


ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಮೀರಾ ಭಾಯಿಂದರ್ ಶಾಖೆಯಲ್ಲಿ ಮನವಿ ಪತ್ರ ಬಿಡುಗಡೆ ಸಮಾರಂಭ ಗೋಲ್ಡನ್ ನೆಸ್ಟಿನ ಮೂರರ ಮೀರಾಬಂದರ್ ಶಾಖೆಯ ಪರಿಸರದಲ್ಲಿ ತಾರೀಕು 27-10 2025ರಂದು ಸಂಜೆ ಗಂಟೆ 5ಕ್ಕೆ ಸರಿಯಾಗಿ ನೂರಾರು ಸದಸ್ಯರ ಹಾಜರಾತಿಯಲ್ಲಿ ಯಶಸ್ವಿಯಾಗಿ ಜರಗಿತು.ಅಂದು ಸಂಜೆ 5 ಗಂಟೆಗೆ ಸರಿಯಾಗಿ ಸದಸ್ಯರಿಂದ ಸಾಮೂಹಿಕ ಪ್ರಾರ್ಥನೆ ಜರಗಿತು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವ್ಯವಾಸ್ತಪಕ ಮಂಡಳಿಯ ಅಧ್ಯಕ್ಷರಾದ ಅರುಣ್ ಕುಮಾರ್ ಅವರು ವಹಿಸಿಕೊಂಡಿದ್ದು ವೇದಿಕೆಯಲ್ಲಿ ಮಂಡಳಿಯ ಜೊತೆ ಕಾರ್ಯದರ್ಶಿ ಯಾಗಿರುವ ಪ್ರೀತಿ ಹೆಚ್ ಶ್ರೀಯಾನ್, ಶಾಖಾ ಕಾರ್ಯಧ್ಯಕ್ಷ ಗಂಗಾಧರ್ ಬಂಗೇರ, ಶಾಖಾ ಸಂಯೋಜಕರಾದ ಶ್ರೀ ಸುರೇಶ್ ಕುಂದರ್, ಗೌರವ ಕಾರ್ಯದರ್ಶಿ ಸಂದೀಪ್ ಕುಂದರ್, ಕೋಶಾಧಿಕಾರಿ ರವಿ ಎನ್ ಸುವರ್ಣ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷರಾದ ಹರೀಶ್ ಕೋಟ್ಯಾನ್, ಕಟ್ಟಡ ನಿಧಿ ಸಮಿತಿಯ ಕಾರ್ಯಧ್ಯಕ್ಷರಾಗಿರುವ ವಿಜಯ ತಿಂಗಳಾಯ, ಸದಸ್ಯರಾದ ಶಶಿನಾಯಕ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಎಚ್ ಅಮೀನ್ , ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಮೋದ್ ಪುತ್ರನ್ ರವರು ಆಸೀನಾರಾಗಿದ್ದರು.
ಪ್ರಾರಂಭದಲ್ಲಿ ಕಾರ್ಯದರ್ಶಿಯವರು ಎಲ್ಲರನ್ನೂ ಸ್ವಾಗತಿಸಿ ಹೂಗುಚ್ಛ ನೀಡಿ ಗೌರವಿಸಲಾಯಿತು. ನಂತರ ನಡೆದ ದೀಪ ಪ್ರಜ್ವಲನ ಕಾರ್ಯಕ್ರಮವನ್ನು ಅರುಣ್ ಕುಮಾರ್ ಹಾಗೂ ಅತಿಥಿ ಗಣ್ಯರು ಮಾಡಿ ಶುಭ ಹಾರೈಸಿದರು.ದೇವತಾ ಪ್ರಾರ್ಥನೆ ಮಹಿಳಾ ವಿಭಾಗದ ವತಿಯಿಂದ ಕಲಾವತಿ ತಿಂಗಳಾಯ, ದೇವಕಿ ಕೋಟ್ಯಾನ್ ಮತ್ತು ವೈಶಾಲಿ ಸಾಲ್ಯಾನ್ ರವರು ಮಾಡಿ ಸಹಕರಿಸಿದರು. ಮನವಿ ಪತ್ರವನ್ನು ಅರುಣ್ ಕುಮಾರ್ ಮತ್ತು ಪ್ರೀತಿ ಎಚ್ ಶ್ರೀಯಾನ್ ರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರ ವತಿಯಿಂದ ಸುಮಾರು 3 ಲಕ್ಷದವರೆಗಿನ ದೇಣಿಗೆಯು ಆಶ್ವಾಸನೆ ರೂಪದಲ್ಲಿ ಸದಸ್ಯರು ನೀಡಿ ಬೆಂಬಲ ವ್ಯಕ್ತಪಡಿಸಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಗಂಗಾಧರ ಬಂಗೇರರವರು ಮಾತನಾಡುತ್ತಾ “ಹೋದ ವರ್ಷದಿಂದ ಅಂಕುರ್ ನರ್ಸರಿ ಶಾಲೆಯನ್ನು ಶಾಖೆಯು ನಡೆಸಿಕೊಂಡು ಬರುತ್ತಿದೆ. ನಮ್ಮ ಮುಂದಿನ ಯೋಜನೆಗೆ ಸುಮಾರು ಒಂದು ಕೋಟಿಯಷ್ಟು ಬಂಡವಾಳದ ಅವಶ್ಯಕತೆ ಇದೆ. ಈ ನಮ್ಮ ಗುರಿತಲಪಲು ಎಲ್ಲರೂ ತನು ಮನ ಮತ್ತು ದನದಿಂದ ಸಹಕರಿಸಬೇಕೆಂದು ವಿನಂತಿಸಿ ನಮಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿರುವ ಮಂಡಳಿಗೆ ಆಭಾರ ವ್ಯಕ್ತಪಡಿಸಿದರು. ಪ್ರೀತಿ ಹೆಚ್ ಶ್ರೀಯಾನ್ ರವರು ಮಾತನಾಡುತ್ತಾ “ಶಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಎಲ್ಲರೂ ಸೇವಾ ಮನೋಭಾವದಿಂದ ಮಂಡಳಿಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ, ಆದಷ್ಟು ಬೇಗನೆ ನಿಮ್ಮ ಗುರಿಯನ್ನು ಮುಟ್ಟುವಂತಾಗಲಿ” ಎಂದು ಹಾರೈಸಿ ನಿಮ್ಮ ಉತ್ತಮ ಕಾರ್ಯಕ್ಕೆ ನನ್ನಿಂದಾದಷ್ಟು ಸಹಾಯ ಮಾಡುವ ಭರವಸೆ ನೀಡಿದರು.
ಸುರೇಶ್ ಕುಂದರ್ ಶಾಖೆಯು ನಡೆಸಿಕೊಂಡು ಬರುತ್ತಿರುವ ನರ್ಸರಿ ಅಂಕುರ್ ಶಾಲೆಯನ್ನು ಮುಂಬಡ್ತಿಗೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೇರಿದೆ ಎಂದು ತಿಳಿಸಿ ಹಿರಿಯರಿಂದ ಸ್ಥಾಪಿಸಲ್ಪಟ್ಟ ನಮ್ಮ ಮಂಡಳಿಯ ಕೀರ್ತಿ ಪತಾಕೆಯನ್ನು ಇನ್ನು ಎತ್ತರಕ್ಕೆ ಏರಿಸುವಲ್ಲಿ ಎಲ್ಲರೂ ಒಮ್ಮತದಿಂದ ಸಹಕರಿಸಬೇಕೆಂದು ಎಲ್ಲರಲ್ಲಿ ವಿನಂತಿಸಿದರು. ವಿಜಯ ತಿಂಗಳಾಯ ತನ್ನ ಅಭಿಪ್ರಾಯ ತಿಳಿಸುತ್ತಾ “ನಮ್ಮ ಮುಂದಿನ ಗುರಿ ನಿಧಿ ಸಂಗ್ರಹಣೆ, ಒಂದು ಕೋಟಿ ಸಂಗ್ರಹಿಸುವಲ್ಲಿ ನಾವೆಲ್ಲರೂ ನಮ್ಮ ಸಮುದಾಯದ, ತುಳು – ಕನ್ನಡಿಗರ, ದಾನಿಗಳ ಮನೆ ಮನೆಗೆ ಹೋಗಿ ಸಂಗ್ರಹಿಸಲಿದ್ದೇವೆ ಎಂದು ತಿಳಿಸಿ ಆ ಸಮಯದಲ್ಲಿ ಎಲ್ಲರೂ ನಮಗೆ ಸಹಕರಿಸಬೇಕೆಂದು ವಿನಂತಿಸಿದರು. ಸದಸ್ಯರಾದ ಶಶಿ ನಾಯಕರವರು ಮಾತನಾಡುತ್ತಾ ಶಾಖೆಯು ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಹಾಗೆಯೇ ಶಾಖೆಯ ಕಾರ್ಯಕರ್ತರ ಪ್ರಯತ್ನವನ್ನು ಕೂಡ ನಾವು ಪ್ರಶಂಶಿಸಬೇಕಾದ ವಿಷಯ. ಶಾಖೆಯ ಎಲ್ಲಾ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿದೆಯೆಂದು ತಿಳಿಸಿ ಎಲ್ಲರಿಗೂ ಶುಭ ಕೋರಿದರು.
ಪ್ರಭಾವತಿ ಎಚ್ ಅಮೀನ್ ಈ ಸಂದರ್ಭದಲ್ಲಿ ನಮ್ಮಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಮಂಡಳಿಗಾಗಿ ಒಂದೇ ಕುಟುಂಬದ ಸದಸ್ಯರಂತೆ ಎಲ್ಲರೂ ಸಹಕರಿಸಬೇಕೆಂದು ಎಲ್ಲರಲ್ಲಿ ವಿನಂತಿಸಿದರು. ಸಭಾಧ್ಯಕ್ಷರಾದ ಅರುಣ್ ಕುಮಾರ್ ಅವರು ಮಾತನಾಡುತ್ತಾ “ಮಂಡಳಿಯು ಕಳೆದ 123 ವರ್ಷಗಳಿಂದ ಜನಸೇವೆಯೇ ಜನಾರ್ದನ ಸೇವೆ ಎಂಬ ನಾಣ್ಣುಡಿಯಂತ್ತೆ ವಿದ್ಯಾಧಾನ ಮಾಡುತ್ತಾ ಬಂದಿರುತ್ತದೆ. ಶಾಖೆಯು ಈ ನಿಟ್ಟಿನಲ್ಲಿ ಕಾರ್ಯ ವೆಸಗಿತ್ತಿರುವುದು ಶ್ಲಾಘನೀಯ ಕಳೆದ ವರ್ಷಕ್ಕಿಂತ ಈ ವರ್ಷದ ವಿದ್ಯಾರ್ಥಿಗಳ ಸಂಖ್ಯೆಯು ಇಮ್ಮಡಿಯಾಗಿರುತ್ತದೆ, ಮುಂದಕ್ಕೂ ಇನ್ನೂ ಹೆಚ್ಚಾಗಬೇಕೆಂದು ತಿಳಿಸಿ ಪ್ರಧಾನ ಸಭೆಯಿಂದ ಸಂಪೂರ್ಣ ಸಹಕಾರ ಕೊಡುವ ಭರವಸೆಯನ್ನು ನೀಡಿ ನಿಮ್ಮೆಲ್ಲರ ಪ್ರಯತ್ನ ಆದಷ್ಟು ಬೇಗನೆ ಕೈಗೂಡಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂದೀಪ್ ಕುಂದರ್ ರವರು ಸಮಾರಂಭಕ್ಕೆ ಬಂದಿರುವ ಶುಭ ಸಂದೇಶಗಳನ್ನು ವಾಚಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ನಂತರ ಎಲ್ಲರಿಗೂ ಮಂಡಳಿಯ ವತಿಯಿಂದ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶಾಖಾ ಸಮಿತಿ, ಮಹಿಳಾ ಮತ್ತು ಯುವ ಭಾಗ ಎಜುಕೇಶನ್ ಕಮಿಟಿ, ಸಾಂಸ್ಕೃತಿಕ ಸಮಿತಿ, ಪಂಡ್ ರೈಸಿಂಗ್ ಸಮಿತಿ, ಕ್ರೀಡಾ ಸಮಿತಿ, ವಾಚನಾಲಯ ಸಮಿತಿ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.