



ಕಲ್ಚರಲ್ ಟೀಮ್ ಭಿವಂಡಿ, ಇದರ 5ನೇ ವಾರ್ಷಿಕ ಸಂಭ್ರಮ ನವಂಬರ್ 17ರಂದು, ಆದಿತ್ಯವಾರ ಭಿವಂಡಿಯ ಪದ್ಮನಗರದ ಸ್ವಾಮಿ ಅಯ್ಯಪ್ಪ ಮಂದಿರದ ಮೈದಾನದಲ್ಲಿ ಶ್ರೀಮತಿ ಮತ್ತು ಶ್ರೀ ಹರೀಶ್ ಶೆಟ್ಟಿ ವೇದಿಯಲ್ಲಿ, ಬೆಳ್ಳಿಗೆ 10ರಿಂದ ರಾತ್ರಿ 8ರ ತನಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಅಂದು ಬೆಳ್ಳಿಗೆ 10ಗಂಟೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆದ ಬಳಿಕ, ಮಧ್ಯಾಹ್ನ 1.30ರಿಂದ 3ರ ತನಕ ವಿಠ್ಠಲ್ ನಾಯಕ ಕಲ್ಲಡ್ಕ ಮತ್ತು ತಂಡದವರು ಗೀತಾ ಸಾಹಿತ್ಯ ವೈಭವ ನಡೆಸಿಕೊಡಲಿರುವರು.
3ರಿಂದ ಸಂಜೆ 4.30ರ ತನಕ ಸಭಾ ಕಾರ್ಯಕ್ರಮವು ಬಿಲ್ಲವರ ಎಸೋಸಿಯೇಷನ್ ನ ಭಿವಂಡಿ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಮೋಹನ್ ದಾಸ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಜರಗಲಿದ್ದು, ಉದ್ಯಮಿಗಳು, ರಾಜಕೀಯ ನೇತಾರರು, ಸಮಾಜ ಸೇವಕರು ಅತಿಥಿ ಅಭ್ಯಾಗತರುಗಳಾಗಿ ಉಪಸ್ಥಿತರಿರುವರು.
ಸಮಾರಂಭದಲ್ಲಿ ಜ್ವಾಲಿ ಕಲೆಕ್ಷನ್ಸ್ ಭಿವಂಡಿ,ಇದರ ಮಾಲಕ, ಸಮಾಜ ಸೇವಕ ಹರೀಶ್ ಕೆ ಶೆಟ್ಟಿ, ಹಿರಿಯ ಕಲಾವಿದ ,ಸಮಾಜಸೇವಕ ಆನಂದ್ ಎಲ್ ಪೂಜಾರಿ, ರಂಗನಟ, ನಿರ್ದೇಶಕ ಕೋಡಿಯಡ್ಕ ಕ್ರಿಯೇಶನ್ಸ್ ನ ಅಶೋಕ್ ಕುಮಾರ್ ಕೊಡಯಾಡ್ಕ, ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದ ನರೇಂದ್ರ ಸುವರ್ಣ ಇವರನ್ನು ಗಣ್ಯರು ಸನ್ಮಾನಿಸಲಿರುವರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರು ನಾಗೇಶ್ ಪೊಳಲಿ ಅವರ ನಿರ್ದೇಶನದಲ್ಲಿ, ಕಲ್ಚರಲ್ ಟೀಮ್ ಭಿವಂಡಿ, ಇದರ ಮಕ್ಕಳಿಂದ “ಮಹಿಷ ಮರ್ದಿನಿ ” ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಮದ್ಯಾಹ್ನ ಊಟ, ಸಂಜೆ ಚಹಾ-ತಿಂಡಿ ಹಾಗೂ ರಾತ್ರಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ತುಳು -ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾರಂಭವನ್ನು ಯಶಸ್ಸುಗೊಳಿಸುವಂತ್ತೆ, ಕಲ್ಚರಲ್ ಟೀಮ್ ಭಿವಂಡಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ.