
ಇವತ್ತಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತ್ಯಂತ ಸಂತೋಷವಾಗುತ್ತಿದೆ. ಈಗಾಗಲೇ ಹೇಳಿದ ಹಾಗೆ ಇವತ್ತು ಮೊದಲನೆಯದಾಗಿ ಶಿಕ್ಷಕರ ದಿನಾಚರಣೆ ಮತ್ತು ಎರಡನೆಯದಾಗಿ ಈದ್ ಮಿಲಾದ್ ಕಾರ್ಯಕ್ರಮ ಆದರೂ ಕೂಡ ಇವತ್ತು ನಾವು ಕರಾವಳಿಯ ಮಂಗಳೂರಿನ ಬಿಟ್ಟು ಮುಂಬೈಯಲ್ಲಿ ಬಂದು ನಿಲ್ಲಬೇಕಾದರೆ ಅದು ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರ ಪ್ರೀತಿ ವಿಶ್ವಾಸ ನಮ್ಮನ್ನು ಇಲ್ಲಿ ತಂದು ನಿಲ್ಲಿಸಿದೆ. ಇವತ್ತು ಇಲ್ಲಿ ನಾನು ಕುಳಿತು ಆಲೋಚನೆ ಮಾಡುತ್ತಾ ಇದ್ದೆ. ವಿಶ್ವದ ಸಂಸ್ಕೃತಿಯ ಸಾರ ಅದು ಭಾರತದಲ್ಲಿ ಮಾತ್ರ ಕಾಣುತ್ತದೆ, ಭಾರತ ದೇಶದ ಸಂಸ್ಕೃತಿಯ ಸಾರ ಅದು ಕರ್ನಾಟಕದಲ್ಲಿ ಮಾತ್ರ ಕಾಣಿಸುತ್ತದೆ, ಕರ್ನಾಟಕದ ಸಂಸ್ಕೃತಿಯ ಸಾರ ಅದು ನಮಗೆ ದಕ್ಷಿಣ ಕನ್ನಡ ಹಾಗೂ ತುಳುನಾಡಲ್ಲಿ ಮಾತ್ರ ಕಾಣಲಿಕ್ಕೆ ಸಿಗುತ್ತದೆ, ತುಳುನಾಡಿನ ಸಂಸ್ಕೃತಿಯ ಸಾರ ಎಲ್ಲಿ ಸಿಗುತ್ತದೆ ಅಂದರೆ ಅದು ಮುಂಬಯಿಯ ಇಂತಹ ಪರಿಸರದಲ್ಲಿ ಅಂತ ನಾನು ಹೇಳ ಬಯಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸಂಸ್ಕೃತಿಯನ್ನು ಇಲ್ಲಿಗೆ ತಂದು ನಿಲ್ಲಿಸಿ ಎಲ್ಲರನ್ನು ಒಟ್ಟುಗೂಡಿಸುವ ಅವಕಾಶ ತಾವು ಇಂದು ಇಲ್ಲಿ ಮಾಡಿದ್ದೀರಿ. ಈ ಸಂದರ್ಭದಲ್ಲಿ ನನಗಿಂತಲೂ ಹೆಚ್ಚು ನಿಮಗೆಲ್ಲರಿಗೂ ತಿಳಿದಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಕಳೆದ 25 ವರ್ಷಗಳಿಂದ ಒಂದು ಸಾಮಾಜಿಕವಾಗಿ ಅದೇ ರೀತಿ ನಮ್ಮ ಜಿಲ್ಲೆಗಳ ಅಭಿವೃದ್ಧಿಯ ದೃಷ್ಟಿಯಿಂದ ಪರಿಸರವನ್ನು ಉಳಿಸುವ ಮುಖಾಂತರ ಯಾವ ರೀತಿಯ ಕಾರ್ಯವನ್ನು ಮಾಡುತ್ತಾ ಮುನ್ನಡೆಯುತ್ತಿದ್ದಾರೆ. ನಾನು ಇವತ್ತು ಬರೇ ಒಂದು ಕಾರ್ಯಕ್ರಮಕ್ಕೆ ಬಂದಿಲ್ಲ, ಇವತ್ತು ಬಹುಶಃ 25 ವರ್ಷಗಳ ಆ ಒಂದು ಅದ್ಭುತವಾದ ಪ್ರಯಾಣ ಪ್ರಯಾಣ ಏನಿದೆ ಅಂದರೆ, ಅದು ಪರಿಸರಕ್ಕೆ ಸಂಬಂಧಪಟ್ಟಂತಹ ಪ್ರಯಾಣ ಇರಲಿ ಅಥವಾ ಸಾಮಾಜಿಕ ಹಿತಕ್ಕಾಗಿ ಪ್ರಯಾಣ ಇರಲಿ ಅಥವಾ ಮಾನವ ಕುಲಕ್ಕೆ ಹಿತವಾಗುವಂತಹ ಪ್ರಯಾಣ ವಾಗಿರಲಿ, ತಾವು ಏನು ಮಾಡಿದ್ದೀರಾ ಅದಕ್ಕೆ ಒಂದು ಸಾಕ್ಷಿಯಾಗಿ ನಾನು ಇಲ್ಲಿ ಬಂದು ನಿಂತಿರುವೆನು. 25 ವರ್ಷಗಳ ನಿರಂತರವಾದ ನಿಮ್ಮದೇ ಒಂದು ಆಲೋಚನೆ ಮುಖಾಂತರ ಎಲ್ಲರನ್ನು ಒಗ್ಗೂಡಿಸಿ ಬಹುಶಃ ಕೆಲವು ಕಷ್ಟದ ಸಂದರ್ಭದಲ್ಲಿ ಎದ್ದು ನಿಂತು ಸಮರ್ಪಕವಾಗಿ ಭವಿಷ್ಯದ ಜನಾಂಗದ ಬಗ್ಗೆ ಆಲೋಚನೆ ಮಾಡುತ್ತಾ ಚರ್ಚಿಸಿ ಅದಕ್ಕೆ ದೊಡ್ಡ ಮಟ್ಟದ ನೇತೃತ್ವವನ್ನು ವಹಿಸಿಕೊಂಡು ಇವತ್ತು ಸಾಮಾಜಿಕವಾದ ಹಿತಕ್ಕೆ ಮತ್ತು ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗುವಂತ ಹಲವಾರು ಕೆಲಸಗಳನ್ನು ತಾವು ಇಲ್ಲಿ ಮಾಡಿದ್ದೀರಿ. ನಾನು ಕೂಡಾ ಅಲ್ಲಿ ನಾಗಾರ್ಜುನ ಮತ್ತು ಎಂ ಆರ್ ಪಿ ಎಲ್ ಬರುವಾಗ ವಿದ್ಯಾರ್ಥಿ ಮುಖಂಡನಾಗಿದ್ದೆ. ಅವತ್ತಿನಿಂದಲೇ ಈ ಸಮಿತಿಯ ಬಗ್ಗೆ ನಾವು ಬಹಳಷ್ಟು ತಿಳಿದುಕೊಂಡಿದ್ದೇವೆ. ಆದಕಾರಣ ಈ ಒಂದು ಪರಿಸರ ಪ್ರೇಮಿ ಸಮಿತಿ ಪ್ರದೇಶದ ನಮ್ಮ ಆ ಒಂದು ಪರಿಸರ ಏನಿದೆ ಅದನ್ನು ಕೂಡ ಹಾಳಾಗದ ರೀತಿಯಲ್ಲಿ ಭವಿಷ್ಯದ ಜನಾಂಗಕ್ಕೆ ಬೇಕಾಗುವಂತಹ ಅಭಿವೃದ್ಧಿ ಕೂಡ ಇಟ್ಟುಕೊಂಡು ಉತ್ತಮವಾದ ಸಲಹೆ ಸೂಚನೆಗಳನ್ನು ನೀಡುತ್ತಾ ಜಿಲ್ಲೆಯ ಅಭಿವೃದ್ಧಿಗೆ ಕಾಣದ ಕೈಗಳಂತೆ ತನ್ನ ವಿಶೇಷವಾದ ಕೊಡುಗೆಗಳನ್ನು ಕೊಟ್ಟಿದೆ ಅಂತ ಹೇಳಲು ನಾನು ಇಲ್ಲಿ ಬಯಸುತ್ತಿದ್ದೇನೆ. 25 ವರ್ಷಗಳಿಂದ ನಿಮ್ಮ ಆ ವಿಚಾರವನ್ನು ಬಹಳ ಅತ್ಯುತ್ತಮವಾಗಿ ನಿರ್ವಹಿಸಿದ್ದೀರೆ. ಇನ್ನು ಮುಂದಿನ 25 ವರ್ಷಕ್ಕೆ ಬೇಕಾದದನ್ನು ಆ ವರದಿಯನ್ನು ನೀವು ಕೊಟ್ಟಿದ್ದೀರಿ, ಅದಕ್ಕೆ 25 ವರ್ಷಕ್ಕಲ್ಲ ಮುಂದಿನ ನೂರು ವರ್ಷಕ್ಕೆ ಬೇಕಾಗುವಂತೆ ವರದಿಯನ್ನು ತಯಾರಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ನನಗೆ ಯಾವಾಗಲೂ ಸಿಕ್ಕಿದಲ್ಲಿ, ಮದುವೆಯಂತಹ ಸಮಾರಂಭದಲ್ಲಿಯೂ ಕೂಡ ನನಗೆ ಸಿಕ್ಕಿದ್ದಲ್ಲಿ ಯಾವಾಗಲೂ ಅವರಿಗೆ ಸಮಾಜದ ಬಗ್ಗೆ ಚಿಂತೆ ಮತ್ತು ಜಿಲ್ಲೆಯ ಭವಿಷ್ಯದ ಅಭಿವೃದ್ಧಿಯ ಚಿಂತೆ ಅದರೊಂದಿಗೆ ದಕ್ಷಿಣ ಕನ್ನಡದ ಜನರ ಬಗ್ಗೆ ಚಿಂತೆ, ಇದು ಅವರು ಯಾವಾಗಲೂ ಮಾತನಾಡುವಂತ ವಿಚಾರ ಹಲವಾರು ವರ್ಷಗಳಿಂದ ಊರಿಗೆ ಬೇಕಾಗಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇವತ್ತು ಸಾಮಾಜಿಕ ಚಿಂತನೆಯೊಂದಿಗೆ ಬಹುಶಃ ಇಷ್ಟು ಕೆಲಸ ಮಾಡುವಾಗ ಅವರ ಒಂದು ಕಾರ್ಯಕ್ರಮಕ್ಕೆ ಸ್ವಲ್ಪ ಕಷ್ಟವಾದರೂ ಚಿಂತೆ ಇಲ್ಲ, ಅಲ್ಲಿಗೆ ನಾನು ಹೋಗಿ ಭಾಗವಹಿಸಬೇಕು, ಎಲ್ಲರ ಆಶೀರ್ವಾದ ಪಡೆದುಕೊಳ್ಳಬೇಕು ಎಂಬ ಚಿಂತನೆಯೊಂದಿಗೆ ನಾನಿಲ್ಲಿ ಬಂದಿರುವೆನು. ಅದಕ್ಕಾಗಿ ಇಡೀ ಸಮಾಜ ಇಂದು ಅವರನ್ನು ಗುರುತಿಸಿಕೊಂಡಿದೆ ಎಂದು ನಾನು ಹೇಳಬಯಸುತ್ತೇನೆ. ಬರೇ ಒಂದು ಅಭಿವೃದ್ಧಿ ಮಾತ್ರವಲ್ಲ ಜಿಲ್ಲೆಗಳ ಅಭಿವೃದ್ಧಿಯ ಜೊತೆಯಲ್ಲಿ ಇವತ್ತು ಪ್ರೀತಿಯ ಸೋದರ ಸಮಾಜ ನಿರ್ಮಾಣ ಮಾಡುವಲ್ಲಿ ದೊಡ್ಡ ಮಟ್ಟದ ಈ ಹೆಜ್ಜೆಯೂ ನಮ್ಮ ಜಿಲ್ಲೆ ಮಾತ್ರ ಅಲ್ಲ ಇಡೀ ರಾಜ್ಯ ಹಾಗೂ ದೇಶಕ್ಕೂ ಕೂಡ ಅತೀ ಅಗತ್ಯ. ಒಂದು ದೇಶದ ಮತ್ತು ಜಿಲ್ಲೆಯ ದೊಡ್ಡಮಟ್ಟದ ಶಕ್ತಿ ಏನೆಂದರೆ ಅದು ಎಷ್ಟು ಬಿಲ್ಡಿಂಗ್ ಇದೆ ಎಷ್ಟು ಫ್ಯಾಕ್ಟರಿಗಳಿದೆ ಎಂಬುದು ಮಾತ್ರವಲ್ಲ, ಎಷ್ಟು ಒಗ್ಗಟ್ಟಿನಿಂದ ಇರುತ್ತೇವೆ ಅದು ಮುಖ್ಯ. ಆದುದರಿಂದ ಸೌಹಾರ್ದದ ಸಮಾಜ ಇವತ್ತು ನಿರ್ಮಾಣ ಮಾಡುವ ಬಗ್ಗೆ ನಿಮ್ಮ ಆಲೋಚನೆ ಅದು ನಿಜವಾಗಿ ದೇಶಕ್ಕೆ, ಸಮಾಜಕ್ಕೆ ಮತ್ತು ಜಿಲ್ಲೆಗೆ ಕೊಡುವಂತಹ ಅತೀ ದೊಡ್ಡ ಕೊಡುಗೆ ಅಂತ ನಾನಿಲ್ಲಿ ಹೇಳಬಯಸುತ್ತೇನೆ. ಮಾಧ್ಯಮದವರು ನನ್ನಲ್ಲಿ ನಿಜವಾದ ಅಭಿವೃದ್ಧಿ ಯಾವುದು ಅಂತ ಕೇಳಿದಾಗ ನಾನು ಇದನ್ನೇ ಅವರಲ್ಲಿ ಹೇಳಿದ್ದೆ. ಉಳ್ಳಾಲದ ಅಭಿವೃದ್ಧಿ ಏನಂದರೆ ಉಳ್ಳಾಲದ ಪ್ರಮುಖ ರಸ್ತೆಯಲ್ಲಿ ಒಂದು ಹಿಂದು ಸಹೋದರ ಮಕ್ಕಳು, ಒಬ್ಬ ಮುಸ್ಲಿಂ ಸಹೋದರ ಮಕ್ಕಳು, ಕ್ರಿಶ್ಚಿಯನ್ ಸಹೋದರ ಮಕ್ಕಳು, ದಲಿತರ ಮಕ್ಕಳು, ಹಿಂದುಳಿದವರ ಮಕ್ಕಳು, ಬಡವರ ಮಕ್ಕಳು, ಶ್ರೀಮಂತರ ಮಕ್ಕಳು, ಕಾರ್ಮಿಕರ ಮಕ್ಕಳು ಎಲ್ಲರೂ ಕೂಡ ಕೈ ಕೈ ಹಿಡಿದುಕೊಂಡು ನಲಿದಾಡಿಕೊಂಡು ಸಂತೋಷದಿಂದ ಓಡಾಡುವ ವಾತಾವರಣ ನಿರ್ಮಾಣ ಮಾಡುವುದು. ಅದು ನಮ್ಮ ಮೊದಲ ಆದ್ಯತೆ. ಅದು ಪ್ರತಿಯೊಬ್ಬರ ಆದ್ಯತೆ ಕೂಡ ಆಗಬೇಕು. ನಾವು ಉತ್ತಮವಾದ ಒತ್ತಡರಹಿತವಾದ ವಾತಾವರಣ ನಿರ್ಮಾಣ ಮಾಡಿದ್ದಲ್ಲಿ ತನ್ನಿಂದ ತಾನೆ ಒಂದಕ್ಕೊಂದು ಅಭಿವೃದ್ಧಿ ಆಗುತ್ತದೆ. ಆದುದರಿಂದ ಇದಕ್ಕಾಗಿ ದೊಡ್ಡ ಮೊತ್ತದ ನೇತೃತ್ವವನ್ನು ನೀವು ವಹಿಸಿಕೊಂಡಿದ್ದೀರಿ. ಇಂದು ಇಲ್ಲಿನ ಬೇರೆಬೇರೆ ಸಂಸ್ಥೆಗಳ ಮುಖಂಡರು ಇಲ್ಲಿದ್ದೀರಿ. ನೀವೆಲ್ಲರೂ ಸೇರಿ ಇಂತಹ ಕೆಲಸವನ್ನು ಮಾಡುತ್ತಿದ್ದೀರಿ. ಈ ಒಂದು ಸೌಹಾರ್ದತೆ ವಾತಾವರಣ ನಿರ್ಮಾಣ ಮಾಡಲಿಕ್ಕೆ ಮುಂಬೈಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳು ಮುಂದೆ ನಿಂತು ಅದರ ನೇತೃತ್ವವನ್ನು ವಹಿಸಬೇಕು. ಇದನ್ನು ಕೇವಲ ರಾಜಕಾರಣಿಗಳಿಗೆ ಬಿಟ್ಟರೆ ಆಗುವುದಿಲ್ಲ, ಪ್ರತಿಯೊಂದು ಮನೆಯವರು ಕೂಡ ನಿಲ್ಲಬೇಕು, ಪ್ರತಿಯೊಂದು ಸಂಘ-ಸಂಸ್ಥೆಗಳು ಬೇಕು ನೀವು ಮುಂಬಯಿಗೆ ಬಂದರೂ ಕೂಡ ಇಲ್ಲಿ ನೀವು ಎಷ್ಟು ಪ್ರೀತಿ ವಿಶ್ವಾಸದಿಂದ ಇದ್ದೀರಿ. ಅಲ್ಲಿ ಕೂಡ ಎಲ್ಲರೂ ಬಹಳಷ್ಟು ಪ್ರೀತಿ ವಿಶ್ವಾಸದಿಂದ ಇದ್ದಾರೆ. ಆದರೆ ಕೆಲವು ಸಂದರ್ಭದಲ್ಲಿ ಮಾತ್ರ ಆ ಸಣ್ಣಪುಟ್ಟ ವಿಚಾರವನ್ನು ದೂರ ಮಾಡಿದರೆ, ಅತ್ಯಂತ ಸಂತೋಷದ, ಅತ್ಯಂತ ಅಭಿವೃದ್ಧಿಯ, ನಿಜವಾದ ತುಳುನಾಡು ನಮಗೆ ಖಂಡಿತವಾಗಿಯೂ ಕಾಣಲು ಸಾಧ್ಯ. ನೀವೆಲ್ಲರೂ ಅದರ ನೇತೃತ್ವ ವಹಿಸಲು ವಿನಂತಿಸುತ್ತಿದ್ದೇನೆ. ಆದರೆ ಅದು ಅಷ್ಟು ಸುಲಭ ಅಲ್ಲ. ನಾವು ಇಲ್ಲಿ ನಿಂತು ಒಬ್ಬರ ಪರವಾಗಿ ಎಷ್ಟು ಮಾತನಾಡಬಹುದು, ಅದೇ ರೀತಿ ಇನ್ನೊಬ್ಬರ ಬಗ್ಗೆ ಕೂಡ ಅದೆಷ್ಟೋ ಮಾತನಾಡಬಹುದು. ಆದರೆ ನಮ್ಮೊಂದಿಗೆ ನೀವು ಬೇಕು ಎಲ್ಲರೂ ಬೇಕು. ಅಂತ ಎಲ್ಲರನ್ನು ಸೇರಿಸುವುದು ಅಷ್ಟು ಸುಲಭವಲ್ಲ. ಅದೆಷ್ಟೇ ಕಷ್ಟವಾದರೂ ಕೂಡ ಅದರ ಜವಾಬ್ದಾರಿಯನ್ನು ಹಿಂದೆ ಬೀಳದೆ ಒಗ್ಗಟ್ಟಾಗಿ ನಿಂತು ಇಡೀ ಸಮಾಜವನ್ನು ಒಟ್ಟಿಗೆ ಕೊಂಡುಹೋಗುವಂತಹ ಜವಾಬ್ದಾರಿಯನ್ನು ವಹಿಸಬೇಕಂತ ನಾನು ಪ್ರೀತಿಪೂರ್ವಕವಾಗಿ ವಿನಂತಿಸುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಕೂಡ ನನ್ನ ಮಿತ್ರರಿಗೆ ಇದನ್ನೇ ಹೇಳುತ್ತಿದ್ದೇನೆ. ಮನುಷ್ಯನ ಜೀವನ ಸಂಬಂಧದಲ್ಲಿ ದೇವರು ಯಾವುದೇ ಭೇದ ಮಾಡಲಿಲ್ಲ. ನಾವು ಹುಟ್ಟುವಾಗ ಅದು ಎಲ್ಲರಿಗೂ ಒಂದೇ ಧರ್ಮ, ಆರೋಗ್ಯದ ಮಗು ಆರೋಗ್ಯದ ತಾಯಿ ಮಾತ್ರ ಇರಬೇಕು. ಯಾವುದೇ ಸಮುದಾಯದ ಮಗು ಹುಟ್ಟುವಾಗ ಎಲ್ಲಾ ಮಕ್ಕಳು ಕೂಗುವುದಲ್ಲದೆ ಬೇರೆ ಬೇರೆ ಸ್ವರ ಮಾಡುವುದಿಲ್ಲ. ಮನುಒಷ್ಯ ಹುಟ್ಟುವಾಗ ಎಲ್ಲರ ಹಾಗೆ ಎರಡು ಕಣ್ಣು ಮುಂದೆ, ಕಿವಿ ಬದಿಯಲ್ಲಿ ಅಂಥ ಜಾತಿ ಮತವನ್ನು ನೋಡದೆ ದೇವರಲ್ಲರಿಗೂ ಒಂದೇ ರೀತಿಯ ಆಕಾರವನ್ನು ನೀಡಿದ್ದಾರೆ. ಯಾರೇ ಒಬ್ಬ ವ್ಯಕ್ತಿ ಆತ ಕಷ್ಟದಲ್ಲಿರುವಾಗ ಯಾವುದೇ ಜಾತಿ ಯಾವುದೇ ಮತ ಆಗಿರಲಿ ಯಾರು ಅಂತ ನೋಡದೆ ತಕ್ಷಣ ಅವರಿಗೆ ಉಪಕಾರ ಮಾಡಬೇಕು. ಯಾಕೆಂದರೆ ದೇವರು ಭಾವನಾತ್ಮಕವಾದ ಸಂಬಂಧವನ್ನು ಒಂದೇ ರೀತಿ ಕೊಟ್ಟಿದ್ದಾರೆ. ಇವತ್ತು ನಮ್ಮನ್ನು ಬೇರೆ ಬೇರೆ ಹೆಸರಲ್ಲಿ ಕರೆಯಬಹುದು. ಆದರೆ ಮನುಷ್ಯನ ಕಾಲ ಕಳೆದ ನಂತರ ಆತನ ಹೆಸರನ್ನು ಹೇಳದೆ ಮೃತ ದೇಹ ಬಂದಿದೆಯೋ ಎಷ್ಟು ಗಂಟೆಗೆ ಅಂತ ಹೇಳುವ ಕಾಲ ಇದು. ಅಲ್ಲಿ ಯಾವುದೇ ಜಾತಿಯ ಹೆಸರನ್ನು ಹೇಳುವುದರ ಬದಲು “ಮೃತ ದೇಹ” ಅಂತ ಮಾತ್ರ ಹೇಳಲಾಗುತ್ತದೆ. ನಮ್ಮ ನಮ್ಮ ಧರ್ಮವನ್ನು ಬಹಳ ಅಚ್ಚುಕಟ್ಟಾಗಿ ಆಚರಿಸಿ ಇತರ ಧರ್ಮವನ್ನು ನಾವು ಗೌರವಿಸಿ, ಈ ಮೂಲಕ ಉತ್ತಮವಾದ ವಿಶ್ವಾಸ ಸಹಿತ ಸಮಾಜವನ್ನು ಹಾಗೂ ದೇಶವನ್ನು ನಿರ್ಮಾಣ ಮಾಡೋಣ. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ನಾವು ಸ್ವೀಕರಿಸಿ ಅದನ್ನು ಚರ್ಚೆ ಮಾಡಿಕೊಂಡು ಪರಸ್ಪರ ಅರ್ಥ ಮಾಡಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಇದ್ದು, ನಾವೆಲ್ಲರೂ ತುಳುನಾಡಿನವರು ಒಗ್ಗಟ್ಟಿನಿಂದ ಮುಂದೆ ಹೋದಲ್ಲಿ ಅದು ನಿಜವಾದ ಸಾಮರಸ್ಯ. ಪ್ರತಿಯೊಂದು ಸಮಾಜದವರು ದೊಡ್ಡಮಟ್ಟದ ಜವಾಬ್ದಾರಿಯನ್ನು ವಹಿಸಬೇಕು ಅಂತ ವಿನಂತಿಸುತ್ತಿದ್ದೇನೆ. ಆದ ಕಾರಣ ದೊಡ್ಡಮಟ್ಟದ ಸಂದೇಶ ನಮಗೆ ಇಲ್ಲಿಂದ ಬರುವಂತಾಗಬೇಕು. ವ್ಯಾಪಾರದ ದೃಷ್ಟಿಯಿಂದ ಯಾರಿಗೂ ಯಾವುದೇ ರೀತಿಯ ತೊಂದರೆ ಇಲ್ಲ. ಇಂದು ನಾವೆಲ್ಲರೂ ಜೊತೆಯಾಗಿ ಮುಂದೆ ಹೋಗುವ ಅಗತ್ಯ ಇದೆ. ಆದುದರಿಂದ ದೊಡ್ಡಮಟ್ಟದ ಸೌಹಾರ್ದತೆಗೆ ಮುಂಬೈಯಲ್ಲಿರುವ ಎಲ್ಲಾ ಸಮಾಜದವರ ದೊಡ್ಡ ಮಟ್ಟದ ಕೊಡುಗೆಯ ಅಗತ್ಯವಿದೆ. ಅದೇ ರೀತಿ ಸಮಿತಿಯು ಮುಂದಿನ ನಮ್ಮ ಜಿಲ್ಲೆಗಳ ಮುಂದಿನ ನೂರು ವರ್ಷಗಳ ಅಭಿವೃದ್ಧಿ ಬಗ್ಗೆ ವರದಿಯನ್ನು ಸರಕಾರಕ್ಕೆ ಕೊಟ್ಟಿದ್ದೀರಿ. ಮುಂದಿನ ದಿನಗಳಲ್ಲಿ ಅದಕ್ಕೆ ಸಂಬಂಧಪಟ್ಟಂತಹ ಎನ್ವೈರ್ಮೆಂಟ್ ಮಂತ್ರಿಗಳಲ್ಲಿ ಮಾತುಕತೆ ನಡೆಸಿ ನಿಮ್ಮನ್ನು ಕರೆಸಿ ಒಂದು ಉನ್ನತ ಮಟ್ಟದ ಸಭೆಯನ್ನು ಹಮ್ಮಿಕೊಳ್ಳಲಿದ್ದೇನೆ. ಅದರಲ್ಲಿ ಸಾಧ್ಯವಾದುದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡೋಣ. ಭವಿಷ್ಯದಲ್ಲಿ ನಮ್ಮ ಜಿಲ್ಲೆಗೆ ಬೇಕಾದ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯಲು ನಾನು ಒರ್ವ ಸಹೋದರನಾಗಿ ಮುಂದೆ ಜವಾಬ್ದಾರಿಯನ್ನು ವಹಿಸಿಕೊಂಡು ಮುಂದಿವರಿಯುತ್ತೇನೆ. ಅದಕ್ಕಾಗಿ ನಾನು ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ನೀವೆಲ್ಲರೂ ವಿವಿಧ ಸಂಘ ಸಂಸ್ಥೆಗಳಲ್ಲಿದ್ದು ಟೀಕೆ ಟಿಪ್ಪಣಿ ಸಾಮಾನ್ಯ. ಅದರ ಬಗ್ಗೆ ಚಿಂತಿಸಬಾರದು. ಜಾತಿಭೇದವನ್ನ ಬದಿಗಿಟ್ಟು ನಾವೆಲ್ಲರೂ ಒಗ್ಗಟ್ಟಾಗಿ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಒಗ್ಗಟ್ಟಾಗಿ ಇದ್ದುಕೊಂಡು ತುಳುನಾಡಿನಲ್ಲಿ ಭವಿಷ್ಯದ ಮುಂದಿನ ಜನಾಂಗಕ್ಕೆ ಬೇಕಾಗುವಂತಹ ಪ್ರೀತಿ ಅತ್ಯುತ್ತಮ ಸಮಾಜವನ್ನು ನಿರ್ಮಾಣ ಗೊಳಿಸಲು ಮುಂದಾಗೋಣ. ಇವತ್ತಿನ ಜಯಶ್ರೀ ಕೃಷ್ಣಪರಿಸರ ಪ್ರೇಮಿ ಸಮಿತಿಯ 25ನೇ ಸಂಸ್ಥಾಪನೆ ದಿನಾಚರಣೆಯ ಅಭಿವೃದ್ಧಿಯ ಜೊತೆಯಲ್ಲಿ ನಮ್ಮ ಕರಾವಳಿ ಪ್ರದೇಶದ ಸೌಹಾರ್ದತೆ ಹಾಗೂ ಭವಿಷ್ಯದ ಅಭಿವೃದ್ಧಿಗೆ ಪೂರಕವಾದ ವೇದಿಕೆಯಲ್ಲಿ, ನೀವೆಲ್ಲರೂ ಬೇರೆ ಬೇರೆ ಕೆಲಸ ಇದ್ದರೂ ಕೂಡ ಪರಿಸರಕ್ಕೆ ಸಂಬಂಧಪಟ್ಟಂತ 25ನೇ ವರ್ಷದ ಈ ಕಾರ್ಯಕ್ರಮಕ್ಕೆ ಆಗಮಿಸಿ ನೀವೆಲ್ಲರೂ ತಮ್ಮ ಕೆಲಸವನ್ನು ಬದಿಗಿಟ್ಟು ಒಟ್ಟಿಗೆ ಸೇರಿದ್ದು ನಿಜಕ್ಕೂ ತುಳುನಾಡಿನ ಮೇಲಿನ ನಿಮ್ಮ ಪ್ರೀತಿ ವಿಶ್ವಾಸವನ್ನು ತೋರಿಸುತ್ತಿದೆ, ಮಾತ್ರವಲ್ಲದೆ ತುಳುನಾಡಿಗೆ ಗೌರವ ತರುವಂತಹ ಕಾರ್ಯಕ್ಕೆ ನೀವೆಲ್ಲರೂ ಒಟ್ಟಾಗಿ ಸೇರಿದ್ದೀರಿ. ನಿಮ್ಮೆಲ್ಲರ ಸಲಹೆ ಸೂಚನೆಯೊಂದಿಗೆ ನಾವೆಲ್ಲರೂ ಜೊತೆಯಾಗಿ ಮುಂದುವರಿಯೋಣ . ಹಿಂದೆ ಉಳಿದವನ ಕೈಯನ್ನು ಹಿಡಿದುಕೊಂಡು ಮುಂದಕ್ಕೆ ಕೊಂಡೋಯ್ಯುವ ಕಾರ್ಯ ನಿಮ್ಮೆಲ್ಲರಿಂದಾಗಲಿ. ಮುಂದಿನ ಅಧಿವೇಶನ ಆಗುವಾಗ ನೀವೆಲ್ಲರೂ ಬೆಂಗಳೂರಿಬರಬೇಕು. ತುಳು ಭಾಷೆಯನ್ನು ಎರಡನೇ ದರ್ಜೆಗೆ ತರುವ ದ ಬಗ್ಗೆ ಚರ್ಚೆ ನಡೆಯುತ್ತಿ. ಅದನ್ನು ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ತುಳಿನಾಳಿನ ನಮ್ಮ ದೇವರು ನಮಗೆ ನೀಡಿದ್ದು ಇದನ್ನು ಕಾರ್ಯರೂಪಕ್ಕೆ ತರುದರಲ್ಲಿ ಸಂದೇಹವಿಲ್ಲ ಎಂದರು.
ಸೆ. 5, ರಂದು ಕರಾವಳಿ ಜಿಲ್ಲೆಗಳ ಅಭಿವೃದ್ದಿಗೆ ಕಳೆದ 25ವರ್ಷಗಳಿಂದ ಯಶಸ್ವಿ ಹೋರಾಟ ನಡೆಸುತ್ತಾ ಬಂದಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ, ಸಮಾರಂಭವು ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್, ಇಲ್ಲಿ ಜರಗಿದ್ದು ವೇದಿಕೆಯಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್, ಶ್ರೀ ದಿಗಂಬರ ಜೈನ ಮಠ, ಮೂಡಬಿದಿರೆ, ದ.ಕ., ಇದರ ಜಗದ್ಗುರು ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವಾರ್ಯ ಮಹಾಸ್ವಾಮಿಜಿ, ಖ್ಯಾತ ಉದ್ಯಮಿ, ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಸಮಿತಿಯ ರಾಜ್ಯ ಸಂಯೋಜಕ ಕೆ. ಪಿ. ಜಗದೀಶ ಅಧಿಕಾರಿ, ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ, ಸಮಿತಿಯ ಗೌರವ ಕೋಶಾಧಿಕಾರಿ ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ ಉಪಸ್ಥಿತರಿದ್ದರು.
ಮುಂಬಯಿಯ 25 ಜಾತೀಯ ಸಂಘಟನೆಗಳಾದ ಮೊಗವೀರ ವ್ಯವಸ್ಥಾಪಕ ಮಂಡಳಿ, ಬಂಟರ ಸಂಘ ಮುಂಬಯಿ, ಬಿ.ಎಸ್.ಕೆ.ಬಿ. ಅಸೋಸಿಯೇಶನ್, ಸಯಾನ್, ಬಾಂಬೆ ಬಂಟ್ಸ್ ಅಸೋಸಿಯೇಶನ್, ದಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್, ಒಕ್ಕಲಿಗರ ಸಂಘ ಮಹಾರಾಷ್ಟ್ರ, ದೇವಾಡಿಗ ಸಂಘ, ಮುಂಬಯಿ, ಸಾಫಲ್ಯ ಸೇವಾ ಸಂಘ, ಭಂಡಾರಿ ಸೇವಾ ಸಮಿತಿ, ಅಖಿಲ ಕರ್ನಾಟಕ ಜೈನ್ ಸಂಘ, ಕುಲಾಲ ಸಂಘ, ಮುಂಬಯಿ, ಗಾಣಿಗ ಸಮಾಜ, ಮುಂಬಯಿ, ಪದ್ಮಶಾಲಿ ಸಮಾಜ ಸೇವಾ ಸಂಘ, ಹೆಗ್ಗಡೆ ಸೇವಾ ಸಂಘ, ತೀಯಾ ಸಮಾಜ, ಮುಂಬಯಿ, ರಜಕ ಸಂಘ, ಮುಂಬಯಿ, ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್, ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ, ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಷಿಯೇಶನ್ಸ್ ಮಹಾರಾಷ್ಟ್ರ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್, ಜವಾಬ್, ಶಾಫಿ ವೆಲ್ಫೇರ್ ಅಸೋಸಿಯೇಶನ್ ಮತ್ತು ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಷನ್, ಇದರ ಅಧ್ಯಕ್ಷರುಗಳನ್ನು / ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸಮಿತಿಯ ಪರವಾಗಿ ವಿಶೇಷವಾಗಿ ಸನ್ಮಾನಿಸಿದರು.




