ಮುಂಬಯಿ : ಮದರ್ ಇಂಡಿಯಾ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿಗಳ ಪೌಂಡೇಶನಿನ ವಾರ್ಷಿಕ ಮಹಾಸಭೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮವು ಅ. 20 ರಂದು ಬೆಳಿಗ್ಗೆ 10.30 ಕ್ಕೆ ಪೌಂಡೇಶನಿನ ಅಧಕ್ಷರಾದ ಸುರೇಂದ್ರ ಎ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಮಡ್ ಐಲ್ಯಾಂಡ್, ಮಾಲಾಡ್ ರಾವತ್ ಪಿಕ್ನಿಕ್ ಕೋಟೇಜ್, ಮಡ್ ಬೀಚ್ ನ ಎದುರುಗಡೆ, ಮಲಾಡ್ (ಪ.), ಮುಂಬಯಿ ಇಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ಚರ್ಚಿಸಲು ನಡೆಯಲಿರುವುದು.
ಸ್ವಾಗತ, ಹೊಸ ಸದಸ್ಯರುಗಳ ಪರಿಚಯ, ಗತ ಸಭೆಯ ವರದಿ ವಾಚನ, ಲೆಕ್ಕ ಪತ್ರಗಳ ಮಂಡನೆ, ಲೆಕ್ಕ ಪರಿಶೋದಕರ ನೇಮಕ, ಅಧ್ಯಕ್ಷರ ಅನುಮತಿ ಮೇರೆಗೆ ಇನ್ನಿತರ ವಿಷಯಗಳು ಹಾಗೂ ಧನ್ಯವಾದಗಳು. ಮದರ್ ಇಂಡಿಯಾ ಶಾಲೆಯೆ ಹಳೆ ವಿದ್ಯಾರ್ಥಿಗಳು/ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಾಸಭೆಯಲ್ಲಿ ಪಾಲ್ಗೊಂಡು ಸಭೆಯನ್ನು ಹಾಗೂ ಆ ನಂತರ ನಡೆಯಲಿರುವ ಸ್ನೇಹ ಮಿಲನ ಕಾರ್ಯಕ್ರಮವನ್ನು ಯಸಸ್ವಿಗೊಳಿಸಬೇಕಾಗಿ ಮದರ್ ಇಂಡಿಯಾ ಹಳೆ ವಿದ್ಯಾರ್ಥಿಗಳ ಪೌಂಡೇಶನಿನ ಪರವಾಗಿ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್ ವಿನಂತಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಸದಾನಂದ ಶೆಟ್ಟಿ (9324402226) ಸಂತೋಷ್ ಶೆಟ್ಟಿ (9819757038) ಶಿವಾನಂದ ಬಂಗೇರ (9702285436) ಹೇಮಂತ್ ಪೂಜಾರಿ (9819548388), ಚಂದ್ರಹಾಸ ಬೆಳ್ಚಡ (9820699611) ಇವರನ್ನು ಸಂಪರ್ಕಿಸಬಹುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
