24.7 C
Karnataka
April 3, 2025
ಸುದ್ದಿ

ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ



ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಮುಂಬಯಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬ್ಯಾಕೂಡ ಗ್ರಾಮದ ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಇವರು 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮವು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ದಿ 15 ನವಂಬರ್ 2025 ರಂದು ಶ್ರೀ ಪರಮ ಪೂಜ್ಯ ರಮೇಶ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ರಮೇಶ ಮಹಾ ಸ್ವಾಮಿಗಳು ಗೋವಿನಾಳ ಅವರು ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ವಿದೆ. ಇದು ಹೃದಯದ ಭಾಗದಿಂದ ಹುಟ್ಟಿದ್ದು ಎಂದು ಮಾತನಾಡಿದರು.ಕನ್ನಡ ನುಡಿ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಟಿಸಿದ ಬೆಂಗಳೂರಿನ ಸಾವಿರ ಪುಸ್ತಕಗಳ ಸರದಾರರಾದ ಶ್ರೀ ಬೆ. ಗೋ. ರಮೇಶ ಅವರು ಕನ್ನಡ ನುಡಿ ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರೂ ಮಾಡಬೇಕು ಎಂದು ಮಾತನಾಡಿದರು.ಈ ಸಂಭ್ರಮದಲ್ಲಿ ಶ್ರೀ ಶ್ರೀಶೈಲ ಕೋಳಿ ಅವರು ರಚಿಸಿದ ಜ್ಞಾನಾಮೃತ ಜ್ಯೋತಿ ಕೃತಿ ಲೋಕಾರ್ಪಣೆಗೊಂಡಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಾರನ್ನು ಗುರುತಿಸಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಇಂತಹ ಸುಂದರವಾದ ಕಾರ್ಯಕ್ರಮದಲ್ಲಿ ಹೊರನಾಡ ಕಾಸರಗೋಡು ಕನ್ನಡ ಭವನ ಅಧ್ಯಕ್ಷರಾದ ಶ್ರೀ ವಾಮನ್ ರಾವ್ ಬೇಕಲ ಮತ್ತು ಮುಂಬಯಿ ಹಿರಿಯ ಸಂಸ್ಥೆಯಾದ ಮುಂಬಯಿ ಕನ್ನಡ ಸಂಘ ಮಾಟುಂಗಾ ಇದರ ಜೊತೆ ಕಾರ್ಯದರ್ಶಿ ಮತ್ತು ಕಲ್ಯಾಣದ ಕನ್ನಡ ಸಾಂಸ್ಕೃತಿಕ ಕೇಂದ್ರದ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಆಡೋಸಿಯೇಶನ್ ಇದರ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ಬೆಳಗಾವಿ ಇವರು ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿ ಶಾಲು ಹೊದಿಸಿ ಪುಷ್ಪಗುಚ್ಚಮತ್ತು ನೆನಪಿನ ಕಾಣಿಕೆ ನೀಡಿ ಸತ್ಕರಿದರು.

ಕಾರ್ಯಕ್ರಮವು ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘದ ಅಧ್ಯಕ್ಷ ಶ್ರೀ ಸಿದ್ರಾಮ. ಎಮ್. ಅವರು ನೇತೃತ್ವದಲ್ಲಿ ನಡೆಯಿತು.ಮತ್ತು ಶ್ರೀ ಲ. ಕ. ಪೋ. ಸಂಘದ ಗೌರವ ಅಧ್ಯಕ್ಷ ಶ್ರೀ ಡಾ ಸಿದ್ದಣ್ಣ ಬಾಡಗಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅಥಿತಿಗಳಾಗಿ, ರಂಗಾಯಣ ನಿರ್ದೇಶಕರಾದ ಡಾ ರಾಜು ತಾಳಿಕೋಟಿ,ಅವರು ಜಗವೆಲ್ಲಾ ನಗುತಿರಲಿ, ಜಗದಳವು ನಮಗಿರಲಿ ಎಂದು ಮಹಾ ಕವಿಗಳು ಹೇಳಿರುವಂತೆ ಜೀವನದಲ್ಲಿ ನಗುತ ಬಾಳಬೇಕು. ಇನ್ನೊಬ್ಬರಿಗೆ ನಗಿಸಬೇಕು. ಪರರ ದುಃಖವನ್ನು ವರಿಸಬೇಕು. ನಗುತ ಬಾಳುವುದೇ ನಿಜ ಧರ್ಮವಾಗಬೇಕು. ಎಂದು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.ನಿವೃತ್ತ ಜಿಲ್ಲಾ ಉಚ್ಚ ನ್ಯಾಯಾದೀಶ ಶ್ರೀ ಎಸ್ ಎಚ್ ಮಿಟ್ಟಲಕೋಡ, ಹುಬ್ಬಳ್ಳಿಯ ವಿಶ್ವದರ್ಶನ ದಿನಪತ್ರಿಕೆಯ ಪ್ರದಾನ ಸಂಪಾದಕರಾದ ಡಾ ಎಸ್ ಎಸ್ ಪಾಟೀಲ, ಕಾಸರಗೋಡು ಕನ್ನಡ ಭವನ ಅಧ್ಯಕ್ಷರಾದ ವಾಮನ್ ರಾವ್ ಬೇಕಲ, ಕರ್ನಾಟಕ ಜ್ಞಾನ ವಿಜ್ಞಾನ ಅಕಾಡೆಮಿ ಬಾದಾಮಿ ಅಧ್ಯಕ್ಷರಾದ ಜೆ ಕೆ ಹುಸೇನ್ ಬಾಯಿ, ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮಮದಲ್ಲಿ ಹುಬ್ಬಳ್ಳಿಯ ಕು. ಕೀರ್ತನಾ. ಆರ್.ಪೂಜಾರಿ,ವಿಜಯಪುರದ ಕು ಪೃಥ್ವಿ.ಎಂ.ಹೆಗಡೆ ಅವರ ಪ್ರದರ್ಶನ ಮಾಡಿದ ಭರತ ನಾಟ್ಯವು ಪ್ರೇಕ್ಷಕರ ಮನ ಗೆದ್ದಿತು. ಮತ್ತು ಉತ್ತರ ಕನ್ನಡದ ಕು. ನಿಶಾ ಎಮ್. ನಾಯ್ಕ್ ಅವರ ಯಕ್ಷಗೀತ ಗಾಯನ ನೃತ್ಯ ಮತ್ತು ಕು. ಸದಾಶಿವ ಎಚ್. ನಾಯಕ ವಾಡಿ ಬ್ಯಾಕೂಡ,ಸ್ವಾಮಿ ವಿವೇಕಾನಂದ ಯೋಗ ಕೇಂದ್ರ ಗೋಕಾಕ ತಂಡದವರಿಂದ ಯೋಗ ನೃತ್ಯ ಪ್ರದರ್ಶನ ಮಾಡುವುದರ ಮೂಲಕ ಪ್ರೇಕ್ಷಕರ ಮತ್ತು ಕನ್ನಡಾಭಿ
ಮಾನಿಗಳ ಮನ ಸೆಳೆದು ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂದಿತು.

ಕಾರ್ಯಕ್ರಮದ ಪ್ರಸ್ತಾವನೆಯನ್ನು ಡಾ ಸಿದ್ದಣ್ಣ ಬಾಡಗಿ ಅವರು ಮಾಡಿದರು.ಕಾರ್ಯದರ್ಶಿ ರಾಜು ಎಸ್ ಪೂಜಾರಿ ಸ್ವಾಗತಿಸಿದರು. ಶ್ರೀ ಚಂದ್ರಶೇಖರ ಲ. ರೂಗಿ. ಮುದೋಳ ಹಾಗೂ ಶ್ರೀ ಆನಂದ ಸೋರಂಗಾವಿ ಗೋಕಾಕ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕಿ ಡಾ ಜೆ. ಎಂ. ಬಾದಾಮಿ ವಂದಿಸಿದರು.

Related posts

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ವಸಯಿಯ ಮೋಹಿತ್ ಆನಂದ ಪೂಜಾರಿಗೆ ಶೇ 86.50%

Mumbai News Desk

ಖ್ಯಾತ ಸಾಹಿತಿ ಕಮಲ ಹಂಪನಾ ಇನ್ನಿಲ್ಲ

Mumbai News Desk

ಶ್ರೇಯಾ ವಿ. ಸಾಲಿಯಾನ್ ಸಿ.ಎ.ಉತ್ತೀರ್ಣ

Mumbai News Desk

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನ, ಆಡಳಿತ ಮೊತ್ತೇಸರರಾಗಿ ಸುಂದರ್ ಕುಲಾಲ್ ಶಕ್ತಿನಗರ ಆಯ್ಕೆ.

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk