

ಬೊಯಿಸರ್ : ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪರಿಸರದಲ್ಲಿ ಆಧ್ಯಾತ್ಮಿಕ ಅನುಭೂತಿಯನ್ನುಂಟು ಮಾಡುತ್ತಾ ಪಾಲ್ಘರ್ ಜಿಲ್ಲೆಯಲ್ಲಿನ ತುಳು ಕನ್ನಡಿಗರ ಸಾಂಸ್ಕೃತಿಕ ಶೃದ್ಧಾ ಕೇಂದ್ರವೆನಿಸಿದ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಇದೇ ಬರುವ ತಾ 13 ನೆಯ ನವೆಂಬರ್ ಬುಧವಾರದಂದು ಸಂಜೆ 5ಕ್ಕೆ ಮಂದಿರದ ಆವರಣದಲ್ಲಿ ತುಳಸೀ ವಿವಾಹ ಪೂಜಾ ಕಾರ್ಯಕ್ರಮ ಮತ್ತು ಕಾರ್ತಿಕ ವಿಶೇಷ ದೀಪೋತ್ಸವವನ್ನು ಭಕ್ತಾದಿಗಳಿಂದ ಆಚರಿಸಲಾಗುವುದು.
ಕಾರ್ತಿಕ ಮಾಸದಲ್ಲಿ ತಮ್ಮ ಮನೆಯಂಗಳ , ದ್ವಾರದಲ್ಲಿನ ಜೊತೆಗೆ ಮಂದಿರಗಳಲ್ಲಿ ಎಣ್ಣೆ ದೀಪ ಹಚ್ಚುವುದರಿಂದ ವಿಶೇಷ ದೈವಾನುಗ್ರಹ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.
ಸದ್ಗುರು ಶ್ರೀ ಸ್ವಾಮಿ ನಿತ್ಯಾನಂದ
ಬಾಬಾ ಇವರ ದಿವ್ಯ ಕೃಪೆಯಿಂದ ಜರಗುವ ಈ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಕುಟುಂಬ ಸಮೇತ ಬಂದು ಭಾಗವಹಿಸ ಬೇಕಾಗಿ ಶ್ರೀ ನಿತ್ಯಾನಂದ ಸ್ವಾಮಿ ಭಕ್ತ ವೃಂದದ ಸರ್ವಸದಸ್ಯರು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಸುದ್ದಿ : ಪಿ.ಆರ್.ರವಿಶಂಕರ್
.
.
.
.
.