ಕರ್ನಾಟಕ ಸಮಾಜ ಸೂರತ್ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ಸೂರತ್ ನ ಜೀವನ್ ಭಾರತಿ ಸಭಾಂಗಣ, ನಾನ್ಪುರ, ಸೂರತ್ ಇಲ್ಲಿ ನ. 24ರಂದು ಮಧ್ಯಾಹ್ನ 2 ರಿಂದ ನಡೆಯಲಿದೆ.
ಮಧ್ಯಾಹ್ನ ಸಮಾರಂಭದ ಉದ್ಘಾಟನೆಯನ್ನು ಬಂಟರ ಸಂಘ ಮುಂಬಯಿಯ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಇವರು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ತುಳುಸಂಘ ಬರೋಡ ಇದರ ಅಧ್ಯಕ್ಷರಾದ ಶಶಿಧರ್ ಬಿ ಶೆಟ್ಟಿ, ಭಾರತ್ ಬ್ಯಾಂಕ್ ಮುಂಬಯಿಯ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಇವರು ಆಗಮಿಸಲಿರುವರು.
ಮನೋರಂಜನೆಯ ಅಂಗವಾಗಿ ಶ್ರೀರಂಗ ಸಂಗಮ ಮುಂಬಯಿ ಹಾಗೂ ಊರಿನ ಮತ್ತು ಮುಂಬಯಿಯ ಕಲಾವಿದರ ಕೂಡುವಿಕೆಯಿಂದ ’ಪಾಪಣ್ಣ ವಿಜಯ ಗುಣಸುಂದರಿ ” ಯಕ್ಷಗಾನ ಪ್ರದರ್ಶನವಿದೆ.
ಈ ಸಮಾರಂಭಕ್ಕೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಿ ಪ್ರೋತ್ಸಾಹಿಸಬೇಕಾಗಿ ಕರ್ನಾಟಕ ಸಮಾಜ ಸೂರತ್ ಇದರ ಪರವಾಗಿ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ, ಗೌರವಾಧ್ಯಕ್ಷರಾದ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ಉಮೇಶ್ ಸಫಲಿಗ, ದಿವಾಕರ್ ಭಂಜನ್ ಬಾರ್ಡೊಲಿ, ಅಜಿತ್ ಶೆಟ್ಟಿ ಅಂಕಲೇಶ್ವರ, ಪ್ರಭಾಕರ ಶೆಟ್ಟಿ ಕೋಸಂಬಾ, ಸಂತೋಷ್ ವಿ ಶೆಟ್ಟಿ, ನಾಗರಾಜ್ ಶೆಟ್ಟಿ, ಸಾಧು ಪೂಜಾರಿ, ಶ್ರೀಮತಿ ವನಿತಾ ಜೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಕೆ, ಸಹ ಕಾರ್ಯದರ್ಶಿ ಶ್ರೀಮತಿ ಶಾಂತಿ ಡಿ ಶೆಟ್ಟಿ, ಖಜಾಂಚಿ ಚಂದ್ರಹಾಸ್ ಬಿ. ಸಪಲಿಗ, ಖಜಾಂಚಿ ಸುಕ್ಷಿತ್ ಎಸ್, ಸಂಘಟನಾ ಕಾರ್ಯದರ್ಶಿ ಗಣೇಶ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಸಲಹಾ ಸಮಿತಿಯ ಸದಸ್ಯರು, ಆರ್ಥಿಕ ಸಲಹಾ ಸಮಿತಿ, ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ, ಮಹಿಳಾ ವಿಭಾಗ ಹಾಗೂ ಇತರ ಸದಸ್ಯರು ವಿನಂತಿಸಿದ್ದಾರೆ.