
ಕಾರ್ಕಳ ತಾಲೂಕಿನ ನೆಲ್ಲಿಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸಂಭ್ರಮ. 2025ರ ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಎರಡು ದಿನಗಳ ‘ಶತಮಾನೋತ್ಸವ ಸಂಭ್ರಮ’ ನಡೆಸಬೇಕೆಂದು ತೀರ್ಮಾನಿಸಲಾಗಿದೆ. ಶಾಲೆಯ ಗತ ವರ್ಷದ ನೆನಪಿನಲ್ಲಿ ಶಾಲಾ ಶತಮಾನೋತ್ಸವ ಸಮಿತಿಯು ಸ್ಮರಣ ಸಂಚಿಕೆಯನ್ನು ಪ್ರಕಟಿಸುವ ಆಶಯವನ್ನು ಹೊಂದಿದ್ದು, ಇದಕ್ಕಾಗಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಬರಹಗಳನ್ನು ಆಹ್ವಾನಿಸಲಾಗಿದೆ.
ಶಾಲೆಯಲ್ಲಿ ಓದಿದ ಊರ-ಪರ ಊರುಗಳಲ್ಲಿ ನೆಲೆಸಿರುವವರು ಇಲ್ಲಿ ಕಲಿತ ಬಾಲ್ಯದ ನೆನಪುಗಳನ್ನು, ಪ್ರಭಾವ ಬೀರಿದ ಶಿಕ್ಷಕರನ್ನು ಕುರಿತಂತೆ, ಊರಿನ ಜೀವನ ಪ್ರೀತಿಯನ್ನು ಪದಪುಂಜಗಳಲ್ಲಿ ವ್ಯಕ್ತಪಡಿಸುವುದಕ್ಕೆ ಅವಕಾವಿದೆ. ಹಾಗೆಯೇ ತಮ್ಮಲ್ಲಿ ಶಾಲೆಗೆ ಸಂಬಂಧಪಟ್ಟಂತೆ ಸ್ಮರಣೀಯ ಭಾವಚಿತ್ರಗಳಿದ್ದಲ್ಲಿ ಶತಮಾನೋತ್ಸವ ಸ್ಮರಣಾ ಸಂಚಿಕೆ ಸಂಪಾದಕರಿಗೆ ಕಳುಹಿಸಿ ಕೊಡಲು ಕೋರಲಾಗಿದೆ. 2024ರ ಡಿಸೆಂಬರ್ 31ರ ಒಳಗೆ
nellikarusanthosh92@gmail.com 9449444240
ಈ ಸಂಪರ್ಕ ಸಂಖ್ಯೆಗೆ ಕಳುಹಿಸಿಕೊಡಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
.
.
.
.
.
.