ಕರ್ನಾಟಕ ಸಂಘ ಕಲ್ಯಾಣ ಸಂಘ ಸ್ಥಾಪನೆಯಾಗಿ 21 ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಘದ ವಾರ್ಷಿಕ ಕಾರ್ಯಕ್ರಮವಾಗಿ ವಿಜ್ರಂಭಣೆಯಿಂದ ಆಚರಿಸುತ್ತಿದ್ದು ಈ ವರ್ಷ 16 ನವೆಂಬರ್ ದಂದು ಸಂಜೆ 5ರಿಂದ ಕಲ್ಯಾಣ ಪಶ್ಚಿಮದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಆಚರಿಸಲಾಗುವುದು.ಆ ಪ್ರಯುಕ್ತ ಲಯನ್ ಕರ್ನಲ್.ಪ್ರಕಾಶ್ ಪಾಂಡುರಂಗಿಯವರು ಮುಖ್ಯ ಅತಿಥಿಗಳಾಗಿ ಹಾಗೂ ನವಿ ಮುಂಬಯಿ ಕನ್ನಡ ಸಂಘದ ಚೇರ್ಮನ್ ಶ್ರೀ ಬಿ.ಎಚ್.ಕಟ್ಟಿಯವರು ಗೌರವ ಅತಿಥಿಗಳಾಗಿ ಆಗಮಿಲಿದ್ದಾರೆ.ಈ ಸಂದರ್ಭದಲ್ಲಿ ಸಮಾಜ ಸೇವಕ ಇಂಜಿನಿಯರ್ ಶ್ರೀ ಸತೀಶ್ ಅಲಗೂರ್ ಹಾಗೂ ಉದ್ಯಮಿ ಶ್ರೀ ಹರೀಶ್ ಪ್ರಭುರವರನ್ನು ಸನ್ಮಾನಿಸಲಾಗುವುದು. ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ 10 ನವೆಂಬರ್ ದಂದು ಸಂಜೆ 3ರಿಂದ ವಿವಿಧ ಸ್ಪರ್ಧೆಗಳನ್ನು ಸಂಘದ ಕಾರ್ಯಲಯದಲ್ಲಿ ಏರ್ಪಡಿಸಲಾಯಿತು. ನವೆಂಬರ್ 16ರ ರಾಜ್ಯೋತ್ಸವ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಲಿದ್ದು ಸಭಾ ಕಾರ್ಯಕ್ರಮಗಳ ಜೊತೆಗೆ ಸಂಘದ “ಸ್ಮರಣ ಸಂಚಿಕೆ 2024″ಯನ್ನು ಬಿಡುಗಡೆ ಮಾಡಲಾಗುವುದು.ಕಲ್ಯಾಣ ಪರಿಸರದ ಹಾಗೂ ಎಲ್ಲಾ ಕನ್ನಡ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ಕಾರ್ಯಕ್ರಮ ಕಮಿಟಿ ಚೇರ್ಮನ್, ಶ್ರೀ ಭಾಸ್ಕರ ಶೆಟ್ಟಿಯವರು ಹಾಗೂ ಸಂಘದ ಅಧ್ಯಕ್ಷ ಶ್ರೀ ಕೆ.ಎನ್.ಸತೀಶರು ವಿನಂತಿಸಿಕೊಂಡಿದ್ದಾರೆ.
