ಮುಂಬೈಯ ನ್ಯಾಷನಲಿಸ್ಟ್ ಕಾಂಗ್ರೇಸ್ ಪಕ್ಷದ (ಏನ್ ಸಿ ಪಿ )ನಾಯಕ ಬಾಬಾ ಸಿದ್ದಿಕ್ ಅವರನ್ನು ನಿನ್ನೆ ರಾತ್ರಿ( (12/10) 9.30 ಗಂಟೆಗೆ, ಮೂವರು ದಾಳಿಕೋರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪೊಲೀಸರು ಘಟನೆಗೆ ಸಂಬಂಧಿಸಿದಂತ್ತೆ ಇಬ್ಬರನ್ನು ಬಂದಿಸಿದ್ದು, ಓರ್ವ ಉತ್ತರ ಪ್ರದೇಶ ಮತ್ತೊರ್ವ ಹರಿಯಾಣದವನು ಎಂದು ಗುರುತಿಸಲಾಗಿದ್ದು, ಮೂರನೇ ಹಂತಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಾಬಾ ಸಿದ್ದಿಕ್ ಅವರ ಮಗನ ಬಾಂದ್ರ ಪೂರ್ವದ ಕಛೇರಿಯ ಹೊರಗೆ ಮೂರು ಜನ ಬಾಬಾ ಸಿದ್ದಿಕ್ ಅವರ ಮೇಲೆ ಗುಂಡು ಹಾರಿಸಿದ್ದು, ಅವರನ್ನು ಕೂಡಲೇ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು, ಅವರು ಆಸ್ಪತ್ರೆಯಲ್ಲಿ ಸಾವನಪ್ಪಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಮುಂಬೈನ ಬಾಂದ್ರ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕ್ ಅವರು, ಮಹಾರಾಷ್ಟ್ರ ಸರಕಾರದ ಮಾಜಿ ಸಚಿವರಾಗಿದ್ದು, ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ಒಡನಾಟ ತೊರೆದು ಅಜಿತ್ ಪವರ್ ನೇತೃತ್ವದ ಎನ್‌ಸಿಪಿ ಸೇರಿದ್ದರು.

previous post