23.5 C
Karnataka
April 4, 2025
ಪ್ರಕಟಣೆ

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ತಾ.26 ಮತ್ತು 27 ಅಕ್ಟೋಬರ್ ರಂದು 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ



ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ 47ನೇ ವರ್ಷದ ವಾರ್ಷಿಕ ಭಜನಾ ಮಂಗಳೋತ್ಸವ ಇದೇ ಬರುವ ಅಕ್ಟೋಬರ್ 26 ಮತ್ತು 27 ರಂದು ನಡೆಯಲಿದೆ. ಆ ಪ್ರಯುಕ್ತ ಏಕಹಾ ಭಜನಾ ಕಾರ್ಯಕ್ರಮವು ಜರಗಲಿರುವುದು. ಅಕ್ಟೋಬರ್ 26 ರ ಶನಿವಾರ ಬೆಳಗ್ಗೆ 6:30 ಕ್ಕೆ ಆರಂಭವಾಗಿ ಅಕ್ಟೋಬರ್ 27 ರ ರವಿವಾರ ಬೆಳಿಗ್ಗೆ 6.30 ಕ್ಕೆ ಮಹಾ ಮಂಗಳಾರತಿ ಜರುಗಲಿದೆ. ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನೆ ಅತಿಥಿ ಗಣ್ಯರಾದ ಶ್ರೀ ಅಶೋಕ್ ಶೆಟ್ಟಿ ( ಧರ್ಮದರ್ಶಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ,ಡೊಂಬಿವಲಿ ) ಶ್ರೀ ರಾಜೇಶ್ ಕೋಟ್ಯಾನ್ ( ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಜಗದಂಬಾ ಮಂದಿರ,ಡೊಂಬಿವಲಿ) ಶ್ರೀ ದಿನೇಶ್ ಸುವರ್ಣ (ಕಾರ್ಯಾಧ್ಯಕ್ಷರು, ಶ್ರೀ ಭಗವತಿ ಭಗವಾನ್ ಸೇವಾ ಸಂಘ, ಡೊಂಬಿವಲಿ ) ಇವರ ದಿವ್ಯ ಹಸ್ತದಲ್ಲಿ ಜರಗಲಿದೆ.ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮಂಡಳಿಯೊಂದಿಗೆ ಸಿರಿನಾಡ ವೆರ್ ಅಸೋಸಿಯೇಷನ್ ಡೊಂಬಿವಲಿ, ಶ್ರೀ ಜಗದಂಬ ಮಂದಿರ ಡೊಂಬಿವಲಿ, ತುಳು ವೆಲ್ವೇರ್ ಅಸೋಸಿಯೇಷನ್ ಸಂಚಾಲಕತ್ವದ ಶ್ರೀ ಲಕ್ಷ್ಮಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ, ಶ್ರೀ ವಿಠಲ ಭಜನಾ ಮಂಡಳಿ ಮೀರಾ ರೋಡ್, ಬಿಲ್ಲವರ ಅಸ್ಫೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ, ಶ್ರೀ ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಪೂರ್ವ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ, ಶ್ರೀ ದುರ್ಗಾಪರಮೇಶ್ವರಿ ಮಂಡಳಿ ,ನವಿ ಮುಂಬೈ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್, ಶ್ರೀ ಕಲ್ಕಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್, ಶ್ರೀ ಶನೀಶ್ವರ ದೇವಸ್ಥಾನ ನೆರೋಲ್, ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ, ಯಶಸ್ವಿ ಭಜನಾ ಮಂಡಳಿ, ಡೊಂಬಿವಲಿ, ಅಮೃತಾನಂದಮಯಿ ಭಜನಾ ಮಂಡಳಿ, ಡೊಂಬಿವಲಿ, ಅಯ್ಯಪ್ಪ ಭಕ್ತ ಭಜನಾ ಮಂಡಳಿ, ಡೊಂಬಿವಲಿ, ಶಬರಿ ಭಜನಾ ಮಂಡಳಿ, ಡೊಂಬಿವಲಿ, ಸದ್ಗುರು ಕೃಷ್ಣ ಭಜನಾ ಮಂಡಳಿ, ವಿಲೇ ಪಾರ್ಲೆ, ನಿತ್ಯಾನಂದ ಚಾಮುಂಡೇಶೆಯೇರಿ ಭಜನಾ ಮಂಡಳಿ, ಸಾಕಿನಾಕಾ, ಫ್ರೆಂಡ್ಸ್ ಸ್ವಾವಲಂಬನ ಭಜನಾ ಮಂಡಳಿ, ಕರ್ನಾಟಕ ಸಂಘ – ಡೊಂಬಿವಲಿ, ನವೋದಯ ಕನ್ನಡ ಸೇವಾ ಸಂಘ, ಥಾಣೆ, ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ,ಫೋರ್ಟ್, ಮುಂತಾದ ಭಜನಾ ಮಂಡಳಿಗಳು ಭಜನಾ ಸೇವೆಯನ್ನು ನೀಡಲಿರುವರು.ಈ ವಾರ್ಷಿಕ ಭಜನಾ ಮಂಗಳೋತ್ಸವಕ್ಕೆ ತಾವೆಲ್ಲರೂ ಬಂದು ಮಿತ್ರರೊಡಗೂಡಿ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ, ತನು ಮನ ಧನ ದಿಂದ ಸಹಕರಿಸಬೇಕಾಗಿ ಮಂಡಳಿಯ ಗೌರವಾಧ್ಯಕ್ಷರು ನಿತಿನ್ ಪ್ರಕಾಶ್ ಪುತ್ರನ್, ಅಧ್ಯಕ್ಷ ಇಂದುಶೇಖ‌ ಸುವರ್ಣ, ಕಾರ್ಯದರ್ಶಿ ಸಚಿನ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ಶ್ರೀಮತಿ ಸವಿತಾ ಸಿ. ಸಾಲಿಯಾನ್, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಭೂವಾಜಿಗಳು, ಮಹಿಳಾ ವಿಭಾಗ, ಪೂಜಾ ಸಮಿತಿ, ಅರ್ಚಕರು ಹಾಗೂ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ಜ13:   ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಕಾರ್ಯಕರ್ತರ ಅಭಿನಂದನೆ ಮಹಾಸಭೆ

Mumbai News Desk

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಮೀರಾ ದಹಾಣು ಬಂಟ್ಸ್ (ರಿ) ಅ10.ಆಟಿದ ಕೂಟ . ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ವಸಾಯಿ ಕರ್ನಾಟಕ ಸಂಘ : ಜ.26 ರಂದು 38ನೇ ವಾರ್ಷಿಕ ಮಹಾಸಭೆ,

Mumbai News Desk

ಪೇಜಾವರ ಮಠದಲ್ಲಿ ಹರಿಕಥಾ ವಿದ್ವಾನ್ “ವಿಶ್ವೇಶ ದಾಸ” ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ  “ತ್ರಿದಿನ ಹರಿಕಥಾ ಸಂಕೀರ್ತನೆ”

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ, ಮಾ 16 ರಂದು ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳಿಗೆ ಅರ್ಜಿಗಳ ಆಹ್ವಾನ,

Mumbai News Desk