April 2, 2025
ಸುದ್ದಿ

ಕುಲಾಲ ಪ್ರತಿಷ್ಠಾನದ ಮಂಗಳೂರು, ವಿಜಯ ಕಲಾವಿದರ ಕಿನ್ನಿಗೋಳಿಯ ನಾಟಕ ಪ್ರದರ್ಶನ, ಮುಂಬಯಿ ಪ್ರವಾಸದ ಉದ್ಘಾಟನೆ.

ಸಮಾಜ ಬಲಿಷ್ಟಗೊಳ್ಳಲು ಸಮಾಜದ ಬಗ್ಗೆ ಚಿಂತನೆ ಮಾಡುವವರು ಬೇಕು – ಐಕಳ ಹರೀಶ್ ಶೆಟ್ಟಿ

ಮುಂಬಯಿ : ದೇಶ ವಿದೇಶಗಳಲ್ಲಿರುವ ಕೂಲಾಲ ಸಮಾಜದ ಬಂಧುಗಳು ಎಲ್ಲಾ ಎಲ್ಲಾ ಕ್ಷೇತ್ರಗಳಲ್ಲೂ ಬಲಾಢ್ಯರಾಗಿದ್ದಾರೆ, ಪತ್ರಕರ್ತರಾಗಿ ಸಂಘಟಕರಾಗಿ ಸಮಾಜ ಸೇವೆ ಮಾಡುವ ಶರತ್ ಶೆಟ್ಟಿ ಅವರ ವಿಜಯ ಕಲಾವಿದರು ಕಿನ್ನಿಗೋಳಿ ಇವರ ಈ ವರ್ಷದ ಮುಂಬಯಿ ಪ್ರವಾಸದ ಪ್ರಥಮ ಪ್ರದರ್ಶನವನ್ನು ಕುಲಾಲ ಪ್ರತಿಷ್ಠಾನದ ಮಂಗಳೂರು ವತಿಯಿಂದ ನಡೆಸುತ್ತಿರುವುದು ಹಾಗೂ ಅದರೊಂದಿಗೆ ಊರಿನ ಕುಲಾಲ ಸಮಾಜ ಬಾಂದವರನ್ನು ಕರೆಸಿ ಸನ್ಮಾನಿಸುತ್ತಿರುವುದು ಅಬಿನಂದನೀಯ. ಸನ್ಮಾನಿತರೆಲ್ಲರೂ ಕುಲಾಲ ಸಮಾಜದ ಗಣ್ಯ ವ್ಯಕ್ತಿಗಳು. ಸಮಾಜ ಗಟ್ಟಿಯಾಗಲು ಸಮಾಜದ ಬಗ್ಗೆ ಚಿಂತನೆ ಮಾಡುವ ಇಂತಹ ವ್ಯಕ್ತಿಗಳು ಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರು ನುಡಿದರು.

ನ 23ರಂದು ವಿಜಯ ಕಲಾವಿದರ ಕಿನ್ನಿಗೋಳಿ ಇವರ ಈ ವರ್ಷದ ಮುಂಬಯಿ ಪ್ರವಾಸದ ಪ್ರಥಮ ನಾಟಕ “ಅಮ್ಮ ಆಮುಂಡರ” ಉದ್ಘಾಟನಾ ಕಾರ್ಯಕ್ರಮ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ತಂಡದ ಮುಂಬಯಿ ಪ್ರವಾಸದ ಉದ್ಘಾಟನೆ ಮಾಡಿದ ಅವರು ಊರಿನ ನಾಟಕ ತಂಡ ಮತ್ತು ಯಕ್ಷಗಾನ ತಂಡ ಮುಂಬಯಿಗಾಗಮಿಸಿದಲ್ಲಿ ಮುಂಬಯಿಗರು ಆರ್ಥಿಕವಾಗಿ ಹಾಗೂ ಕಲಾ ಪ್ರದರ್ಶನವನ್ನು ನೋಡಿ ಪ್ರೋತ್ಸಾಹಿಸುತ್ತಿದ್ದು ಇದು ಮುಂಬಯಿಗರ ಒಳ್ಳೆಯ ಗುಣ. ನಾವು ಹುಟ್ಟಿದ ಊರು, ತಂದೆ, ತಾಯಿ ಮುಖ್ಯವಾಗಿ ನಾವು ಹುಟ್ಟಿದ ಸಮಾಜ ಎಲ್ಲಕ್ಕಿಂತಲೂ ಮಿಗಿಲು , ಅತಿ ಹೆಚ್ಚು ಕುಲಾಲ ಸಮಾಜದ ಕಲಾವಿದರಿರುವ ವಿಜಯ ಕಲಾವಿದರು ಕಿನ್ನಿಗೋಳಿ ತಂಡಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಕುಲಾಲ ಪ್ರತಿಷ್ಠಾನ ಮಾಡಿದೆ , ಅದಕ್ಕೆ ಕಿನ್ನಿಗೋಳಿ ಗ್ರಾಮದ ಮುಂಬೈಯಲ್ಲಿರುವ ಉದ್ಯಮಿಗಳು ಗ್ರಾಮಸ್ಥರು ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಿದ್ದಾರೆ
ಎನ್ನುತ್ತಾ ಸನ್ಮಾನಿತರಿಗೆ ಹಾಗೂ ವಿಜಯ ಕಲಾವಿದರು ಕಿನ್ನಿಗೋಳಿ ನಾಟಕ ತಂಡಕ್ಕೆ ಶುಭ ಕೋರಿದರು.

ಸಂತಾಕ್ರೂಸ್ ಪೂರ್ವದ ಶ್ರೀಮಂತ್ರದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಬಂಜನ್ ಮಾತನಾಡುತ್ತಾ ಈ ನಾಟಕವು ಸಮಾಜಕ್ಕೆ ಉತ್ತಮ ಸಂದೇಶವನ್ನು ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ. ಅದೇ ರೀತಿ ನಾಟಕದ ಪ್ರಥಮ ಪ್ರದರ್ಶನಕ್ಕೆ ಅವಕಾಶ ನೀಡಿದ ಕುಲಾಲ ಪ್ರತಿಷ್ಠಾನದ ಮಂಗಳೂರು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮಯೂರ್ ಉಲ್ಲಾಳ್, ಕುಲಾಲ ಪ್ರತಿಷ್ಠಾನದ ಮಂಗಳೂರು ಇದರ ಆಡಳಿತಗೆ ಒಳಪಟ್ಟ ಶ್ರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾಶಿವ ಕುಲಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತವರ್ ಇವರನ್ನು ಗಣ್ಯರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮಯೂರ್ ಉಲ್ಲಾಳ್ ಅವರು , ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಿಂದ ಸನ್ಮಾನ ಸ್ವೀಕರಿಸಿದ್ದು ನನ್ನ ಸೌಭಾಗ್ಯ. ಐಕಳ ಹರೀಶ್ ಶೆಟ್ಟಿಯವರು ಎಲ್ಲಾ ಸಮುದಾಯದ ಪ್ರತಿನಿಧಿ ಮಾತ್ರವಲ್ಲದೆ ಸಾಂಸ್ಕೃತಿಕ ರಾಯಬಾರಿ. ಸಮಾಜದ ಬಡವರ ಬಗ್ಗೆ ಕಾಳಜಿ ವಹಿಸುತ್ತಿರುವ ದಿನೇಶ್ ಕುಲಾಲ್ ಅವರು ಕುಲಾಲ ಸಮಾಜದ ಆಸ್ತಿ. ಕೇವಲ ಎರಡು ವರ್ಷಗಳಲ್ಲಿ ಶತಮಾನವನ್ನು ಪೂರೈಸಲಿರುವ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ತನ್ನ ನೂರನೇ ವರ್ಷದಲ್ಲಿ ಸಮಾಜದ ಹೆಣ್ಮಕ್ಕಳಿಗೆ ಮಂಗಳೂರಿನ ವೀರನಾರಾಯಣ ದೇವಸ್ಥಾನದ ಸಮೀಪ ವಸತಿ ನಿಲಯ ಸ್ಥಾಪನೆಯ ಯೋಜನೆಯನ್ನು ಕೈಗೊಂಡಿದೆ ಎಂದರು.

ಶ್ರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾಶಿವ ಕುಲಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತಾವರ್ ಇವರು ಮಾತನಾಡುತ್ತಾ ಕುಲಾಲ ಪ್ರತಿಷ್ಠಾನಕ್ಕೆ ದನ್ಯವಾಸ ಸಮರ್ಪಿಸಿ ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಈ ವರ್ಷದ ಮುಂಬಯಿ ಪ್ರವಾಸಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾದ , ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್- ದಹಿಸರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸತೀಶ್ ಬಂಗೇರ, ಟೆಂಡರ್ ಫ್ರೆಶ್ ಐಸ್ಕ್ರೀಂಮ್ ನ ನಿರ್ದೇಶಕಿ ಉಷಾ ವಿ ಶೆಟ್ಟಿ, ಗೋರೆಗಾಂವ್ ಪೂರ್ವದ ನಿತ್ಯಾನಂದ ಡೈಸ್ & ಟೂಲ್ಸ್ ಆಡಳಿತ ನಿರ್ದೇಶಕ ಶ್ರೀಧರ್ ಮೂಲ್ಯ, ಸಂದೀಪ್ ಶೆಟ್ಟಿ ಮತ್ತು ತಂಡ ಮುಂಬೈ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಉಪಸ್ಥಿತರಿದ್ದರು.

ನರೇಂದ್ರ ಕೆರೆಕಾಡು ಮತ್ತು ಶರದ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಅತಿಥಿ ಗಣ್ಯರನ್ನು ಕುಲಾಲ ಸಂಘ ಮುಂಬಯಿಯ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ ವೈ ಮೂಲ್ಯ,
ಕುಲಾಲ ಪ್ರತಿಷ್ಠಾನದ ಮಂಗಳೂರು ಇದರ ಮುಂಬಯಿ ಸಂಘಟಿಕರಾದ, ದಿನೇಶ್ ಕುಲಾಲ
ಉಮೇಶ್ ಬಂಗೇರ, .ಯೋಗೀಶ್ ಬಂಗೇರ,ಕುಲಾಲ ಸಂಘ ಮುಂಬಯಿಯ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ವೈ ಬಂಗೇರ
ಗೌರವಿಸಿದರು,

………………….

ಮುಂಬೈಯರು ಕಲೆ,ಕಲಾವಿದರಿಗೆ ಪ್ರೋತ್ಸಾಹ ನೀಡುವವರು:
ರತ್ನಾಕರ್ ಶೆಟ್ಟಿ ಮುಂಡ್ಕೂರು

ಬಂಟರ ಸಂಘ ಮುಂಬಯಿಯ ಎಸ್. ಎಮ್. ಶೆಟ್ಟಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಕಿನ್ನಿಗೋಳಿ ತಂಡ ಮುಂಬೈ ನಗರಕ್ಕೆ
ನಿರಂತರ ಬರಬೇಕೆನ್ನುವ ನನ್ನ ಮತ್ತು ಊರಿನವರ ಎಲ್ಲರ ಆಶಯವಾಗಿದೆ, ಅದಕ್ಕೆ ಪೂರಕವಾಗಿ ಎಲ್ಲರೂ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ,
ಇಲ್ಲಿ ನಾವೆಲ್ಲರೂ ಬಾಂದವ್ಯದ ಮೂಲಕ ಒಟ್ಟಾಗಿದ್ದೇವೆ. ಶರತ್ ಶೆಟ್ಟಿ ಹಾಗೂ ದಿನೇಶ್ ಕುಲಾಲ್ ಇವರದ್ದು ಪತ್ರಕರ್ತರಾಗಿ ಬಾಂದವ್ಯ. ಕಳೆದ ೩೦ – ೩೫ ವರ್ಷಗಳಿಂದ ಪ್ರಕಾಶ್ ಶೆಟ್ಟಿ ಸುರತ್ಕಲ್ ಊರಿನ ಕಲಾವಿದರನ್ನು ಮುಂಬಯಿಗೆ ತರಿಸಿ ಪ್ರೋತ್ಸಾಹಿಸುತ್ತಿದ್ದು ಅಂತಹ ಕಾರ್ಯಕ್ರಮಕ್ಕೆ ಸಹಕರಿಸಲು ಸಂತೋಷವಾಗುತ್ತಿದೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ
ಅವರ ಆಶ್ರಯದಲ್ಲಿ ಡಿ 7 ರಂದು ಕುರ್ಲಾ ಪೂರ್ವ ಬಂಟರ ಭವನದಲ್ಲಿ ವಿಶ್ವ ಬಂಟರ ಸಮಾಗಮ-2024ರ ಕಾರ್ಯಕ್ರಮದ ನಡೆಯಲಿದೆ ಎಂದರು.

ನಾಟಕದ ಕಲಾವಿದೆ ಕಾನೂನು ವಿದ್ಯಾರ್ಥಿನಿಯಾಗಿರುವ ಕೃತಿಕಾ ಕುಲಾಲ್ ಉಲ್ಲಂಜೆ ಅವರಿಗೆ ಶಿಕ್ಷಣಕ್ಕೆ ನೆರವು,

ನಾಟಕ ತಂಡದಲ್ಲಿ ಕುಲಾಲ ಸಮಾಜದ ಏಳು ಮಂದಿ ಕಲಾವಿದರು ಅಭಿನಯಿಸುತ್ತಿದ್ದು, ನಾಟಕದ ಕಲಾವಿದೆ
ಕಾನೂನು ವಿದ್ಯಾರ್ಥಿನಿಯಾಗಿರುವ ಕೃತಿಕಾ ಕುಲಾಲ್ ಉಲ್ಲಂಜೆ ಅವರಿಗೆ ಬಂಟರ ಸಂಘ ಮುಂಬಯಿಯ ಎಸ್. ಎಮ್. ಶೆಟ್ಟಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಇವರು ಐಕಳ ಹರೀಶ್ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಶಿಕ್ಷಣಕ್ಕೆ ಸಹಯಧನವನ್ನು ಹಸ್ತಾಂತರಿಸಿದರು.


ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿ ವಿಜಯಾ ಕಲಾವಿದರು ಅಭಿನಯಿಸಿದ, ಹರೀಶ್ ಪಡುಬಿದ್ರಿಯವರ ರಚನೆಯ ವಿಜಯಕುಮಾರ್ ಕೊಡಿಯಾಲ್‌ಬಲ್ ನಿರ್ದೇಶನದ ಈ ಬಾರಿಯ “ಅಮ್ಮು ಆಮುಂಡರಾ” ತುಳು ನಾಟಕ ಪ್ರದರ್ಶನ ನಡೆಯಿತು,
ನಾಟಕದಲ್ಲೇನಿದೆ…?
ಹಾಸ್ಯ ಸನ್ನಿವೇಶಗಳಿದ್ದು ಹಾಸ್ಯದ ಪಂಚ್ ಸಂಭಾಷಣೆಗಳು, ಹಾಡಿನ ಕ್ಲಿಪ್ಪಿಂಗ್‌ಗಳು ಮುದ ನೀಡುತ್ತವೆ. ಹಾಸ್ಯ ನಿರಂತರವಾಗಿದ್ದರೂ ಈ ನಾಟಕದಲ್ಲಿ ಮನ ಕಲಕುವ ಸೆಂಟಿಮೆಂಟ್ ಸನ್ನಿವೇಶಗಳನ್ನು ಸೃಷ್ಠಿಸುವ ಅಮ್ಮುವಿನ ಪಾತ್ರ, ಆಕೆಯ ತಂದೆ ಕಂಬಳ ಕೋಣಗಳ ಯಜಮಾನ ಕಲ್ಲಗುತ್ತು ಜಗಜೀವನದಾಸರ ಪಾತ್ರಗಳು ಈ ನಾಟಕದ ಜೀವನಾಡಿ. ನಾಟಕ ಮುಗಿದ ಬಳಿಕವೂ ಕಲಾಭಿಮಾನಿಗಳ ಮನಸಲ್ಲಿ ಅಚ್ಚಳಿಯದೇ ನಿಲ್ಲುತ್ತಾರೆ. ಅಂತಹ ಸೆಂಟಿಮೆಂಟ್ ಸನ್ನಿವೇಶಗಳು, ಹಾಸ್ಯ ದೃಶ್ಯಗಳು ಸಂಭಾಷಣೆಗಳು ಈ ನಾಟಕವನ್ನು ಗೆಲ್ಲಿಸಿವೆ. ಕಂಬಳ ಕ್ಷೇತ್ರದ ಬಗ್ಗೆ ಮಾರ್ಮಿಕ ಸಂಭಾಷಣೆಗಳ ಮೂಲಕ ಕಂಬಳದ ಉಳಿವಿನ ಬಗ್ಗೆ ತಿಳಿಸುತ್ತಾ. ವಿಭಿನ್ನ ನಾಟಕದ ಕಥೆ ಅಂದಾರವಿದೆ
ಒಟ್ಟು ನಾಟಕ ಕಲಾಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ

Related posts

ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ಜಗನ್ನಾಥ ಚೌಟ ಬದಿಗುಡ್ಡೆ ನೇಮಕ

Mumbai News Desk

ನ್ಯಾಯವಾದಿ ರಾಘವ ಎಂ. ನೋಟರಿ ಪಬ್ಲಿಕ ಆಗಿ ನೇಮಕ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಶ್ರಾವಣಿ ರಾಜೇಶ್ ಕೋಟ್ಯಾನ್ ಗೆ ಶೇ 94.50 ಅಂಕ.

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.

Mumbai News Desk

ಯುಎಇ ಬಂಟ್ಸ್ ನ 47ನೇ ವರ್ಷದ “ಗಲ್ಫ್ ಬಂಟೋತ್ಸವ-2024″* ಡಾ.ಕೆ.ಪ್ರಕಾಶ್ ಶೆಟ್ಟಿಯವರಿಗೆ ಬಂಟ ವಿಭೂಷಣ” ಪ್ರಶಸ್ತಿ ಪ್ರಧಾನ

Mumbai News Desk

ನಗರದ ಪ್ರಸಿದ್ದ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಮುಂಬೈ – 2024 ಪುರಸ್ಕಾರ.

Mumbai News Desk