ಮುಂಬಯಿ : ಲಂಡನ್ ನ, ಹೌಸ್ ಆಫ್ ಲಾರ್ಡ್ಸ್, ವೆಸ್ಟ್ ಮಿನಿಸ್ಟರ್ ಹೌಸ್ ಆಫ್ ಪಾರ್ಲಿಮೆಂಟ್, ಲಂಡನ್ ಇಲ್ಲಿ ನ. 6 ರಿಂದ 8 ರ ತನಕ ನಡೆಯಲಿರುವ ಮಹಿಳೆಯರು ಮತ್ತು ಬಾಲಕಿಯರ ವಿಶ್ವ ಶೃಂಗಸಭೆ 2024 ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಡೇ ಆಫ್ ಗರ್ಲ್ ಇದರ ಪ್ರಮುಖ ಬಾಷಣಗಾರ್ತಿಯಾಗಿ ಗೋರೆಗಾಂವ್ ಪಶ್ಚಿಮದ ವಿವೇಕ್ ಕಾಲೇಜಿನ ಪ್ರಾಂಶುಪಾಲೆ ಡಾ. ವಿಜೇತಾ ಸಂಜೀವ ಶೆಟ್ಟಿ ಯವರನ್ನು ಆಹ್ವಾನಿಸಲಾಗಿದೆ.
ಈ ಸಂದರ್ಭದಲ್ಲಿ ಡಾ. ವಿಜೇತಾ ಎಸ್. ಶೆಟ್ಟಿ ಯವರು “ಐಕಾನಿಕ್ ಮಹಿಳಾ ವಿಶ್ವ ನಾಯಕಿ” ಪ್ರಶಸ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸುವುದು.
ಡಾ. ವಿಜೇತಾ ಎಸ್. ಶೆಟ್ಟಿ ಯವರು ಈ ಮೊದಲು ಅಮೇರಿಕಾದ ನ್ಯೂಯೋರ್ಕ ನಲ್ಲಿ ಅಂತರಾಷ್ಟೀಯ ಮಹಿಳಾ ದಿನಾಚರಣೆಯಂದು ನಡೆದ ಮಹಿಳೆಯರ ಆಯೋಗದ 67 ನೇ ಅಧಿವೇಶನ ಪ್ರತಿನಿಧಿಯಾಗಿ ಬಾಗವಹಿಸಿದ್ದರು.
ಡಾ. ವಿಜೇತಾ ಎಸ್. ಶೆಟ್ಟಿ ಯವರು ಎಳೆಯ ಪ್ರಾಯದಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಪದವಿಗಳನ್ನು ಪಡೆದಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದ ಬಿ.ಕಾಂ., ಎಂ.ಕಾಂ., ಪಿ. ಎಚ್.ಡಿ. ಅಲ್ಲದೆ ಇನ್ನೂ ಹಲವಾರು ಪದವಿಗಳನ್ನು ಗಳಿಸಿದ ಇವರು ಅನೇಕ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ. ಹಾಗೂ ಎಮ್.ಫಿ.ಎಲ್. ಮಾರ್ಗದರ್ಶನ ನೀಡಿದ್ದು ಅವರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿರಿಸಿದ್ದಾರೆ. 31 ವರ್ಷಗಳಿಂದಲೂ ಅಧಿಕ ಕಾಲ ಶಿಕ್ಷಕಿಯಾಗಿ ಅನುಭವವನ್ನು ಪಡೆದ ಇವರು 4 ಅಂತರಾಷ್ಟೀಯ ಮಟ್ಟಾದ ಮತ್ತು 2 ರಾಷ್ಟ್ರೀಯ ಮಟ್ಟದ ಗ್ರಂಥಗಳನ್ನು ರಚಿಸಿದ್ದಾರೆ. ಇವರು ಬರೆದ The Existence Of Brand Loyalty Among Women Consumers-An Empirical Study ಮತ್ತು ಇತರ ಕೆಲವು ಪುಸ್ತಕಗಳು ಅಮೆಜ಼ಾನ್ ನಲ್ಲಿ ಲಭ್ಯವಿದೆ.
ಅನೇಕ ಸಂಶೋಧನಾ ಯೋಜನೆ ಸಲ್ಲಿಸುದರೊಂದಿಗೆ ಹಲವಾರು ಸೆಮಿನಾರ್ ಗಳಲ್ಲಿ ಇವರು ಭಾಗವಹಿಸಿದ್ದು ಮಾತ್ರವಲ್ಲದೆ ಇವರು ಗಳಿಸಿದ ಪ್ರಶಸ್ತಿ ಪುರಸ್ಕಾರಗಳು ಹಲವಾರು, ಹೀಗೇ ಡಾ. ವಿಜೇತಾ ಎಸ್. ಶೆಟ್ಟಿ ಯವರು ಶಿಕ್ಷಣ ಕ್ಷೇತ್ರದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿದ್ದಾರೆ.
ಡಾ. ವಿಜೇತಾ ಎಸ್. ಶೆಟ್ಟಿ ಯವರು ಪೇಜಾವರ ಚಿಕ್ಕ ಪೆರಾರಿ ದಿ. ವಿಶ್ವನಾಥ ಶೆಟ್ಟಿ ಮತ್ತು ಮೂಳೂರು ಕಂಕಣಗುತ್ತು ಶಾರದಾ ಶೆಟ್ಟಿ ದಂಪತಿಯ ಸುಪುತ್ರಿ.ಪತಿ ಬಂಟರ ಸಂಘ ಮುಂಬಯಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಎ. ಸಂಜೀವ ಶೆಟ್ಟಿ.ಇವರ ಮಗಳು ಸಿಎ ಮಿಖಿತಾ ಎಸ್ ಶೆಟ್ಟಿ.
.ಪತಿ ಸಿ.ಎ. ಸಂಜೀವ ಶೆಟ್ಟಿ. ಇವರೊಂದಿಗೆ ಲಂಡನ್ ಗೆ ಪ್ರಯಾಣಿಸಲಿರುವರು.