
ತಾಯಿ ದುರ್ಗಾ ಪರಮೇಶ್ವರಿ ನಮ್ಮಿಂದ ಸೇವನೆಯನ್ನು ಪಡೆದು ಕೊಳ್ಳುತ್ತಿದ್ದಾಳೆ – ಸುನೀಲ್ ಶೆಟ್ಟಿ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಅ.11: ಡೊಂಬಿವಲಿಯ ಪ್ರಸಿದ್ಧ ಧಾರ್ಮಿಕ ಸಂಸ್ಥೆಯಾದ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ವಜ್ರ ಮಹೋತ್ಸವವನ್ನು ಅಚರಿಸುತ್ತಿದೆ ಇದು ನಮಗೆಲ್ಲರಿಗೆ ಅಭಿಮಾನದ ವಿಷಯ ನನ್ನ ಮಾತ- ಪಿತರು ಇಲ್ಲಿ ಸೇವೆ ಸಲ್ಲುಸುತ್ತಿದ್ದರು ಅದರೆ ಹಣದ ಅಭಾವದಿಂದ ಅಂದು ಯಾವುದೇ ಸೇವೆ ಯಾ ಪ್ರಾಯೋಜಕತ್ವ ನೀಡಲಾಗಲಿಲ್ಲ ಅದರೆ ತಾಯಿ ದುರ್ಗಾಪರಮೇಶ್ವರಿ ಈಗ ನಮ್ಮಿಂದ ಸೇವೆಯನ್ನು ಪಡೆದು ಕೊಳ್ಳುತ್ತಿದ್ದಾಳೆ. ತಾಯಿಯ ಅನುಗ್ರಹದಿಂದ ನಾವು ಜೀವನದಲ್ಲಿ ಯಶಸ್ಸನ್ನು ಕಂಡಿದ್ದೇವೆ. ಅಂದು ನಾವು ಮಂಡಳಿಯ ರಜತ ಮಹೋತ್ಸವವನ್ನು ಅದ್ದೂರಿಯಾಗಿ ಅಚರಿಸಿದ್ದೇವೆ ಅಂದು ಮಹಾರಾಷ್ಟ್ರದ ಮಹಾನ್ ಕಲಾವಿದರನ್ನು ಬರಮಾಡಿಸಿ ಇದೇ ವೇದಿಕೆಯ ಮೇಲೆ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ್ದೇವೆ, ಸುವರ್ಣ ಮಹೋತ್ಸವ ಹಾಗೂ ಈಗ ವಜ್ರ ಮಹೋತ್ಸವದ ಸಂದರ್ಭದಲ್ಲೂ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದಿದೆ ದೇವಿ ಅಗಮನ ಮತ್ತು ವಿಸರ್ಜನಾ ಮೆರವಣಿಗೆ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ ಎನ್ನಲು ಸಂತೋಷ ವಾಗುತ್ತಿದೆ ಮಂಡಳಿಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದೆ ಇಂತಹ ಸೇವೆ ನಿರಂತರ ನಡೆಯುತ್ತಿರಲಿ ತಸಯಿ ದುರ್ಗಾಪರಮೇಶ್ವರಿಯ ಅಶೀರ್ವಾದ ಸದಾ ನಮ್ಮೇಲ್ಲರ ಮೇಲಿರಲಿ ಎಮನದು ಖ್ಯಾತ ಉದ್ಯಮಿ ವೆಲ್ಯೂ ಸೆಕ್ಯುರಿಟೀಸ್ ಮುಂಬಯಿ ಇದರ ಮಾಲಕ ಸುನೀಲ್ ಸಂಜೀವ ಶೆಟ್ಟಿ ನುಡಿದರು.
ಅವರು ಅಕ್ಟೋಬರ್ 10 ರಂದು ಸಂಜೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಇಲ್ಲಿ ವಜ್ರ ಮಹೋತ್ಸವ ನಿಮಿತ್ತ ಜರಗಿದ ಎಂಟನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿ ಮಾತನಾಡುತ್ತಿದ್ದರು.
ಧರ್ಮದರ್ಶಿ ಅಶೋಕ್ ಶೆಟ್ಟಿ ಮಾತನಾಡುತ್ತಾ ವಜ್ರ ಮಹೋತ್ಸವದ ಧಾರ್ಮಿಕ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ ಸರ್ವರಿಗೂ ವಂದನೆ ಸಲ್ಲಿಸಿದರು.

ಸನ್ಮಾನ ಸ್ವೀಕರಿಸಿದ ಪವಿತ್ರಾ ಭಟ್ ಮಾತನಾಡುತ್ತಾ ನಾನು ಮೂವತ್ತು ವರ್ಷದಿಂದ ಈ ರಸ್ತೆಯಲ್ಲಿ ಹೋಗುತ್ತಿದ್ದೇನೆ ಇಲ್ಲಿಯ ವೇದಿಕೆಯ ಮೇಲೆ ಕಾರ್ಯಕ್ರಮ ನೀಡ ಬೆಕೇನ್ನುವ ಅಸೆ ಇತ್ತು ಅದು ಈಡೇರಿದೆ ಇಲ್ಲಿಯ ವಿಸರ್ಜನಾ ಮೆರವಣಿಗೆಯನ್ನು ವಿಕ್ಷೀಸಲು ದೂರದಿಂದ ಅಗಮಿಸುತ್ತಿದ್ದಾರೆ ನಮಗೆ ಮಂಗಳೂರಿನ ದಸರಾ ಹಬ್ಬದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಅದೇ ರೀತಿ ದಸರಾ ಹಬ್ಬ ನಡೆಯುವ ಡೊಂಬಿವಲಿಯಲ್ಲಿ ಭಾಗವಹಿಸಿ ಪುಣ್ಯ ಕಟ್ಟಿ ಕೊಳ್ಳೋಣಾ ಎಂದರು
ಇದೇ ಸಂದರ್ಬದಲ್ಲಿ ಕಸ್ತೂರಿ ಶೆಟ್ಟಿ , ಸುನೀಲ್ ಶೆಟ್ಟಿ ದಂಪತಿ, ಪವಿತ್ರಾ ಭಟ್ ಅಪರ್ಣಾ ಶಾಸ್ರಿ ಭಟ್ ರವರನ್ನು ವೇದಿಕೆಯ ಮೇಲೆ ಸನ್ಮಾನಿಸಲಾಯಿತು.
ಕಾರ್ಯಕ್ರಮ ಪ್ರಾರಂಭ ಗೊಳ್ಳುವ ಮೊದಲು ಭಾರತ ದೇಶದ ಮಹಾನ್ ಕೈಗಾರಿಕೋದ್ಯಮಿ ರತನ್ ಟಾಟಾ ರವರ ಅತ್ಮಕ್ಕೆ ಶಾಂತಿ ಲಭಿಸಲೆಂದು ಎರಡು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು
ವಿನಿಶಾ ಶೆಟ್ಟಿಯ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಧರ್ಮದರ್ಶಿ ಅಶೋಕ್ ಶೆಟ್ಟಿ, ಅಧ್ಯಕ್ಷ ಗೋಪಾಲ ಕೆ ಶೆಟ್ಟಿ, ಕಾರ್ಯಕ್ರಮದ ಪ್ರಾಯೋಜಕರಾದ ದಿ. ಸಂಜೀವ ಶೆಟ್ಟಿಯವರ ಧರ್ಮಪತ್ನಿ ಕಸ್ತೂರಿ ಎಸ್. ಶೆಟ್ಟಿ, ಶ್ರೀಮತಿ ಮತ್ತು ಶ್ರೀ ಸುನಿಲ್ ಶೆಟ್ಟಿ ದಂಪತಿ, ಪವಿತ್ರಾ ಭಟ್, ಅಪರ್ಣಾ ಶಾಸ್ರಿ ಭಟ್, ವಿಲಾಸಿನಿ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಮೇಘನಾ ಶೆಟ್ಟಿ ಮತ್ತು ಮಿನಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.