
ನನಗೆ ಅನ್ನ ನೀಡಿದ ಸ್ಥಳ ಡೊಂಬಿವಲಿ- ರಾಜೇಂದ್ರ ವಿ. ಶೆಟ್ಟಿ
ಚಿತ್ರ ವರದಿ ರವಿ ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ ಅ. 8: ನಾನು ದುರ್ಗೆಯ ಪರಮ ಭಕ್ತ, ನನಗೆ ಅನ್ನ ನೀಡಿದ ಸ್ಥಳ ಡೊಂಬಿವಲಿ ಈ ನಗರವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಹನ್ನೆರಡು ವರ್ಷ ನಾನು ಡೊಂಬಿವಲಿಯಲ್ಲಿ ಕಳೆದಿದ್ದೇನೆ, ನನ್ನನ್ನು ಡೊಂಬಿವಲಿಗೆ ಪರಿಚಯಿಸಿದವರು ಗೋಪಾಲ ಶೆಟ್ರು, ಡೊಂಬಿವಲಿ ಅಂಬಿಕಾ ಹೋಟೆಲ್ ಪ್ರಭಾಕರ್ ಶೆಟ್ಟಿಯವರು ನನ್ನ ಅನ್ನದಾತರು ಪ್ರಭಾಕರ್ ಶೆಟ್ಟಿಯವರ ಸನ್ನಡತೆಯಿಂದ ನಾನು ಜೀವನದಲ್ಲಿ ಹೇಗೆ ಬದುಕ ಬೇಕೆಂದು ಕಲಿತೆ ನನ್ನ ಮಾತ- ಪಿತರ ಧರ್ಮ ನನ್ನ ಉದ್ಯೋಗದಾತರ ಪ್ರೀತಿ ನನ್ನ ಜೀವನ ಶೈಲಿಯನ್ನು ಬದಲಾಯಿಸಿದೆ. ನಾವು ನಮ್ಮ ಮಕ್ಕಳಿಗೆ ನಮ್ಮ ಅಚಾರ- ವಿಚಾರ,ನಮ್ಮ ಸಂಸ್ಕೃತಿಯನ್ನು ಕಲಿಸುವುದರೊಂದಿಗೆ ನಮ್ಮ ಯಕ್ಷಗಾನದ ಕಥೆಗಳನ್ನು ಮಕ್ಕಳಿಗೆ ಕಲಿಸಿ ಮಕ್ಕಳನ್ನು ಸತ್ಪ್ರಜೆಯನ್ನಾಗಿಸುವ ಕಾರ್ಯ ಪ್ರತಿಯೊಬ್ಬ ಮಾತ- ಪಿತರು ಮಾಡ ಬೇಕು ಅರವತ್ತು ವರ್ಷದ ಹಿಂದೆ ಸ್ಥಾಪನೆಯಾದ ಶ್ರೀ ದೇವಿ ಮಂಡಳಿಯಲ್ಲಿ ನನ್ನನ್ನು ಸನ್ಮಾನಿಸಿದ್ದಿರಿ ಮತ್ತು ಎರಡು ಶಬ್ದ ಮಾತನಾಡಲು ಅವಕಾಶ ಸಿಕ್ಕಿದೆ ಇದು ನನ್ನ ಸೌಭಾಗ್ಯ ಡೊಂಬಿವಲಿಯಲ್ಲಿ ನೆಲೆನಿಂತ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆ ಸದಾ ನನ್ನ ಮೇಲಿರಲಿ ಶ್ರೀ ದುರ್ಗಾಪರಮೇಶ್ವರಿ ನಮ್ಮ ಕಷ್ಟ, ದುರಿತಗಳನ್ನು ಬಗೆಹರಿಸಲಿ ಎಂದು ಹುಬ್ಬಳ್ಳಿಯ ಖ್ಯಾತ ಹೋಟೆಲ್ ಉದ್ಯಮಿ ಪಂಜುರ್ಲಿ ಗ್ರೂಪ್ ಅಫ್ ಹೋಟೆಲ್ ನ ಮಾಲಕ ರಾಜೇಂದ್ರ ಶೆಟ್ಟಿ ನುಡಿದರು
ಅವರು ಅಕ್ಟೋಬರ್ 8 ರ ಮಂಗಳವಾರದಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಇದರ ವಜ್ರ ಮಹೋತ್ಸವ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಮಂಗಳವಾರದ ಪ್ರಾಯೋಜಕತ್ವ ವಹಿಸಿ ಮಾತನಾಡುತ್ತಿದ್ದರು.

ಧರ್ಮದರ್ಶಿ ಅಶೋಕ ಶೆಟ್ಟಿ ಮಾತನಾಡುತ್ತಾ ಮನುಷ್ಯ ತನ್ನ ಸ್ವ ಪ್ರಯತ್ನದಿಂದ ಎಷ್ಟು ಎತ್ತರಕ್ಕೆ ಎರಬಹುದು ಎಂಬ ಸ್ಪಷ್ಟ ಉದಾಹರಣೆ ರಾಜೇಂದ್ರ ಶೆಟ್ಟಿ ರುಚಿ, ಶುಚಿಯಾದ ತಿಂಡಿ- ತಿನಸ್ಸುಗಳು, ಹೋಟೆಲ್ ನ ಗೋಡೆಗಳಲ್ಲಿ ಸ್ವಾತಂತ್ರ್ಯ ವೀರರ, ಸಮಾಜ ಸೇವಕರ ಭಾವಚಿತ್ರ ಅಳವಡಿ ಅವರ ಬಗ್ಗೆ ಗೌರವ ಸೂಚಿಸಿದ್ದಾರೆ ಇವರಿಂದ ಉದ್ಯಮಿಗಳು ಕಲಿಯಲಿಕ್ಕೆ ಬಹಳಷ್ಟು ಇದೆ ಎಂದರು.
ಯಕ್ಷಗುರು ಕಟೀಲು ಸದಾನಂದ ಶೆಟ್ಟಿಯವರು ಮಾತನಾಡುತ್ತಾ ನನಗೂ ಡೊಂಬಿವಲಿ ನಗರಕ್ಕೂ ಅವಿನಾಭಾವ ಸಂಬಂಧ ಧರ್ಮದರ್ಶಿ ಅಶೋಕ್ ಶೆಟ್ಟಿ ಯಕ್ಷಗಾನ ಪ್ರೀಯರು ನಾನು ಹಲವಾರು ವರ್ಷದ ಹಿಂದೆ ಇಲ್ಲಿ ಯಕ್ಷಗಾನದ ವೇಷವನ್ನು ಹಾಕಿದವ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಅಶೀರ್ವಾದ ನಮಗೆಲ್ಲರಿಗೂ ಇರಲಿ ಎಂದರು.
ಇದೇ ಸಂದರ್ಭದಲ್ಲಿ ರಾಜೇಂದ್ರ ಶೆಟ್ಟಿ, ಯಕ್ಷಗುರು ಕಟೀಲು ಸದಾನಂದ ಶೆಟ್ಟಿ, ಹರೀಶ್ ಪೂಜಾರಿ ಶಹಾಡ್ ಇವರನ್ನು ವೇದಿಕೆಯ ಮೇಲೆ ಸನ್ಮಾನಿಸಿದರು

ಅಶಿಕಾ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವೇದಿಕೆಯ ಮೇಲೆ ಧರ್ಮದರ್ಶಿ ಅಶೋಕ್ ಶೆಟ್ಟಿ, ಗೋಪಾಲ ಶೆಟ್ಟಿ, ನಿತ್ಯಾನಂದ ಜತ್ತನ್, ಕಟೀಲು ಸದಾನಂದ ಶೆಟ್ಟಿ, ವಿಲಾಸಿನಿ ಶೆಟ್ಟಿ ಉಪಸ್ಥಿತರಿದ್ದರು
ಸನ್ನಿಧಿ ಮತ್ತು ರಿತೆಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು