23.5 C
Karnataka
April 4, 2025
ಮುಂಬಯಿ

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಧಾರ್ಮಿಕ ಸಭೆ



ಪ್ಲಾಟಿನಂ ಜುಬಿಲಿ ಕಾರ್ಯಕ್ರಮಕ್ಕೂ ನಿಮ್ಮ ಸೇವೆ ನಿರಂತರವಾಗಿರಲಿ – ಧರ್ಮದರ್ಶಿ ಅಶೋಕ್ ಶೆಟ್ಟಿ

ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ


ಡೊಂಬಿವಲಿ ಅ. 13: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ ವಜ್ರ ಮಹೋತ್ಸವದ ಸಂಭ್ರಮದಂಗವಾಗಿ  ಶ್ರೀ ದೇವಿಗೆ ವಜ್ರದ ನೆಕ್ಲೇಸ್, ವಜ್ರದ ಬೆಂಡೊಲೆ, ವಜ್ರದ ಮೂಗುತಿಯನ್ನು ಭಕ್ತರ ಪರವಾಗಿ ಸಮರ್ಪಿಸಿದ್ದೇವೆ. ಪ್ರತಿಯೊಬ್ಬ ಕಾರ್ಯಕರ್ತರು ಹುಮ್ಮನಸ್ಸಿನಿಂದ, ನಿಷ್ಠೆ, ಕರ್ತವ್ಯ, ತ್ಯಾಗ ಭಾವನೆಯಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದೀರಿ ಪ್ಲಾಟಿನಂ ಜುಬಿಲಿ ಕಾರ್ಯಕ್ರಮಕ್ಕೂ ನಿಮ್ಮ ಸೇವೆ ನಿರಂತರವಾಗಿರಲಿ ಪುರುಷ ವಿಭಾಗ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸೇವೆ ಉತ್ತಮವಾಗಿ ಮೂಡಿ ಬಂದಿದೆ ನಮ್ಮ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಲ್ಲರೂ ಕೊಂಡಾಡಿದ್ದಾರೆ ಮಹಿಳೆಯರ ತಾಳಮದ್ದಳೆ ಅತ್ಯುತ್ತಮವಾಗಿ ಮೂಡಿಬಂದಿದೆ, ಪ್ರತಿವರ್ಷವೂ ಮಂಡಳಿಯ ದಾನಿಗಳಾದ ಲತಾ ಸಾಧು ಶೆಟ್ಟಿ ಮತ್ತು ವಿಜೀತ್ ಶೆಟ್ಟಿಯವರು ಯಕ್ಷಗಾನ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಈ ವರ್ಷ ದಾಸು ಬಾಬು ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಪ್ರವೀಣ್ ಶೆಟ್ಟಿ ಪುತ್ತೂರು ಭಾಜನರಾಗಿದ್ದಾರೆ ಇದು ಸಂತೋಷದ ವಿಷಯವಾಗಿದೆ.  ದಾನಿಗಳು ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂಬ ಭರವಸೆಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದ್ದಾರೆ. ಕಾರ್ಯಕರ್ತರು ವಜ್ರ ಮಹೋತ್ಸವವನ್ನು ಉತ್ತಮ ರೀತಿಯಲ್ಲಿ ಅಚರಿಸಿದ್ದಾರೆ ಎಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಧರ್ಮದರ್ಶಿ ಅಶೋಕ್ ಶೆಟ್ಟಿ ನುಡಿದರು
ಅವರು ಅಕ್ಟೋಬರ್12 ರ ಶುಕ್ರವಾರ ದಂದು ಸಂಜೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಸಂಧರ್ಭದಲ್ಲಿ ನಡೆದ ದಾಸು ಬಾಬು ಶೆಟ್ಟಿ ಸ್ಮಾರಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಯಕ್ಷಗಾನ ಸೇವಕರಾದ ವಿಜೀತ್ ಶೆಟ್ಟಿ ಮಾತನಾಡುತ್ತಾ  ಶ್ರೀ ದುರ್ಗೆ ಯಕ್ಷಗಾನ ಪ್ರೀಯೆ, ತಾಯಿ ನಮ್ಮಿಂದ ತನ್ನ ಪ್ರೀತಿಯ ಸೇವೆಯನ್ನು ಪಡೆಯತ್ತಿದ್ದಾಳೆ ಕಳೆದ 60 ವರ್ಷಗಳಿಂದ ವಿಜೃಂಭಣೆಯಿಂದ ನವರಾತ್ರೋತ್ಸವವನ್ನು ಅಚರಿಸುತ್ತಾ ಬರುತ್ತಿರುವ ಪಶ್ಚಿಮ ವಿಭಾಗ ತಾಯಿಯ ಅನುಗ್ರಹದಿಂದ ಪ್ಲಾಟಿನಂ ಜುಬಿಲಿ ಯನ್ನು ವಿಜೃಂಭಣೆಯಿಂದ ಅಚರಿಸುವಂತಾಗಲಿ ಎಂದರು.
ಪ್ರವೀಣ್ ಶೆಟ್ಟಿ ಪುತ್ತೂರು ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಕರಾವಳಿಯ ಶ್ರೇಷ್ಠ ಕಲೆಯಾದ ಯಕ್ಷಗಾನ ಕ್ಕೂ ನನಗೂ ಅವಿನಾಭಾವ ಸಂಬಂಧ 2002 ರಲ್ಲಿ ಪುಣೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಯಕ್ಷಗಾನ ವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಈ ಮಂಡಳಿಯಲ್ಲಿ ಯಕ್ಷಗಾನದ ಪ್ರದರ್ಶನವನ್ನು ನೀಡುತ್ತಿದ್ದೇವೆ. ಯಕ್ಷಗಾನದ ಕಲೆಯ ಮೂಲಕ ನನಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ. ಈ ಕಲೆ ಉಳಿಯ ಬೇಕಾದರೆ ಕಲಾ ಪ್ರೇಮಿ, ಕಲಾ ಪೋಷಕರ ಅಗತ್ಯವಿದೆ ಮಹಾರಾಷ್ಟ್ರದ ತುಳುನಾಡದ ಡೊಂಬಿವಲಿಯಲ್ಲಿ ಈ ಕಲೆಯನ್ನು ನಾವು ಉಳಿಸಿ ಬೆಳೆಸೋಣಾ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲಾಸಿನಿ ಶೆಟ್ಟಿ ಮಾತನಾಡುತ್ತಾ ವಜ್ರ ಮಹೋತ್ಸವವನ್ನು ಅಚರಿಸುತ್ತಿರುವ ಮಂಡಳಿ ನಮ್ಮ ಮಹಿಳಾ ಮಂಡಳಿಗೆ 12 ರ ಸಂಭ್ರಮ ಮಹಿಳಾ ಸದಸ್ಯೆಯರಿದ ನಡೆದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ಯಶಸ್ವಿಯಾಗಿದೆ ಎನ್ನಲು ಸಂತೋಷವಾಗುತ್ತಿದೆ. ಎಲ್ಲಾ ಮಹಿಳೆಯರು ಒಮ್ಮತದಿಂದ ಮಂಡಳಿಯ ಕೆಲಸ ಕಾರ್ಯಗಳನ್ನು ಮಾಡಿ ಮಂಡಳಿಯ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸೋಣ ಎಂದರು
ಇದೇ ಸಂದರ್ಭದಲ್ಲಿ ದಾನಿಗಳಾದ ವಿಜೀತ್ ಶೆಟ್ಟಿ  ಶುಭಾಶಿನಿ ಶೆಟ್ಟಿ ದಂಪತಿಯನ್ನು ಸನ್ಮಸನಿಸಿದರೆ , ಧರ್ಮದರ್ಶಿ ಅಶೋಕ ಶೆಟ್ಟಿಯವರನ್ನು ಮಹಿಳಾ ವಿಭಾಗ ಗುರುವಂದನೆ ನೀಡಿ ಸನ್ಮಾನಿಸಿದರು ಹಾಗೂ ದಾಸು ಬಾಬು ಶೆಟ್ಟಿ ಸಂಸ್ಮರಾಣಾರ್ಥ ನೀಡುವ ಪ್ರಶಸ್ತಿಯನ್ನು ಪುಣೆಯ ಉದ್ಯಮಿ ಯಕ್ಷಗಾನ ಸಂಘಟಕ ಪ್ರವೀಣ್ ಶೆಟ್ಟಿ ಪುತ್ತೂರು ಇವರಿಗೆ ನೀಡಿ ಸನ್ಮಾನಿಸಲಾಯಿತು.
ಅರತಿ ರೈಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಮೇಘ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು ಚಿನ್ಮಯ ಸಾಲ್ಯಾನ್, ಭುವನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು


Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಮೀಕ್ಷಾ ಪ್ರಶಾಂತ್ ಬಾಗಲ್ ಗೆ ಶೇ 86.4 ಅಂಕ.

Mumbai News Desk

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವತಿಯಿಂದ ಅರಸಿನ ಕುಂಕುಮ,

Mumbai News Desk

ಜಗಜ್ಯೋತಿ ಕಲಾವೃಂದದ ವತಿಯಿಂದ ಶಿವರಾತ್ರಿ ಪೂಜೆ ಸಂಪನ್ನ

Mumbai News Desk

ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಅರಶಿನ ಕುಂಕುಮ, ವಿಧವೆಯರಿಗೆ  ಸೀರೆ, ಧನ ಸಹಾಯ ವಿತರಣೆ

Mumbai News Desk

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”

Mumbai News Desk

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.

Mumbai News Desk