೂರ್ವ ಅವೆನ್ಯೂ ಹೋಟೇಲಿನ ಸಭಾಂಗಣದಲ್ಲಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದು ಮಕ್ಕಳ ಪ್ರಾರ್ಥನೆಯೊಂದಿಗೆ ದೇವಿಗೆ ಆರತಿ ಬೆಳಗಿಸಿದ ಬಳಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ ಯವರು ಸಮಾರಂಭಕ್ಕೆ ಆಗಮಿಸಿದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ನವರಾತ್ರಿಯ ಶುಭಾಶಯಗಳನ್ನು ಅರ್ಪಿಸಿದರು.
ಮುಖ್ಯ ಅತಿಥಿಯಾಗಿ ಅಗಮಿಸಿದ ಬಂಟರ ಸಂಘ ಬೆಂಗಳೂರಿನ ಉಪಾಧ್ಯಕ್ಷೆ ಕಾಂತಿ ಶೆಟ್ಟಿ ಯವರು ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿಯವರಿಂದ ಗೌರವ ಸ್ವೀಕರಿಸಿ ಮಾತನಾಡುತ್ತಾ ಇಂದು ಈ ವೇದಿಕೆಯಲ್ಲಿ ನಡೆದ ಬಂಟರ ಸಂಘದ ಮಹಿಳಾ ವಿಭಾಗದ ಸದಸ್ಯರ ಯಕ್ಷಗಾನ ತಾಳಮದ್ದಳೆ ಯಕ್ಷಗಾನದ ನಿಜವಾದ ಕಲಾವಿದರಿಗಿಂತಲೂ ಬಹಳ ಉತ್ತಮವಾಗಿ ನಡೆದಿದೆ ಎನ್ನಲು ಸಂತೋಷವಾಗುತ್ತಿದೆ. ಇದನ್ನು ನೋಡುವ ಒಂದು ಸುವರ್ಣವಕಾಶ ನನಗೆ ದೊರಕಿದೆ. ಮುಂಬಯಿಯ ಬಂಟರ ಸಂಘವು ಅತೀ ದೊಡ್ಡ ಬಂಟರ ಸಂಘ. ಸಂಘದ ಪ್ರಾದೇಶಿಕ ಸಮಿತಿಯ ಮೂಲಕ ಸಂಘದ ಚಟುವಟಿಕೆಗಳು ಸಮಾಜದ ಪ್ರತಿಯೊಬ್ಬರಿಗೂ ತಲಪುತ್ತಿದ್ದು ಬೆಂಗಳೂರಲ್ಲೂ ಇದೇ ರೀತಿ ಪ್ರಾದೇಶಿಕ ಸಮಿತಿಯನ್ನು ಸ್ಥಾಪಿಸಬೇಕಾಗಿದೆ. ಸಂಘದ ಮಹಿಳೆಯರಿಂದ ನಮ್ಮ ತುಳು ನಾಡಿನ ಸಂಸ್ಕೃತಿಯು ಉಳಿಸಿ ಬೆಳೆಸಲಾಗುತ್ತಿದ್ದು ಇದೇ ರೀತಿ ಮಹಿಳೆಯರಿಗೆ ಸಂಘದಲ್ಲಿ ಸಮಾಜ ಸೇವೆ ಮಾಡಲು ಸೂಕ್ತ ಅವಕಾಶ ನೀಡಿತ್ತಿರಬೇಕು ಎಂದರು.


ಸಮಿತಿಯ ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಯವರು ಮಾತನಾಡುತ್ತಾ ಇಂದಿನ ಸಭೆಯಲ್ಲಿ ದೊಡ್ಡ ಮನಸ್ಸುಗಳು ತುಂಬಿದೆ. ಬಹಳ ಉತ್ತಮ ರೀತಿಯಲ್ಲಿ ಉತ್ಸಾಹಬರಿತವಾಗಿ ಅರ್ಥಪೂರ್ಣವಾಗಿ ಯಕ್ಷಗಾನ ತಾಳಮದ್ದಳೆಯನ್ನು ಪ್ರದರ್ಶಿಸಿದ್ದಾರೆ. ನವರಾತ್ರಿಗೆ ತನ್ನದೇ ಆದ ವಿಶೇಷತೆಯಿದೆ. ಇಂದು ದೇವಿಯ ದಿನ. ಸೂರ್ಯ ಚಂದ್ರರು ಬದಲಾಗಲಿಲ್ಲ ಆದರೆ ಜನರ ಮನಸ್ಸು ಬದಲಾಗುತ್ತಿದೆ. ಜನ ಸಾಮಾನ್ಯರ ಸೇವೆಯೊಂದಿಗೆ ಸಂತೋಷಕರ ಜೀವನ ನಮ್ಮೆಲ್ಲರದಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕವಿತಾ ಐ ಆರ್. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಸಲಹೆಗಾರರಾದ ಶೈಲಜಾ ಎ. ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು , ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ವನಿತ ವೈ. ನೋಂಡ ಮತ್ತು ಜೊತೆ ಕೋಶಾಧಿಕಾರಿ ಸರೋಜಾ ಬಿ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕರಾದ ನಿಟ್ಟೆ ಮುದಣ್ಣ ಜಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ,ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ,  ರವೀಂದ್ರ ಎಸ್. ಶೆಟ್ಟಿ ಎರ್ಮಾಳು ಹರೀಶ್ ಶೆಟ್ಟಿ  ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಚಂದ್ರಿಕಾ ಶೆಟ್ಟಿ, ಪದ್ಮಾವತಿ ಶೆಟ್ಟಿ, ವಿನೋದಾ ಡಿ. ಶೆಟ್ಟಿ, ವಿನೋದಾ ಎ. ಶೆಟ್ಟಿ, ಇತರ ಪ್ರಾದೇಶಿಕ ಸಮಿತಿಗಳ ಹಾಗೂ ಉಪವಿಭಾಗಗಳ ಕಾರ್ಯಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳೂ ಮತ್ತು ಸದಸ್ಯರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಮಕ್ಕಳಿಂದ ಸ್ಲೋಕ ಬಳಿಕ ಗೌರಿ ಪ್ರಸಾದ್ ಶೆಟ್ಟಿ ಯವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಿತಿಯ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ರಘುನಾಥ ಎನ್ ಶೆಟ್ಟಿ ಕಾಂದಿವಲಿ ಇವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು, ಉಷಾ ಶೆಟ್ಟಿ ಸಕಹರಿಸಿದರು. ಕಾರ್ಯದರ್ಶಿ ಸರಿತಾ ಮಹೇಶ್ ಶೆಟ್ಟಿ ವಂದಿಸಿದರು.

ಕಟೀಲು ಸದಾನಂದ ಶೆಟ್ಟಿಯವರ ನಿರ್ದೇಶನದಲ್ಲಿ ಮಹಿಳಾ ಸದಸ್ಯರಿಂದ “ಅಂಬಾ ಶಪಥ” ಯಕ್ಷಗಾನ ತಾಳಮದ್ದಳೆ ನಡೆಯಿತು ಸಬಾಕಾರ್ಯಕ್ರಮದ ನಂತರ ನಡೆದ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಹಿರಿ ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

======
ಪ್ರಥಮ ಬಾರಿ ನಮ್ಮ ಸಮಿತಿಯ ಮಹಿಳಾ ಸದಸ್ಯರಿಂದ ತಾಳಮದ್ದಳೆ ನಡೆದಿದ್ದು, ಎಲ್ಲಾ ಪಾತ್ರ ಗಳನ್ನು ನಿರ್ವಹಿಸಿದ ನಮ್ಮ ಪ್ರಾದೇಶಿಕ ಸಮಿತಿಯ ಮಹಿಳೆಯರು ಹೆಚ್ಚಿನವರು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಿದ್ದು ತುಳು ಸಂಭಾಷಣೆಯನ್ನು ಇಂಗ್ಲಿಷ್ ನಲ್ಲಿ ಬರೆದು ಅಭ್ಯಾಸ ಮಾಡಿ ಯಶಸ್ವಿಯಾಗಿ ಪ್ರದರ್ಶಿಸಿದ್ದು ಸಂತೋಷ ತಂದಿದೆ. ಅವರಿಗೂ ಹಿಮ್ಮೇಳನದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರೊಂದಿಗೆ, ಸೇರಿದ ಎಲ್ಲಾ ದೇವಿ ಭಕ್ತರಿಗೆ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಪರವಾಗಿ ನವರಾತ್ರಿಯ ಶುಭಾಶಯಗಳು.

ಪ್ರೇಮನಾಥ ಶೆಟ್ಟಿ ಕೊಂಡಾಡಿ,
ಕಾರ್ಯಧ್ಯಕ್ಷರು ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ



Related posts

ಕುರ್ಲಾ ಬಂಟರ ಭವನದಲ್ಲಿ ಗುರು ಪೂರ್ಣಿಮೆ ಆಚರಣೆ, 

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ  ಮಹಿಳಾ ವಿಭಾಗದ ಆಶ್ರಯದಲ್ಲಿ ಹಳದಿ ಕುಂಕುಮ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯಿಂದ 16 ನೇ ವಾರ್ಷಿಕ  ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಭೆ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ – ಆಷಾಢ ಹಬ್ಬ ಆಚರಣೆ,

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ ಅಭಿಯಾನ: 

Mumbai News Desk

ಮಾನನಷ್ಟ ಪ್ರಕರಣದಲ್ಲಿ ಸಂಜಯ್ ರಾವುತ್ ದೋಷಿ, ಜೈಲು ಶಿಕ್ಷೆ – ನ್ಯಾಯಾಲಯದ ಮಹತ್ತರ ನಿರ್ಧಾರ.

Mumbai News Desk