



ಸರ್ವ ಜಾತೀಯ ಸಂಘ ಸಂಸ್ಥೆಗಳಿಗೆ ನಡೆಯುವ ಈ ಕ್ರೀಡಾ ಕೂಟ ಇತರರಿಗೆ ಮಾದರಿ ಯಾಗಿದೆ- ಸುಕುಮಾರ ಶೆಟ್ಟಿ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ನ.17: ಡೊಂಬಿವಲಿ ಪರಿಸರದ ತುಳು- ಕನ್ನಡಿಗ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಪ್ರತಿ ವರ್ಷ ಕರ್ನಾಟಕ ಸಂಘ ಡೊಂಬಿವಲಿ ಕ್ರೀಡೋತ್ಸವವನ್ನು ಅಯೋಜಿಸುತ್ತಿದ್ದು ಈ ವರ್ಷ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ್ ಅರ್. ಶೆಟ್ಟಿ ಮತ್ತು ಕಾರ್ಯದರ್ಶಿ ರವಿ ಸನಿಲ್ ರವರ ಮುಂದಾಳುತ್ವದಲ್ಲಿ ಈ ಕ್ರೀಡಾ ಕೂಟ ನಡೆಯುತ್ತಿದೆ. ಕರ್ನಾಟಕ ಸಂಘ ಡೊಂಬಿವಲಿ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಧಾರ್ಮಿಕ, ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆಯನ್ನು ಸಲ್ಲಿಸುತ್ತಿದೆ ಹಾಗೂ ಸುಮಾರು ಐದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವ ಹೊರನಾಡ ಕನ್ನಡಿಗರ ಏಕೈಕ ಸಂಸ್ಥೆ ಎಂದರೂ ತಪ್ಪಾಗಲಾರದು ಸರಕಾರದಿಂದ ಕಲೆ ಮತ್ತು ವಿಜ್ಞಾನ ವಿಭಾಗವನ್ನು ತೆರೆಯಯಲು ಅನುಮತಿ ದೊರೆತಿದ್ದು ಬರುವ ವರ್ಷದಲ್ಲಿ ಈ ಕಾರ್ಯ ಸಂಪನ್ನಗೊಳ್ಳಲಿದೆ ಕ್ರೀಡಾ ಕೂಟದಲ್ಲಿ ಇಂದು ಅಕರ್ಷಕ ಪಥ ಸಂಚಲನ ನೆಡದಿದೆ. ಸರ್ವ ಜಾತೀಯ ಸಂಘ- ಸಂಸ್ಥೆಗಳಿಗೆ ನಡೆಯುವ ಈ ಕ್ರೀಡಾ ಕೂಟ ಇತರರಿಗೆ ಮಾದರಿಯಾಗಿದೆ ಎಂದು ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ಸುಕುಮಾರ ಶೆಟ್ಟಿ ನುಡಿದರು
ಅವರು ನವೆಂಬರ್17 ರ ರವಿವಾರ ಡೊಂಬಿವಲಿ ಪೂರ್ವದ ಡೊಂಬಿವಲಿ ಜಿಮ್ಕಾನದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಇದರ ವತಿಯಿಂದ ಜರಗಿದ ವಾರ್ಷಿಕ ಕ್ರೀಡಾ ಕೂಟ ದಂಗಲ್ 2024 ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.




ಸಂಘದ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ ಕರ್ನಾಟಕ ಸಂಘ ಡೊಂಬಿವಲಿಯ ಹಿರಿಯಣ್ಣನ ಪಾತ್ರವನ್ನು ನಿಭಾಯಿಸುತ್ತಿದ್ದು ಡೊಂಬಿವಲಿ ಪರಿಸರದ ಎಲ್ಲ ಸಂಘ- ಸಂಸ್ಥೆಗಳನ್ನು ಒಂದೇ ಛತ್ರದಡಿ ತರುವ ಉದ್ಧೇಶ ನಮ್ಮದಾಗಿದೆ ಕ್ರೀಡೆಗಳು ಸುಸ್ಸಂಗವಾಗಿ ನಡೆಯ ಬೇಕೆನ್ನುವ ಉದ್ಧೇಶದಿಂದ ಮೂವತ್ತು ನಿರ್ಣಾಯಕರನ್ನು ನಾವು ಹೋರಗಿನಿಂದ ಕರೆಸಿದ್ದೇವೆ ಅದುದರಿಂದ ಕ್ರೀಡೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೀಡಿ ಕೊಳ್ಳುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ ಇಂದಿನ ಕ್ರೀಡೆಯ ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳಾಗಿ ಸಮಾಜದ ಗಣ್ಯ ವ್ಯಕ್ತಿಗಳಾದ ಸುಬ್ಬಯ್ಯ ಶೆಟ್ಟಿ, ಕಲ್ಲಡ್ಕ ಕರುಣಾಕರ ಶೆಟ್ಟಿ, ಸೋಮನಾಥ ಪೂಜಾರಿ ಅಗಮಿಸಿ ಕ್ರೀಡಾ ಮಹೋತ್ಸವಕ್ಕೆ ಶೋಭೆಯನ್ನು ತಂದಿದ್ದಾರೆ ಎಂದರು.
ಅತಿಥಿ ಸುಬ್ಬಯ್ಯ ಶೆಟ್ಟಿ ಮಾತನಾಡುತ್ತಾ ಡೊಂಬಿವಲಿ ತುಳು- ಕನ್ನಡಿಗರ ಮತ್ತು ನನಗೆ ಅವಿನಾಭಾವ ಸಂಬಂಧ ಅದುದರಿಂದ ಡೊಂಬಿವಲಿಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅದುದರಿಂದ ಡೊಂಬಿವಲಿಯ ಪ್ರತಿಯೊಂದು ಕಾರ್ಯಕ್ರಮಕ್ಕೆ ನಾನು ಸದಾ ಅಗಮಿಸುತ್ತೇನೆ ಎಂದರು.
ಅತಿಥಿ ಸಮಾಜ ಸೇವಕ ಕಲ್ಲಡ್ಕ ಕರುಣಾಕರ ಶೆಟ್ಟಿ ಮಾತನಾಡುತ್ತಾ ಮನುಷ್ಯ ಸುಖ, ಭೋಗದ ಜೀವನ ಸಾಗಿಸುತ್ತಿದ್ದಾನೆ ಕ್ರೀಡೆ ಹಾಗೂ ಯೋಗಾಭ್ಯಾಸವನ್ನು ನಿಯಮಿತವಾಗಿ ಮಾಡುತ್ತಿದ್ದರೆ ಜೀವನ ಇನ್ನಷ್ಟು ಸುಖಮಯವಾಗ ಬಹುದು ನಾವೆಲ್ಲರೂ ಸುಖಭೋಗದ ದಾಸರಾಗಿದ್ದು ಇಂದಿನ ದಿನಗಳಲ್ಲಿ ಔಷಧೋಪಚಾರವಿಲ್ಲದೆ ಬದುಕಲು ಸಾಧ್ಯವಿಲ್ಲ ಕುಲಷಿತ ಅಹಾರ ಹಾಗೂ ಕುಲಷಿತ ಮಾನಸಿಕತೆ ನಮ್ಮ ಅರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಅದುದರಿಂದ ಕ್ರೀಡೆ ಅರೋಗ್ಯದ ಔಷದಿಯಾಗಿದೆ ಡೊಂಬಿವಲಿ ಕನ್ನಡಿಗರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸೋಲೆ ಗೆಲುವಿನ ದಾರಿ ಎಂದು ಸ್ವೀಕರಿಸಿ ಕ್ತೀಡಾ ಕ್ಷೇತ್ರದ ತಾರೆಯಾಗಿ ಕಂಗೊಳಿಸಿ ಎಂದರು.
ಅತಿಥಿ ಸೋಮನಾಥ ಪೂಜಾರಿ ಮಾತನಾಡುತ್ತಾ ಇಂದಿನ ಕ್ರೀಡಾ ಕೂಟದ ಪಥ ಸಂಚಲನ ವಿಶೇಷವಾಗಿತ್ತು ಕರ್ನಾಟಕ ಸಂಘದ ಉತ್ತಮ ಅದ್ದೂರಿ ಕ್ರೀಡಾ ಕೂಟವನ್ನು ಕಂಡು ಮನಸ್ಸು ಪುಳಕಿತ ಗೊಂಡಿದೆ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಯಾರೊಂದಿಗೂ ಭೇದ ಭಾವನೆಯನ್ನು ಹೊಂದದೆ ಒಂದೇ ತಾಯಿ ಮಕ್ಕಳಂತೆ ಕ್ರೀಡೆಯಲ್ಲಿ ಭಾಗವಹಿಸೋಣ ಎಂದರು
ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಅರ್. ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಮಾತನಾಡುತ್ತಾ ಕರ್ನಾಟಕ ಸಂಘ ಶಿಕ್ಷಣದೊಂದಿಗೆ ಕ್ರೀಡೆಗೂ ಮಹತ್ವವನ್ನು ನೀಡುತ್ತದೆ ಇಂದಿನ ಪಥ ಸಂಚಲನದಲ್ಲಿ ಹೆಚ್ಚಿನ ಸಂಘ ಸಂಸ್ಥೆಗಳು ಭಾಗವಹಿಸಿದ್ದು ನಮಗೆ ಅತೀವ ಸಂತೋಷ ನೀಡಿದೆ ನಿವೆಲ್ಲರೂ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಕರೆ ನೀಡಿದರು.
ಅತಿಥಿ ಗಣ್ಯರನ್ನು, ಪಥ ಸಂಚಲನ ನಡೆಸಿದ ಸಂಘ- ಸಂಸ್ಥೆ, ತೀರ್ಪುಗಾರರು ಹಾಗೂ ಅತಿಥಿಗಳನ್ನು ಸತ್ಕರಿಸಲಾಯಿತು.
ಸಂಘದ ಅರಾಧ್ಯ ದೇವರಾದ ಒಡೆಯ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಸುಲೋಚನಾ ಪೂಜಾರಿಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ತದನಂತರ ಕಲ್ಪವೃಕ್ಷವನ್ನು ಒಡೆದು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು
ಮಂಜುನಾಥ ವಿದ್ಯಾಲಯ, ಕರ್ನಾಟಕ ಸಂಘ ಡೊಂಬಿವಲಿ, ತುಳು ವೆಲ್ಫೇರ್ ಅಸೋಸಿಯೇಷನ್, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ದೇವಾಡಿಗ ಸಂಘ, ಶ್ರೀ ಸಾಯಿನಾಥ್ ಮಿತ್ರ ಮಂಡಳಿ, ಮೊಗವೀರ ವ್ಯದಸ್ಥಾಪಕ ಮಂಡಳಿ, ಬಿಲ್ಲವರ ಅಸೋಸಿಯೇಷನ್, ಸಿರಿನಾಡ ವೇಲ್ಫರ್ ಅಸೋಸಿಯೇಷನ್, ಕುಲಾಲ ಸಂಘ ಮುಂಬಯಿ, ಜಗದಂಬಾ ಮಂದಿರ,ಭಂಡಾರಿ ಸೇವಾ ಸಮಿತಿ ಪಥ ಸಂಚಲನದಲ್ಲಿ ಭಾಗವಹಿಸಿದರು
ವೇದಿಕೆಯ ಮೇಲೆ ಸುಕುಮಾರ ಶೆಟ್ಟಿ, ಡಾ.ದಿವಾಕರ ಶೆಟ್ಟಿ ಇಂದ್ರಾಳಿ, ವಿಠಲ ಶೆಟ್ಟಿ, ಲೋಕನಾಥ್ ಶೆಟ್ಟಿ, ದೇವದಾಸ್ ಕುಲಾಲ್, ಸುಬ್ಬಯ್ಯ ಶೆಟ್ಟಿ, ಕಲ್ಲಡ್ಕ ಕರುಣಾಕರ ಶೆಟ್ಟಿ, ಸೋಮನಾಥ ಪೂಜಾರಿ, ಅಜಿತ್ ಉಮ್ರಾಣಿ, ಪ್ರಭಾಕರ್ ಶೆಟ್ಟಿ ವಿಮಲಾ ಶೆಟ್ಟಿ, ರವಿ ಸನಿಲ್, ಅನಂದ ಶೆಟ್ಟಿ ಎಕ್ಕಾರ್, ರಾಜೀವ್ ಭಂಡಾರಿ, ವಸಂತ ಸುವರ್ಣ, ರಮೇಶ್ ಶೆಟ್ಟಿ, ನ್ಯಾ. ಅರ್.ಎಂ. ಭಂಡಾರಿ, ಜಗನ್ನಾಥ ಶೆಟ್ಟಿ, ಚಂದ್ರ ನಾಯ್ಕ, ಜಗತ್ಪಾಲ್ ಶೆಟ್ಟಿ, ಸತೀಶ್ ಅಲಗೂರ್, ಮಾಧವ ಪೂಜಾರಿ, ಕೋತಾಲಿ ಪ್ರಭು, ನಾಗಪ್ಪ ಪೂಜಾರಿ, ಗೋಪಾಲ ಶೆಟ್ಟಿ, ಸತ್ಯನಾಥ ಶೆಟ್ಟಿ, ಮೊದಲಾದವರು ಉಪಸ್ಥಿತಿತರಿದ್ದರು.
ವಸಂತ ಸುವರ್ಣ, ರವಿ ಸನಿಲ್, ದೇವದಾಸ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು ಕೊನೆಗೆ ರವಿ ಸನಿಲ್ ವಂದಿಸಿದರು