April 2, 2025
ಮುಂಬಯಿ

ಬಿಲ್ಲವರ ಅಸೋಸಿಯೇಷನ್, ಮುಂಬೈ, ಇದರ ದೊಂಬಿವೀಲಿ ಸ್ಥಳೀಯ ಕಚೇರಿಯ 2024-2027 ರ ನೂತನ ಕಾರ್ಯಾಧ್ಕ್ಷರಾಗಿ ಶ್ರೀ ಶ್ರೀಧರ್ ಬಿ. ಅಮೀನ್ ಅಯ್ಕೆ

ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ದೊಂಬಿವೀಲಿ ಸ್ಥಳೀಯ ಕಚೇರಿಯ 2024-2027 ರ ನೂತನ ಕಾರ್ಯಕಾರಿ ಸಮಿತಿಯ ರಚನೆ ರವಿವಾರ ದಿನಾಂಕ 10-11-2024 ರಂದು ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ಅಧ್ಯಕ್ಷ ಹರೀಶ್ ಜಿ. ಆಮೀನ್ ರವರ ಅಧ್ಯಕ್ಷೆಯಲ್ಲಿ ನಡೆಯಿತು.

ಪ್ರಾರಂಭದಲ್ಲಿ ಪುರೋಹಿತ ಐತಪ್ಪ ಸುವರ್ಣರು ಗುರು ಪೂಜೆಗೈದ ನಂತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಹರೀಶ್ ಜಿ. ಅಮೀನ್ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಪುರುಷೋತ್ತಮ್ ಕೋಟ್ಯಾನ್ , ಶ್ರೀಮತಿ ಜಯಂತಿ ವಿ. ಉಳ್ಳಾಲ್, ಮೋಹನ್ ಕೋಟ್ಯಾನ್ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಸನಿಲ್ ಹಾಗೂ ಸ್ಥಳೀಯ ಕಾರ್ಯಾಲಯದ ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್, ಗೌರವ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಉಪ ಕಾರ್ಯಾಧ್ಯಕ್ಷರಾದ ಪುರಂದರ ಪೂಜಾರಿ , ಶ್ರೀಧರ್ ಅಮೀನ್, ಗೌರವ ಕಾರ್ಯದರ್ಶಿ ಸಚಿನ್ ಪೂಜಾರಿ, ಗೌರವ್ ಕೋಶಾಧಿಕಾರಿ ಶ್ರೀ ಆನಂದ್ ಡಿ. ಪೂಜಾರಿ ಉಪಸ್ಥಿತರಿದ್ದರು.ಜೊತೆ ಕಾರ್ಯದರ್ಶಿ ವಿಶ್ವನಾಥ್ ತೋನ್ಸೆ ಕೇಂದ್ರ ಕಾರ್ಯಾಲಯದಿಂದ ಆಗಮಿಸಿದ್ದ ಎಲ್ಲಾ ಗಣ್ಯರನ್ನು ಹಾಗೂ ಸಮಜಭಾಂಧವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಚಂದ್ರಹಾಸ್ ಪಾಲನ್ ನೂತನ ಅಧ್ಯಕ್ಷ ಹರೀಶ್ ಜಿ ಅಮೀನ್ ರವರಿಗೆ ಶಾಲುಹೊದಿಸಿ ಪುಷ್ಪಗುಚ್ಛ ಇತ್ತು ಗೌರವಿಸಿದರು ಹಾಗು ವೇದಿಕೆಯಲ್ಲಿದ್ದ ಕೇಂದ್ರ ಕಾರ್ಯಾಲಯದ ಎಲ್ಲಾ ಪದಾಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸತ್ಕರಿಸಲಾಯಿತು.ಡೊಂಬಿವಿಲಿಯಿಂದ ಕೇಂದ್ರ ಕಾರ್ಯಾಲಯದ ಸಮಿತಿಯಲ್ಲಿ ಗೌರವ ಪ್ರಧಾನ ಕೋಶಾಧಿಕಾರಿಯಾಗಿ ನೇಮಕವಾಗಿರುವ ಡೊಂಬಿವಲಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀಯುತ ರವಿ ಎಸ್. ಸನಿಲ್ ರವರಿಗೆ ಶಾಲು ಹೊದಿಸಿ, ಫಲಪುಷ್ಪವಿತ್ತು ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಸಚಿನ್ ಪೂಜಾರಿ ಕಳೆದ ಮೂರು ವರ್ಷದ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.ಬಿಲ್ಲವರ ಅಸೋಸಿಯೇಷನ್ ಜೊತೆ ಕಾರ್ಯದರ್ಶಿ ವಿಶ್ವನಾಥ್ ತೋನ್ಸೆ ಯವರು ನೂತನ ಸಮಿತಿಯ ಯಾದಿಯನ್ನು ವಾಚಿಸಿ ಸದಸ್ಯರಿಗೆ ಶಪಥ ವಿಧಿ ಓದಿಸಿದರು. ನೂತನ ಸಮಿತಿ ಈ ಕೆಳಗಿನಂತಿದೆ.ಗೌರವ ಕಾರ್ಯಧ್ಯಕ್ಷ: ಮಂಜಪ್ಪ ಕೆ. ಪೂಜಾರಿ, ಕಾರ್ಯಾಧ್ಯಕ್ಷ: ಶ್ರೀಧರ್ ಬಿ ಅಮೀನ್, ಉಪ ಕಾರ್ಯಾಧ್ಯಕ್ಷರು: ಚಂದ್ರಹಾಸ್ ಯಸ್. ಪಾಲನ್ ಹಾಗೂ ಸಚಿನ್ ಜಿ. ಪೂಜಾರಿ. ಗೌರವ ಕಾರ್ಯದರ್ಶಿ: ಜಗದೀಶ್ ಜೆ. ಕೋಟ್ಯಾನ್, ಸಹಕಾರ್ಯದರ್ಶಿ ವಿಠ್ಠಲ್ ಪಿ.ಅಮೀನ್, ಗೌರವ ಕೋಶಾಧಿಕಾರಿ ಆನಂದ ಡಿ ಪೂಜಾರಿ, ಸಹಕೋಶಾಧಿಕಾರಿ ಜಗನ್ನಾಥ್ ಸನಿಲ್ *ಸಮಿತಿ ಸದಸ್ಯರು* ರವಿ ಎಸ್. ಪೂಜಾರಿ, , ರಾಜೇಶ್ ಸಿ. ಕೋಟ್ಯಾನ್, ಕೃಷ್ಣ ಎಲ್.ಪೂಜಾರಿ, ಪುರಂದರ ಯಂ. ಪೂಜಾರಿ, ಅನ್ನು ಕೆ. ಪೂಜಾರಿ , ಗಣೇಶ್ ಯಸ್. ಪೂಜಾರಿ , ರತನ್ ಜೆ. ಪೂಜಾರಿ , ಶ್ರೀಮತಿ ದೇವಿಕಾ ಕೆ. ಸಾಲಿಯಾನ್ *ವಿಶೇಷ ಆಮಂತ್ರಿತರು*ಶ್ರೀ ದೇವದಾಸ್ ಗುಜರಾನ್, ಐತ್ತಪ್ಪ ಸುವರ್ಣ , ಈಶ್ವರ್ ಕೋಟ್ಯಾನ್ , ಅಶೋಕ್ ಅಮೀನ್, ರಾಜೇಶ್ ಕೋಟ್ಯಾನ್ , ರಾಘವೇಂದ್ರ ಕಾಪು , ಸುಜಿತ್ ಅಮೀನ್, ಶ್ರೀಮತಿ ಗುಣವತಿ ಪೂಜಾರಿ, ವಿನೋದ ಪೂಜಾರಿ, ವಸಂತಿ ಅಮೀನ್ , ಸುನಿತಾ ಗುಜರಾನ್ , ಸುಮಿತ್ರ ಪೂಜಾರಿ, ಜ್ಯೋತಿ ಅಶೋಕ್ ಸಾಲಿಯಾನ್.*ಯುವ ಅಬ್ಯುದಯ ಸಮಿತಿಯ ಪ್ರತಿನಿಧಿಗಳು *ಶ್ರೀ ರಕ್ಷಣ್ ಸಾಲಿಯಾನ್ , ಕಾರ್ತಿಕ್ ಪೂಜಾರಿ , ಚಿನ್ಮಯ್ ಸಾಲ್ಯಾನ್, ರೋಷನ್ ಪೂಜಾರಿ, ನಿಖಿಲ್ ಕೋಟ್ಯಾನ್ , ದೀಕ್ಷಿತ್ ಪೂಜಾರಿ, ಸಚೇತ್ ಬಂಗೇರ, ಗಿರೀಶ್ ಪೂಜಾರಿ , ಕುಮಾರಿ ನಿಕಿತಾ ಪೂಜಾರಿ, ದೀಕ್ಷಿತಾ ಅಮೀನ್ , ಸ್ಮಿತಾ ಪೂಜಾರಿ, ಭವ್ಯ ಪೂಜಾರಿ , ಅನುಪ್ರಿಯಾ ಪೂಜಾರಿ, ರಿತಿಕಾ ಸುವರ್ಣ , ಐಶ್ವರ್ಯ ಕೋಟ್ಯಾನ್, ತೃಶಾ ಸುವರ್ಣ.

ಈ ಸಂದ ರ್ಬದಲ್ಲಿ ಉಪಸ್ಥಿತರಿದ್ದ ಯುವ ಅಬ್ಯುದಯದ ಕಾರ್ಯಾಧ್ಯಎಕ್ಷರಾದ ನಿಲೇಶ್ ಪೂಜಾರಿ ಪಾಲಿಮರ್, ನವೀನ್ ಪೂಜಾರಿ ಪಡು ಇನ್ನ, ಯೋಗೇಶ್ ಪೂಜಾರಿ, ಹರೀಶ್ ಶಾಂತಿ , ರವಿ ಸುವರ್ಣ , ಸೋಮನಾಥ್ ಪೂಜಾರಿ ರವರಿಗೆ ಪುಷ್ಪ ಗುಚ್ಚವಿತ್ತು ಸನ್ಮಾನಿಲಾಯಿತು.ರವಿ ಸನಿಲ್ ರವರು ಡೊಂಬಿವಲಿ ಸ್ಥಳೀಯ ಕಚೇರಿ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿದರು ಹಾಗು ಕೆಳೆದ ಮೂರೂ ವರ್ಷದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಹಿರಿಯರಾದ ಹಾಗು ನಿರ್ಗಮಿತ ಗೌರವ ಕಾರ್ಯಾಧ್ಯಕ್ಷ ಶ್ರೀ ದೇವರಾಜ್ ಪೂಜಾರಿ ರವರು ಸ್ಥಳೀಯ ಸಮಿತಿಯಲ್ಲಿ ವಿವಿಧ ಹುದ್ದೆಯಲ್ಲಿ ನೀಡಿದ ಸೇವೆಯನ್ನು ಪರಿಗಣಿಸಿ ಅವರನ್ನು ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಶಾಲು ಹೊದೆಸಿ ಫಲಪುಷ್ಪವಿತ್ತು ಗೌರವಿಸಲಾಯಿತು. ದೇವರಾಜ್ ಪೂಜಾರಿಯವರು ತನ್ನ 35 ವರ್ಷದ ಸೇವೆಯನ್ನು ನೆನೆಯುತ್ತ ತನಗೆ ಡೊಂಬಿವಲಿ ಸ್ಥಳೀಯ ಸಮಿತಿ ಹಾಗು ಕೇಂದ್ರ ಕಾರ್ಯಾಲಯ ನೀಡಿದ ಸಹಕಾರಕ್ಕೆ ಧನ್ಯವಾದ ನೀಡಿದರು.

ಶ್ರೀಯುತ ಚಂದ್ರಹಾಸ್ ಪಾಲನ್ ಸ್ಥಳೀಯ ಕಛೇರಿ ನಡೆದು ಬಂದ ದಾರಿಯನ್ನು ನೆನೆಯುತ್ತ ಕಳೆದ ವರ್ಷಗಳಲ್ಲಿ ಸಹಕಾರ ನೀಡಿದ ಎಲ್ಲಾ ಸಮಾಜ ಬಾಂಧವರಿಗೆ, ಕೇಂದ್ರ ಕಚೇರಿಗೆ ಕೃತಜ್ಞತೆ ಸಲ್ಲಿಸಿದರು. ನೂತನವಾಗಿ ನೇಮಕಗೊಂಡ ಕಾರ್ಯಾಧ್ಯಕ್ಷ ಶ್ರೀಧರ್ ಅಮೀನ್ ಇದು ಸ್ಥಳೀಯ ಕಛೇರಿ ಮಾತ್ರ ಅಲ್ಲ, ಬ್ರಹ್ಮ ಶ್ರೀ ನಾರಾಯಣಗುರು ಮಂದಿರ, ತನಗಾದ ಅನುಭವವನ್ನು ವಿವರಿಸುತ್ತಾ, ದೊಂಬಿವೀಲಿಯಲ್ಲಿರುವ ಪ್ರತಿಯೊಬ್ಬ ಸಮಾಜ ಬಾಂಧವರು ಗುರುಗಳ ಮಂದಿರಕ್ಕೆ ಬನ್ನಿ ಎಂದು ಹವ್ಯಾನಿಸಿದರು. ತನ್ನನ್ನು ಕಾರ್ಯಾಧ್ಯಕ್ಷನ್ನಾಗಿ ನೇಮಕ ಮಾಡಿದ ಕೇಂದ್ರದ ಕಾರ್ಯಕಾರಿ ಸಮಿತಿಗೂ ಹಾಗೂ ಸ್ಥಳೀಯ ಸಮಿತಿಗೂ ತಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹರೀಶ್ ಜಿ. ಆಮೀನ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಡೊಂಬಿವಲಿ ಸಮಿತಿಯಲ್ಲಿ ನೂತನವಾಗಿ ನೇಮಕವಾಗಿರುವ ಎಲ್ಲಾ ಸದಸ್ಯರಿಗೂ ಅಭಿನಂದಿಸಿದರು. ಹಾಗು ಡೊಂಬಿವಲಿಯಿಂದ ಹೆಚ್ಚಿನ ಮತದಾರರು ತನ್ನ ತಂಡಕ್ಕೆ ಮತ ಹಾಕಿ ತಮ್ಮನ್ನು ಗೆಲ್ಲಿಸಿದ್ದಕ್ಕೆ ಕೃತಜ್ಞತೆ ಯನ್ನಿತ್ತರು .ಕೇಂದ್ರ ಕಾರ್ಯಾಲಯದ ಮುಂದಿನ ಎಲ್ಲಾ ಯೋಜನೆಗಳಿಗೆ ತುಂಬು ಹೃದಯದ ಸಹಕಾರವನ್ನು ಕೋರಿದರು. ಸ್ಥಳೀಯ ಸಮಿತಿಯ ಒಗ್ಗಟ್ಟು ಕಂಡು ನನಗೆ ತುಂಬಾ ಸಂತೋಷವಾಗಿದೆ. ನಾವೆಲ್ಲರೂ ಒಂದಾಗಿ ಸಮಾಜದ ಬಗ್ಗೆ ಶ್ರಮಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಜೊತೆ ಕಾರ್ಯದರ್ಶಿ ವಿಶ್ವನಾಥ್ ತೋನ್ಸೆ ರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆ ಜನಗಣಮನ ಹಾಡಿದ ನಂತರ ಸಭೆ ಮುಕ್ತಾಯವಾಯಿತು.

Related posts

ಕರ್ನಾಟಕ ಸಂಘ, ಸಯನ್ ದಸರಾ ಹಬ್ಬದ ನಿಮಿತ್ತ ಭಜನೆ ಕಾರ್ಯಕ್ರಮ

Mumbai News Desk

ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ದಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಿಂದರಿನ ವಾರ್ಷಿಕ ಮಹಾಸಭೆ.

Mumbai News Desk

ಭಾಜಪಾ ಥಾಣೆ ಜಿಲ್ಲಾ ವತಿಯಿಂದಒಂದು ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮ.

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಾರ್ಷಿಕ ವಿಹಾರ ಕೂಟ

Mumbai News Desk

ಕುಲಾಲ ಸಂಘ ಮುಂಬಯಿ,ಥಾಣ, ಕಸರಾ , ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಹಳದಿ ಕುಂಕುಮ

Mumbai News Desk