




ಸಂಘದಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದ ಜವಾಬ್ದಾರಿಯ ಅರಿವಾಗುತ್ತದೆ: ರಘು ಮೂಲ್ಯ ಪಾದೆಬೆಟ್ಟು
ಚಿತ್ರ ವರದಿ ದಿನೇಶ್ ಕುಲಾಲ್.
ಮುಂಬಯಿ ನ 18. ಸಂಘ ಈಗಾಗಲೇ ಐದು ಸ್ಥಳೀಯ ಸಮಿತಿಗಳನ್ನು ಹೊಂದಿದ್ದು ಸಮಾಜ ಬಾಂಧವರನ್ನು ಒಗ್ಗೂಡಿಸುವಲ್ಲಿ ನಿರಂತರ ಕಾರ್ಯಕ್ರಮಗಳೊಂದಿಗೆ ಕ್ರೀಯಾಶೀಲವಾಗಿದೆ. ಮಂಗಳೂರಿನ ಬಹು ಕೋಟಿ ವೆಚ್ಚದ ಯೋಜನೆ ಸಂಪೂರ್ಣಗೊಳ್ಳಬೇಕಾಗಿದೆ. ಇದಕ್ಕೆ ಸಮಾಜದ ಯುವ ಜನಾಂಗ ಮಾತ್ರವಲ್ಲದೆ ಸಂಘದ ಎಲ್ಲಾ ಐದು ಸ್ಥಳೀಯ ಸಮಿತಿಗಳು ಒಂದಾಗಿ ಒಂದು ಮುಷ್ಠಿಯಂತೆ ಕಾರ್ಯನಿರತವಾಗಬೇಕಾಗಿದೆ . ಯುವ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಯುವಕರು ಸಂಘ ದಲ್ಲಿ ಕಾರ್ಯ ನಿರ್ವಹಿಸಿದಾಗ ಸಮಾಜದ ಜವಾಬ್ದಾರಿ ಅರಿವಾಗುತ್ತದೆ ಎಂದು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆಬೆಟ್ಟು ನುಡಿದರು.
ನ.17 ರಂದು ಕುಲಾಲ ಸಂಘ ಮುಂಬಯಿಯ ಮೀರಾ ರೋಡ್ ವಿರಾರ್ ಸ್ಥಳಿಯ ಸಮಿತಿಯ ೨೦ನೇ ವಾರ್ಷಿಕ ಸ್ನೇಹ ಸಮ್ಮಿಲನವು ನಾಲಾಸೋಪಾರ ಪಶ್ಚಿಮದ ಗ್ಯಾಲಕ್ಸಿ ಸಭಾಂಗಣದಲ್ಲಿ ಜರಗಿದ್ದು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ್ ವೈ. ಮೂಲ್ಯರ ಉಪಸ್ಥಿತಿ ಯಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮಂಗಳೂರಿನ ಕುಲಾಲ ಭವನದ ಕಾರ್ಯವು ಅಂತಿಮ ಘಟ್ಟದಲ್ಲಿದ್ದು ಮುಂದಿನ ಮೇ ತಿಂಗಳಲ್ಲಿ ಲೋಕಾರ್ಪಣೆ ಮಾಡಲು ಸಮಾಜ ಬಾಂಧವರ ಹಾಗೂ ದಾನಿಗಳ ಸಹಕಾರವನ್ನು ನಾವು ಬಯಸುತ್ತಿದ್ದೇವೆ. ಸಂಘದ ಮುಂದಿನ ಅಭಿವೃದ್ಧಿಗಾಗಿ ಸಮಾಜದ ಹಿರಿ ಕಿರಿಯರೆಲ್ಲರೂ ಸಂಘದಲ್ಲಿ ಕ್ರೀಯಾಶೀಲರಾಗುದರೊಂದಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅತೀ ಅಗತ್ಯ. ಸಂಘಕ್ಕೆ ದಾನಿಗಳು ಇನ್ನೂ ಮುಂದೆ ಬರಬೇಕು, ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಮಾಜಿ ಅಧ್ಯಕ್ಷ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಮಾತನಾಡಿ ೯೪ ರ ಹರೆಯದ ಕುಲಾಲ ಸಂಘ ಮುಂಬಯಿ ಮತ್ತು ೨೦ರ ಹರೆಯದ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಗೆ ಅಭಿನಂದನೆ ಸಲ್ಲಿಸುತ್ತಾ ನಮ್ಮ ಯುವ ಜನಾಂಗದಲ್ಲಿ ಪ್ರತಿಭೆಯಿದೆ. ವಿವಿಧ ಪ್ರತಿಭೆಗಳನ್ನು ಹೊಂದಿದ ನಮ್ಮವರು ಸಂಘದಲ್ಲಿ ಭಾಗವಹಿಸಿ ದೇವರು ನೀಡಿದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಒಗ್ಗಟ್ಟಿನಿಂದ ಎಲ್ಲರು ಸಮಾಜ ಸೇವೆ ಮಾಡೋಣ, ಸಮಾಜದ್ದೇ ಆದ ಜ್ಯೋತಿ ಕ್ರೆಡಿಟ್ ಸೊಸೈಟಿಯ ಪ್ರಯೋಜನವನ್ನು ಸಮಾಜ ಬಾಂಧವರು ಪಡೆಯುದರೊಂದಿಗೆ, 15 ಕೋಟಿ ವೆಚ್ಚದ ಕುಲಾಲ ಭವನ ಲೋಕಾರ್ಪಣೆಯಲ್ಲಿ ಎಲ್ಲರು ಬಾಗಿಯಾಗೋಣ ಎಂದರು.
ವೈಧ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ನೇಹಾ ಶಂಕರ್ ಮೂಲ್ಯ ಇವರ ಅನುಪಸ್ಥಿತಿಯಲ್ಲಿ ಪಾಲಕರಾದ ಸವಿತಾ ಶಂಕರ್ ಮೂಲ್ಯ ಮತ್ತು ಶಂಕರ್ ವೈ ಮೂಲ್ಯ ಅವರ ಗೌರವವನ್ನು ಸ್ವೀಕರಿಸಿದರು.
೨೦ ನೇ ವರ್ಷವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಸದಸ್ಯರ ಒಗ್ಗಟ್ಟನ್ನು ನೋಡುವಾಗ ಸಂತೋಷವಾಗುತ್ತಿದೆ. ಇಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುತ್ತಿದ್ದಾರೆ. ನಾವು ದುಡಿದ ಶೇಕಡಾ ಒಂದಂಶವನ್ನಾದರೂ ಸಮಾಜಕ್ಕೆ ನೀಡಿದಲ್ಲಿ ಇದರಿಂದ ಎಲ್ಲಾ ಸಮಾಜ ಬಾಂದವರಿಗೆ ಪ್ರಯೋಜನಕಾರಿಕಾಗಬಹುದು ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ಡಿ. ಐ ಮೂಲ್ಯ ನುಡಿದರು,
–
ಸಂಘದ ಗೌರವ ಕೋಶಧಿಕಾರಿ ಜಯ ಅಂಚನ್ ಮಾತನಾಡಿ ಇಂದು ನಾಲ್ಕು ಮಂದಿಗೆ ನಡೆದ ಸನ್ಮಾನ ಅರ್ಥ ಪೂರ್ಣವಾಗಿದೆ. ಸಂಘದ ಕೇಂದ್ರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯವರನ್ನು ಸನ್ಮಾನಿಸಿದ್ದು ಸಂತೋಷ ತಂದಿದೆ. ಅವರು ನನ್ನ ಮಾರ್ಗದರ್ಶಕರು ಹೌದು. ಸ್ಥಳೀಯ ಸಮಿತಿಯವರು ಒಬ್ಬರನ್ನೊಬ್ಬರ ಕಷ್ಟದ ಸಮಯದಲ್ಲಿ ಸ್ಪಂದಿಸುತ್ತಾ ಇರಬೇಕು. ಅದೇ ರೀತಿ ಸದಸ್ಯತನವನ್ನು ಹೆಚ್ಚಿಸಲು ಎಲ್ಲರು ಸಹಕರಿಸಬೇಕು ತಿಳಿಸಿದರು,
ಅಭಿಮಾನಿ ಬಳಗ ಮುಂಬಯಿ ( ಮುಂಡ್ಕೂರು ) ಇದರ ವತಿಯಿಂದ ಪ್ರತೀ ವರ್ಷ ನಡೆಯುತ್ತಿರುವ ಶ್ರೀ ವರಮಹಾಲಕ್ಷ್ಮಿ ಪೂಜೆಗೆ ಸ್ಥಳೀಯ ಸಮಿತಿಗಳ ಸಹಾಯ ಸಹಕಾರ ಸಿಗುತ್ತಿದ್ದು ಇನ್ನು ಮುಂದೆಯೂ ಇದೆ ರೀತಿ ನಿಮ್ಮೆಲ್ಲರ ಪ್ರೋರ್ತ್ಸಾಹವನ್ನು ಬಯಸುತ್ತಿರುವೆವು ಎಂದು ನಾನಿಲ್ತಾರು ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಕಾರ್ಯದರ್ಶಿ ದಿನೇಶ್ ಬಂಗೇರ ನುಡಿದರು,
ಕುಲಾಲ ಸಂಘದ ಮಹಿಳಾ ವಿಭಾಗ ಉಪ ಕಾರ್ಯಾಧ್ಯಕ್ಷೆ ಸುಚಿತ್ರ ಬಂಜನ್ ಮಾತನಾಡಿ “ಕಾರ್ಯಕ್ರಮ ನಿರ್ವಹಿಸಲು ಮಹಿಳೆಯರಿಗೆ ಹೆಚ್ಚು ಪ್ರೋತ್ಸಾಹಿಸಿ, ಸಮಾಜದ ಮಹಿಳಾ ಸದಸ್ಯರ ಕಾರ್ಯ ಪ್ರಶಂಸನೀಯ, ಸ್ಥಳೀಯ ಸಮಿತಿಯ ಮಹಿಳೆಯರು ಮಾತ್ರವಲ್ಲದೆ ಯುವತಿಯರು ಪುರುಷರೊಂದಿಗೆ ಇಂದಿನ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದನ್ನು ನೋಡುವಾಗ ಸಂತೋಷವಾಗುತ್ತಿದೆ. ನಮ್ಮ ಯುವ ಜನಾಂಗದ ಕಾರ್ಯ ಸ್ಲಾಘನೀಯ. ಇದೇ ರೀತಿ ಸಮಾಜದ ಮಹಿಳೆ ಹಾಗೂ ಯುವ ಜನಾಂಗಕ್ಕೆ ಅವಕಾಶ ನೀಡಿದಲ್ಲಿ ಅವರು ಸಂಘದಲ್ಲಿ ಕ್ರೀಯಾಶೀಲರಾಗುದರಲ್ಲಿ ಸಂದೇಹವಿಲ್ಲ” ವೆಂದರು.
ಅಮೂಲ್ಯ ಪತ್ರಿಕೆಯ ಉಪಸಂಪಾದಕ ಆನಂದ ಬಿ ಮೂಲ್ಯ ಮಾತನಾಡಿ ಇಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಅಭಿನಂದನೆಗಳು. ಕುಲಾಲ ಸಂಘದ ಮುಖವಾಣಿ ಅಮೂಲ್ಯ ಪತ್ರಿಕೆಯ ಚಂದಾದಾರರಾಗಿ ಸಮಾಜ ಬಾಂಧವರು ಸಹಕರಿಸಬೇಕು ಎಂದು ತಿಳಿಸಿದರು,
ಸಂಘದ ಸಿ.ಎಸ್. ಟಿ. ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್ ಬಂಗೇರ ಮಾತನಾಡಿ ಡಿ.1 ರಂದು ನಡೆಯಲಿರುವ ನಮ್ಮ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು. ಶಂಕರ್ ವೈ ಮೂಲ್ಯ ರ ನೇತೃತ್ವದಲ್ಲಿ ಇಂದಿಲ್ಲಿ ಉತ್ತಮವಾದ ಕಾರ್ಯಕ್ರಮ ನಡೆದಿದೆ. ಪುರೋಹಿತರಾಗಿ ಸಮಾಜದ ಸೇವಕರಾಗಿ ಅಪಾರ ಅನುಭವವನ್ನು ಹೊಂದಿದ್ದಾರೆ ಸಂಘದಲ್ಲಿ ಇನ್ನಷ್ಟು ಸೇವೆಯನ್ನು ಮಾಡಬೇಕು ಎಂದರು
ಸ್ಥಳೀಯ ಸಮಿತಿಯ, ಕಾರ್ಯದರ್ಶಿ ನ್ಯಾಯವಾದಿ ಉಮಾನಾಥ್ ಮೂಲ್ಯ ಮಾತನಾಡಿ ಸಮಾಜದ್ದೇ ಆದ ಜ್ಯೋತಿ ಕ್ರೆಡಿಟ್ ಸೊಸೈಟಿಯ ಎಲ್ಲಾ ಪ್ರಯೋಜನವನ್ನು ನಮ್ಮವರು ಪಡೆಯಬೇಕು. ನಮ್ಮ ಪರಿಸರದಲ್ಲಿ ನಿವೇಶನ ಖರೀದಿಸುವವರು ಅದರ ಬಗ್ಗೆ ಆಳವಾಗಿ ವಿವರವನ್ನು ಪಡೆಯುವ ಅಗತ್ಯವಿದೆ. ನಮ್ಮವರು ಹೊಸ ನಿವೇಶನ ಖರೀದಿಯಲ್ಲಿಯಾಗಲಿ ಪುನರ್ನಿಣಗೊಳ್ಳುವ ಕಟ್ಟಡದಲ್ಲಿ ಖರೀದಿಸುವಾಗಲೂ ಅದರ ಬಗ್ಗೆ ಉಚಿತವಾಗಿ ಮಾಹಿತಿಯನ್ನು ಪಡೆಯಲು ನನ್ನನ್ನು ಸಂಪರ್ಕಿಸಬಹುದು. ಎಂದು ತಿಳಿಸಿದರು
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಉದ್ಯಮಿ, ಅಯ್ಯ ಪ್ಯಾಕರ್ಸ್ & ಮೂವರ್ಸ್ ನ ನಿರ್ದೇಶಕಿ ಸುಲತಾ ಅಶೋಕ ಮೂಲ್ಯ, ಕುಲಾಲ ಸಂಘ ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸುಂದರ್ ಕೆ. ಮೂಲ್ಯ, ಸಮಾಜ ಸೇವಕ ಶಿವಾನಂದ ಗುಜರನ್, ನಾನಿಲ್ತಾರು ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು )ಇದರ ಕಾರ್ಯದರ್ಶಿ ದಿನೇಶ್ ಬಂಗೇರ, ಕುಲಾಲ ಸಂಘದ ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌ. ಪ್ರ. ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್, ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತ್ರಾ ಬಂಜನ್, ಅಮೂಲ್ಯ ಪತ್ರಿಕೆಯ ಉಪ ಸಂಪಾದಕ ಆನಂದ ಬಿ. ಮೂಲ್ಯ, ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಮೋಹನ್ ಬಂಜನ್, ಕಾರ್ಯದರ್ಶಿ ನ್ಯಾ| ಉಮನಾಥ್ ಮೂಲ್ಯ, ಕೋಶಾಧಿಕಾರಿ ಸತೀಶ್ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಚಂದ್ರಾವತಿ ಎಸ್. ಸಾಲ್ಯಾನ್, ಉಪಕಾರ್ಯಾಧ್ಯಕ್ಷೆ ರೇಣುಕಾ ಸಾಲ್ಯಾನ್, ಕಾರ್ಯದರ್ಶಿ ಪ್ರಮೀಳಾ ಬಂಜನ್, ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಸುಂದರ್ ಎನ್ ಮೂಲ್ಯ, ಥಾಣಾ ಕಸಾರ ಕರ್ಜತ್ ಭೀವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಹರಿಯಪ್ಪ ಮೂಲ್ಯ, ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕುಲಾಲ್, ಸಿ.ಎಸ್. ಟಿ. ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್ ಬಂಗೇರ, ನವಿ ಮುಂಬಯಿ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಸದಾನಂದ ಮೂಲ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಗಣ್ಯರ ಉಪಸ್ಥಿತಿಯಲ್ಲಿ ಕುಲಾಲ ಸಂಘ, ಮುಂಬಯಿಯ ಗೌ. ಪ್ರ. ಕಾರ್ಯದರ್ಶಿ, ಕರುಣಾಕರ ಬಿ. ಸಾಲ್ಯಾನ್ ದಂಪತಿ, ಕುಲಾಲ ಸಂಘದ ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿ ಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಗೀತಾ ಯೋಗೀಶ್ ಬಂಗೇರ ದಂಪತಿ, ಕುಲಾಲ ಸಂಘ, ಮುಂಬಯಿ ಮೀರಾ ರೋಡ್ -విరారో ಸ್ಥಳೀಯ ಸಮಿತಿ ಉಪ ಕಾರ್ಯಾಧ್ಯಕ್ಷ ಮೋಹನ್ ಬಂಜನ್ ಪರಿವಾರ ಮತ್ತು ರಘುನಾಥ ಕರ್ಕೇರ ದಂಪತಿಯನ್ನು ಸನ್ಮಾನಿಸಿದರು.
ಸನ್ಮಾನ ಪತ್ರವನ್ನು ಆಶಾ ಸಿ ಮೂಲ್ಯ, ಪ್ರಣೀತಾ ಪಿ ಕುಲಾಲ್, ಕಾವ್ಯ ಜಿ. ಮೂಲ್ಯ ಮತ್ತು ನಳಿನಿ ನಾರಾಯಣ ಬಂಜನ್ ವಾಚಿಸಿದರು.
ಹಾಗೂ ಎಸ್. ಎಸ್. ಸಿ. ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಿಂದ್ಯಾ ಉದಯ ಮೂಲ್ಯ ಇವರನ್ನು ಸನ್ಮಾನಿಸಲಾಯಿತು. ಇವರ ಮುಂದಿನ ಶಿಕ್ಷಣಕ್ಕೆ ಮಹಾದಾನಿ ಸುನಿಲ್ ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ಅವರು ಸಹಕರಿಸುತ್ತಿದ್ದು ಬಿಂದ್ಯಾ ಉದಯ ಮೂಲ್ಯ ಅವರ ತಂದೆ ಉದಯ ಮೂಲ್ಯ ಅವರು ಸುನಿಲ್ ಸಾಲ್ಯಾನ್ ದಂಪತಿ ಸಮಾಜದ ಅರ್ಹ ಬಡ ಮಕ್ಕಳ ಶೈಕ್ಷಣಿಕ ನೆರವಿಗೆ ಸಹಕರಿಸುದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಎಲ್ಲರ ಪರವಾಗಿ ಅವರಿಗೆ ಅಬಾರ ವ್ಯಕ್ತಪಡಿಸಿದರು.
ಪರಿಸರದ ಎಸ್.ಎಸ್.ಸಿ.ಯಿಂದ ಡಿಗ್ರಿ, ವೃತ್ತಿಪರ ಶಿಕ್ಷಣದಲ್ಲಿ ಉತ್ತೀರ್ಣರಾದ ಎಲ್ಲಾ ಕುಲಾಲ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಹಿಳಾ ಕಾರ್ಯದರ್ಶಿ ಪ್ರಮೀಳಾ ಬಂಜನ್ ಇವರ ಹೆಸರನ್ನು ವಾಚಿಸಿದರು.
ಸ್ಥಳೀಯ ಸಮಿತಿಯ ಸ್ಥಾಪಕ ಕಾರ್ಯಾಧ್ಯಕ್ಷ ಕುಟ್ಟಿ ಮೂಲ್ಯ ಸಭೆಯಲ್ಲಿ ಉಪಸ್ಥಿತರಿದ್ದು ಅವರನ್ನು ಹಾಗೂ ಇತರ ಸ್ಥಳೀಯ ಸಮಿತಿಗಳ ಎಲ್ಲಾ ಗಣ್ಯರನ್ನು ಹಾಗೂ ಸಮಾಜ ಬಾಂದವರನ್ನು ಗೌರವಿಸಲಾಯಿತು.
ಆಶಾ ಸಿ ಮೂಲ್ಯ, ಪ್ರಣೀತಾ ಪಿ ಕುಲಾಲ್, ಕಾವ್ಯ ಜಿ. ಮೂಲ್ಯ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆಯಿತ್ತರು,
ಜಯಂತಿ ಉಮೇಶ್ ಬಂಗೇರ ಕಾರ್ಯಕ್ರಮವನ್ನು ನಿರ್ವಹಿಸಿದರು.
ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಸುಜಾತ ಆರ್. ಸಾಲ್ಯಾನ್ ವಿವಿಧ ಪ್ರಾಯೋಜಕರ ಹಾಗು ದಾನಿಗಳ ಹೆಸರನ್ನು ವಾಚಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ಸಮಿತಿಯ ಜೊತೆ ಕಾರ್ಯದಶಿಗಳಾದ ಉಮೇಶ್ ಬಂಗೇರ, ಸದಾನಂದ ಪಿ. ಸಾಲ್ಯಾನ್, ಚಂದ್ರಹಾಸ್ ಮೂಲ್ಯ, ಜೊತೆ ಕೋಶಾಧಿಕಾರಿ, ಉಮೇಶ್ ಬಂಗೇರ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ, ಯೋಗಿಶ್ ಬಂಗೇರ, ಸಮಿತಿ ಸದಸ್ಯರಾದ ರಘು ಸಿ. ಮೂಲ್ಯ, ರಾಜೀವ್ ಬಂಗೇರ, ಕೋಶಾಧಿಕಾರಿ ಜಯಂತಿ ಯು. ಬಂಗೇರ, ಮತ್ತು ನಳಿನಿ ಎನ್. ಬಂಜನ್, ಜೊತೆ ಕೋಶಾಧಿಕಾರಿ ಅರ್ಚನಾ ಎಸ್. ಕುಲಾಲ್, ಯುವ ವಿಭಾಗದ ಮಯೂರ್ ವೈ. ಸಾಲ್ಯಾನ್, ಮೇಘಾ ಎಂ. ಬಂಜನ್, ನಿಶ್ಚಿತಾ ಆರ್. ಬಂಗೇರ ಹಾಗೂ ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಯಶೋಧರ ಬಂಗೇರ, ಕಾರ್ಯದರ್ಶಿ ಅದ್ಯಪಾಡಿ ವಾಮನ್ ಡಿ. ಮೂಲ್ಯ, ಕೋಶಾಧಿಕಾರಿ ರೋಹಿತ್ ಕೆ. ಬಂಜನ್, ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರು, ಮತ್ತು ಕಾರ್ಯಕಾರಿ ಮಂಡಳಿ, ಮಹಿಳಾ ವಿಭಾಗ, ಯುವ ವಿಭಾಗ ಎಲ್ಲಾ ಸದಸ್ಯರು ಸಹಕರಿಸಿದರು.
ಸಭಾ ಸದರ ನೋಂದಾವಣಿಗೆ ಪ್ರಥಮ, ದ್ವಿತೀಯ, ತೃತೀಯ ಆಕರ್ಷಕ ಬಹುಮಾನವನ್ನು ನೀಡಲಾಗಿದ್ದು ಶ್ರೀಮತಿ ಪುಷ್ಪಾ ಸುಂದರ ಮೂಲ್ಯ, ಮೀರಾ ರೋಡ್ ಇದರ ಪ್ರಾಯೋಜಕರಾಗಿ ಸಹಕರಿಸಿದರು
ಪ್ರಾರಂಭದಲ್ಲಿ ಕಳೆದ ಒಂದು ವರ್ಷದಲ್ಲಿ ಧೈವಾಧೀನರಾದ ಸಂಘದ ಸದಸ್ಯರಿಗೆ ಹಾಗೂ ಇತರ ಗಣ್ಯರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಬೆಳಿಗ್ಗೆ ಸ್ಥಳೀಯ ಸಮಿತಿಯ ಗುರುವಂದನಾ ಭಜನಾ ಮಂಡಳಿಯ ಸದಸ್ಯರಿಂದ, ಭಜನೆ, ಸೋಲೋ ನೃತ್ಯ ಹಾಗೂ ಫ್ಯಾನ್ಸಿಡ್ರೆಸ್ ಮತ್ತು ಪುಟಾಣಿಗಳಿಂದ ಹಾಗು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಭಾಕಾರ್ಯಕ್ರಮ, ಮಧ್ಯಾಹ್ನ ಪ್ರೀತಿ ಭೋಜನ ನಂತರವೂ ಸಂಘದ ಮಹಿಳಾ ವಿಭಾಗದ, ಯುವ ವಿಭಾಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ದಿನ ಪೂರ್ತಿ ನಡೆಯಿತು.
ಸಮಾಜಕ್ಕೆ ನೀಡಿ ಸೇವೆ ,ದಾನ ಸದಾ ಶಾಶ್ವತವಾಗಿ ಉಳಿಯಲು ಸಾಧ್ಯ
– ಶಂಕರ್ ವೈ ಮೂಲ್ಯ
ಜನರು ಆಸ್ತಿ ಮಾಡಿಟ್ಟಲ್ಲಿ ಅದು ನಂತರ ಇತರ ಪಾಲಾಗುವುದು. ಮುಂದೆ ಅವರ ಹೆಸರೂ ಉಳಿಯಲು ಅಸಾಧ್ಯ. ಸಮಾಜ ಸೇವೆ ಮಾಡಿದಲ್ಲಿ ಹಾಗೂ ಸಮಾಜಕ್ಕೆ ನೀಡಿದಲ್ಲಿ ಅಂತವರ ಹೆಸರೂ ಸದಾ ಹಸಿರಾಗಿ ಉಳಿಯಲು ಸಾಧ್ಯ. ಆರು ವರ್ಷದ ನಂತರಶತಮಾನೋತ್ಸವವನ್ನಾಚರಿಸಲಿರುವ ಕುಲಾಲ್ ಸಂಘ ಮುಂಬಯಿ, ಐದು ವರ್ಷದ ಬಳಿಕ ಬೆಳ್ಳಿ ಹಬ್ಬವನ್ನಾಚರಿಸಲಿರುವ ಸಂಘದ ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿ, ಹೀಗಿರುವಾಗ ನಮಗೆಲ್ಲರೂ ಮುಂದೆ ದೊಡ್ಡ ಮಟ್ಟದ ಜವಾಬ್ದಾರಿ ಇದೆ. ಮುಂಬಯಿ ಹಾಗೂ ಪರಿಸರದ ಜಿಲ್ಲೆಗಳಲ್ಲಿ ಒಟ್ಟು ಅರುವತ್ತು ಸಾವಿರಕ್ಕಿಂತಲೂ ಕುಲಾಲ ಬಾಂಧವರಿದ್ದು ಸಂಘದ ಸದಸ್ಯರಾಗಿ, ಸಂಘದಲ್ಲಿ ಕ್ರೀಯಾಶೀಲರಾದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುತ್ತಾ ಕಳೆದ ೨೦ ವರ್ಷಗಳಲ್ಲಿ ಸಂಘ ಸ್ಥಳೀಯ ಸಮಿತಿಯಲ್ಲಿ ದುಡಿದ ಹಿರಿಯರನ್ನು ಸ್ಮರಿಸುತ್ತಾ ಸಂಘದ ಎಲ್ಲಾ
ಕಾರ್ಯದಲ್ಲಿ ಸಮಾಜ ಬಾಂಧವರು ಒಂದಾಗಿ ಸಹಕರಿಸಬೇಕು ಎಂದು ಎಲ್ಲರನ್ನು ಸ್ವಾಗತಿಸುತ್ತಾ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ ವೈ ಮೂಲ್ಯ ವಿನಂತಿಸಿದರು.
—–+
ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮದಲ್ಲಿ ಎಲ್ಲರೂ ನಮ್ಮೊಂದಿಗೆ ಸಹಕರಿಸಿದ್ದಾರೆ: ಚಂದ್ರಾವತಿ ಎಸ್ ಚಾಂಪಿಯನ್,
ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ
ಚಂದ್ರಾವತಿ ಎಸ್. ಸಾಲ್ಯಾನ್ ಮಾತನಾಡಿ
ನನ್ನ ಎಲ್ಲಾ ಕಾರ್ಯದಲ್ಲಿ ನನಗೆ ಸಹಕರಿಸಿದ ಮಹಿಳಾ ಸದಸ್ಯರಿಗೂ ಹಾಗೂ ಸ್ಥಳೀಯ ಸಮಿತಿಯ ಪ್ರತಿಯೊಬ್ಬರಿಗೂ ಅಬಾರಿಯಾಗಿರುವೆನು. ನಮ್ಮ ಸಮಿತಿಯ ಹಾಗೂ ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮದಲ್ಲಿ ಎಲ್ಲರೂ ನಮ್ಮೊಂದಿಗೆ ಸಹಕರಿಸಿದ್ದಾರೆ. ನಾವು ಶ್ರೀ ಹರಿಗೆ ಹತ್ತಿರವಾಗಿದ್ದು ನಮ್ಮ ಸಂಘದ ಐದು ಉಪಸಮಿತಿಗಳ ಮಹಿಳಾ ವಿಭಾಗವು ಒಂದಾದಲ್ಲಿ ಇಡೀ ಪ್ರಪಂಚದಲ್ಲೇ ಸಾಧನೆಯನ್ನು ಮಾಡಿ ತೋರಿಸಬಹುದು.
—–ಸನ್ಮಾನಿತರ ನುಡಿ—-
ಸನ್ಮಾನ ಜವಾಬ್ದಾರಿಯನ್ನು ಇಚ್ಛಿಸಿದೆ ಸಂಘ. ಸಂಘದ ಕಾರ್ಯದಲ್ಲಿ ಒಂದು ಗಂಟೆ ಸಮಯ ಯುವ ಸಮುದಾಯ ನೀಡಬೇಕು ಆ ಮೂಲಕ ಸಂಘ ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯ
ಕರುಣಾಕರ್ ಸಾಲಿಯಾನ್.
ಗೌರವ ಪ್ರಧಾನ ಕಾರ್ಯದರ್ಶಿ ಕುಲಾಲ ಸಂಘ ಮುಂಬೈ
ಅತಿಯಾದ ಸಂತೋಷವಾಗಿದೆ ,ಸಮಾಜ ಬಾಂಧವರ ಸಮ್ಮುಖದಲ್ಲಿ ನನ್ನನ್ನು ಗುರುತಿಸಿರುವುದು ನನ್ನ ಸೇವೆ ಸಾರ್ಥಕವಾಗಿದೆ ಎಂದು ಆನಂದವಾಗಿದೆ,
ರಘುನಾಥ್ ಕರ್ಕೇರ
ಮಹಿಳಾ ವಿಭಾಗದಲ್ಲಿ ಕಾರ್ಯಾಧ್ಯಕ್ಷೆ ಸೇವೆ ಮಾಡುದ್ದನ್ನು ನೆನಪಿಸಿ ನೀಡಿದ ಸನ್ಮಾನವನ್ನು ಸಂತೋಷದಿಂದ ಬಯಸಿದ್ದೇನೆ ನನ್ನ ಕಾಲಾವಧಿಯಲ್ಲಿ ಎಲ್ಲಾ ಮಹಿಳಾ ಸದಸ್ಯರು ಸಕ್ರಿಯವಾಗಿ ನನ್ನೊಂದಿಗೆ ಸೇವೆ ಮಾಡಿದ್ದಾರೆ ಅವರೆಲ್ಲರ ಸೇವೆಯಿಂದ ನಾನು ಕಾರ್ಯಾಧ್ಯಕ್ಷೆ ಯಗಿ ಸೇವೆ ಮಾಡಿದ್ದೇನೆ, ನನ್ನ ಮನೆಯವರು ನನಗೆ ಸಂಪೂರ್ಣ ಸಹಕಾರವಾಗಿದ್ದರು
ಗೀತಾ ವೈ ಬಂಗೇರ.
ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ .
ಸಂಘದ ಸ್ಥಳೀಯ ಸಮಿತಿಯಲ್ಲಿ ವಿವಿಧ ಜವಾಬ್ದಾರಿಯನ್ನ ನಿರ್ವಹಿಸಿ ಉಪ ಕಾರ್ಯ ಧ್ಯಕ್ಷನಾಗಿ ಸೇವೆ ಮಾಡುವ ಸಂದರ್ಭದಲ್ಲಿ ಸನ್ಮಾನ ನೀಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ
ಮೋಹನ್ ಬಂಜನ್
ಉಪ ಕಾರ್ಯಧ್ಯಕ್ಷರು ಸ್ಥಳೀಯ ಸಮಿತಿ