ಮಹಾರಾಷ್ಟ್ರ ವಿಧಾನಸಭೆಗೆ ನವಂಬರ್ 20ರಂದು ಚುನಾವಣೆ ನಡೆಯಲ್ಲಿದ್ದು,ಬೊರಿವಲಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೋಪಾಲ ಶೆಟ್ಟಿ ಅವರು ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿ ಸಂಜಯ ಉಪಾಧ್ಯಾಯ ಅವರಿಗೆ ಸವಾಲಾಗಿತ್ತು.
ಶನಿವಾರ ಗೋಪಾಲ ಶೆಟ್ಟಿ ಅವರು ಬಿಜೆಪಿಯ ಉನ್ನತ ನಾಯಕರನ್ನು ಭೇಟಿಯಾಗಿ “ನಾನು ಎಂದಿಗೂ ಪಕ್ಷ ತೊರೆಯುವುದಿಲ್ಲ” ಎಂದು ಭರವಸೆ ನೀಡಿದ್ದರು.
ಇಂದು (04/10) ಮುಂಬೈ ಉತ್ತರ ಕ್ಷೇತ್ರದ ಮಾಜಿ ಸಂಸದ ಗೋಪಾಲ ಶೆಟ್ಟಿ ಅವರು ಬೊರಿವಲಿ ಕ್ಷೇತ್ರಕ್ಕೆ ನಾಮಪತ್ರ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೇಸರಿ ಪಕ್ಷವು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಗೋಪಾಲ ಶೆಟ್ಟಿ ಅವರು ಕಳೆದ ಬುಧವಾರ ನಾಮಪತ್ರ ಸಲ್ಲಿಸಿದ್ದರು.
ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಗೋಪಾಲ ಶೆಟ್ಟಿ ಅವರು ನಾಮಪತ್ರ ಹಿಂಪಡೆದಿದ್ದಾರೆ.
ಬೊರಿವಲಿ ಕ್ಷೇತ್ರಕ್ಕೆ ಸಂಜಯ್ ಉಪಾಧ್ಯಯ ಅವರನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರವನ್ನು ಗೋಪಾಲ ಶೆಟ್ಟಿ ಬಹಿರಂಗವಾಗಿ ಟೀಕಿಸಿದ್ದರು. ಇದೀಗ ಗೋಪಾಲ ಶೆಟ್ಟಿ ಅವರು ನಾಮಪತ್ರ ಹಿಂಪಡೆಯುವ ಮೂಲಕ ಬೊರಿವಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜಯ್ ಉಪಾದ್ಯಾಯ ಮತ್ತು ಬಿಜೆಪಿ ಕಾರ್ಯಕರ್ತರು ನಿಟ್ಟುಸಿರು ಬಿಡುವಂತ್ತಾಗಿದೆ.
ಗೋಪಾಲ ಶೆಟ್ಟಿ ಅವರು 2014 ಮತ್ತು 2019ರಲ್ಲಿ ಉತ್ತರ ಮುಂಬೈ ಕ್ಷೇತ್ರದ ಲೋಕಸಭಾ ಸ್ಥಾನವನ್ನು ನಾಲ್ಕು ಲಕ್ಷಕ್ಕೂ ಅಧಿಕ ಅಂತರದಿಂದ ಗೆದ್ದಿದರು, ಆದರೆ 2024ರ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಪಿಯೂಷ್ ಗೋಯಲ್ ಅವರಿಗೆ ಈ ಸ್ಥಾನವನ್ನು ಗೋಪಾಲ ಶೆಟ್ಟಿ ಬಿಟ್ಟು ಕೊಟ್ಟಿದ್ದರು. ಶೆಟ್ಟಿ ಅವರು 2004 ಮತ್ತು 2009ರಲ್ಲಿ ಬೋರಿವಲಿಯಿಂದ ಶಾಸಕರಾಗಿದ್ದರು.
.