


ಮುಂಬಯಿ : ನಗರದ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಕರ್ನಾಟಕ ಹಾಗೂ ಕಾಸರಗೋಡು ಜಿಲ್ಲೆಯ ಕರಾವಳಿಯ ಮೋಯಾ (ಬೋವಿ) ಸಮುದಾಯದ ಹಿರಿಯ ಕ್ರೀಡಾ ಸಂಘಟನೆ, ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಇದರ 58 ನೇ ಆರ್ ಎನ್ ಉಚ್ಚಿಲ್ ಸ್ಮಾರಕ ವಾರ್ಷಿಕ ಅಥ್ಲೆಟಿಕ್ಸ್ ಮೀಟ್
ನ. 10 ರಂದು ಭಾನುವಾರದಂದು, ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಷನ್ ಗ್ರೌಂಡ್, ಚರ್ಚ್ಗೇಟ್, ಮುಂಬಯಿ ಇಲ್ಲಿ ನಡೆಯಿತು.

ಹಿರಿಯರಾದ ನಾರಾಯಣ ಬಿ ಉದ್ಯಾವರ್ ಸಮಾರಂಭವನ್ನು ಉದ್ಘಾಟಿಸಿದರು. ಕ್ಲಬ್ ನ ಅಧ್ಯಕ್ಷ ಸತೀಶ್ ಎನ್ ಉಚ್ಚಿಲ್ 58 ನೇ ದಿ. ಆರ್ ಎನ್ ಉಚ್ಚಿಲ್ ಸ್ಮಾರಕ ಅಥ್ಲೆಟಿಕ್ಸ್ ಕೂಟವನ್ನು ಉದ್ಘಾಟಿಸಿದರು.
ಇತ್ತೀಚೆಗೆ ಅಗಲಿದ ಕ್ಲಬ್ ನ ಮಾಜಿ ಅಧ್ಯಕ್ಷ ಮತ್ತು ಪ್ರಸಿದ್ಧ ಕ್ರೀಡಾಪಟು ಪುರುಷೋತ್ತಮ ಕೆ ಐಲ್ ಅವರಿಗೆ ಗೌರವ ಶ್ರದ್ದಾಂಜಲಿ ಅರ್ಪಿಸಲಾಯಿತು.
ಮುಂಬಯಿ ಮಹಾನಗರ ಹಾಗೂ ಉಪನಗರಗಲ್ಲಿನ ಕರ್ನಾಟಕ ಹಾಗೂ ಕಾಸರಗೋಡು ಜಿಲ್ಲೆಯ ಕರಾವಳಿಯ ಮೋಯಾ (ಬೋವಿ) ಸಮುದಾಯದ ಹಿರಿ ಕಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ನೂರಾರು ಮಂದಿ ಬಹಳ ಉತ್ಸಾಹದಿಂದ ಬಾಗವಹಿಸಿದರು.
ಸಿ ಕೆ ಉದ್ಯಾವರ್, ಪ್ರಮೋದ್ ಎಸ್ ಉಚ್ಚಿಲ್, ಚಂದ್ರಕಾಂತ್ ಎಸ್ ಉಚ್ಚಿಲ್, ಜಯಂತ್ ಎಸ್ ಉಚ್ಚಿಲ್, ಸುರೇಂದ್ರ ಬಿ ಉಚ್ಚಿಲ್, ಶ್ರೀಮತಿ ಮಂಜುಳಾ ಆರ್ ಉಚ್ಚಿಲ್ ಮತ್ತು ಶ್ರೀಮತಿ ಲತಾ ಎಂ ಉದ್ಯಾವರ್ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಿದರು. ನಾರಾಯಣ್ ಬಿ ಉದ್ಯಾವರ್ ಅವರು ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈದ ಈ ಕೆಳಗಿನ ಕೆಲವು ಉದಯೋನ್ಮುಖ ಪ್ರತಿಭೆಗಳನ್ನು ಸನ್ಮಾನಿಸಿದರು.
ಶ್ರೀಮತಿ ಅವಿಕಾ ಅವಿನಾಶ್ ಉದ್ಯಾವರ್ (ಅವಿನಾಶ್ ಉದ್ಯಾವರ್ ಮತ್ತು ಶ್ರೀಮತಿ ಕಾಜಲ್ ಉದ್ಯಾವರ್ ಅವರ ಪುತ್ರಿ)
ಪುಣೆಯ ಬಾಲೆವಾಡಿಯಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ಸಬ್ ಜೂನಿಯರ್ ಕರಾಟೆ ಚಾಂಪಿಯನ್ಶಿಪ್ 2024 ರಲ್ಲಿ ಕಂಚಿನ ಪದಕವನ್ನು ಪದಕವನ್ನು ಪಡೆದಿದ್ದರು. ಇಶಾನ್ ಎಸ್ ಐಲ್ (ಶ್ರೀಕಾಂತ್ ಐಲ್ ಮತ್ತು ಶ್ರೀಮತಿ ಸ್ಮಿತಾ ಐಲ್ ಅವರ ಪುತ್ರ)
11 ನೇ RGOI ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ 2023-24 ರಲ್ಲಿ ಚಿನ್ನ ಮತ್ತು ಕಂಚು ಗೆದ್ದಿದ್ದರು.
ಕವಿನ್ ಪ್ರದೀಪ್ ಉದ್ಯಾವರ್ ಮತ್ತು ಶ್ರೀಮತಿ ದಿವ್ಯಾ ಉದ್ಯಾವರ್.ಅವರ ಪುತ್ರ ಪ್ರದೀಪ್ ಎಂ ಉದ್ಯಾವರ್, ಅವರು ಅಥ್ಲೆಟಿಕ್ಸ್ ಗಮನಾರ್ಹವಾದ ದಾಖಲೆ ನಿರ್ಮಿಸಿದ್ದಾರೆ. ಕವಿನ್ ಇತ್ತೀಚೆಗೆ ಪುಣೆಯಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ಅಥ್ಲೆಟಿಕ್ಸ್ ಮೀಟ್ನಲ್ಲಿ 20 ವರ್ಷದೊಳಗಿನ ಡೆಕಾಥ್ಲಾನ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭುವನೇಶ್ವರದಲ್ಲಿ ಡಿಸೆಂಬರ್ 2024 ರ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಕವಿನ್ ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಖ್ಯಾತ ಕ್ರೀಡಾಪಟು ರಾಜಾ ಆರ್ ಉಚ್ಚಿಲ್ ಅವರು ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಈ ಕೆಳಗಿನ ಕ್ರಿಡಾಪಟುಗಳಿಗೆ ಚಾಂಪಿಯನ್ಶಿಪ್ ಟ್ರೋಫಿಗಳನ್ನು ವಿತರಿಸಿದರು:
ಗಾರ್ಗಿ ಕಾಸರಗೋಡು (9 ವರ್ಷದೊಳಗಿನ ಮಹಿಳಾ ಚಾಂಪಿಯನ್ ಪವನ್ ವೆಂಕಟ್ರಾಮನ್ ವಿಟ್ಟಲ್ ಸ್ಮಾರಕ ಟ್ರೋಫಿ), ಯಾಶಿಲ್ ಉದ್ಯಾವರ್
(9 ವರ್ಷಕ್ಕಿಂತ ಕೆಳಗಿನ ಪುರುಷರ ಚಾಂಪಿಯನ್ ಪವನ್ ವೆಂಕಟ್ರಾಮನ್ ವಿಟ್ಟಲ್ ಸ್ಮಾರಕ ಟ್ರೋಫಿ) ತನಿಶಾ ಸುಭಾಷ್ ಶಿರಿಯಾ (15 ವರ್ಷದೊಳಗಿನ ಮಹಿಳಾ ಚಾಂಪಿಯನ್ ವಸಂತ್ ಉಚ್ಚಿಲ್ ಸ್ಮಾರಕ ಟ್ರೋಫಿ), ಕೀರ್ತನ್ ಉಚ್ಚಿಲ್ (ಆನಂದ್ ಅಂಬು ಉದ್ಯಾವರ್ ಸ್ಮಾರಕ ಟ್ರೋಫಿ 18 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 25 ವರ್ಷಕ್ಕಿಂತ ಕೆಳಗಿನ ಚಾಂಪಿಯನ್ ಹುಡುಗರಿಗೆ). ಮತ್ತು ತ್ರಿಶಿ ಜಿ ಉಚ್ಚಿಲ್ (ವರ್ಷದ ಅತ್ಯುತ್ತಮ ಕ್ರೀಡಾ ಪಟು – ಆರ್ ಎನ್ ಉಚಿಲ್ ಸ್ಮಾರಕ ಟ್ರೋಫಿ).
ಕರ್ಪತ್ಕಿರ್ಯಮೊಯರ್ ಅವರು ವರ್ಷದ ಚಾಂಪಿಯನ್ ಟ್ರೋಫಿಯ ವಿಜೇತರು, ಚಂದ್ರಕಾಂತ್ ಎಸ್ ಉಚ್ಚಿಲ್ ಅವರು ಶ್ರೀಮತಿ ಉಷಾ ಜಿ ಉಚ್ಚಿಲ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿದರು.
ಮೊಯಾ ಸಮಾಜ ಬಾಂಧವರು 200ಕ್ಕೂ ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕ್ಲಬ್ ನ ಕಾರ್ಯದರ್ಶಿ ದರ್ಶನ್ ಬಟ್ಟಪಾಡಿ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು