July 23, 2026
Mumbai News Kannada
ಪ್ರಕಟಣೆ

ನ. 26, 27 ಕಾಪುವಿನ ಮೂರೂ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜಾರ್ದೆ ಮಾರಿಪೂಜೆ







ಇತಿಹಾಸ ಪ್ರಸಿದ್ಧ ಕಾಪು ಹಳೆ ಶ್ರೀ ಮಾರಿಯಮ್ಮ ದೇವಸ್ಥಾನ, ಹೊಸ ಶ್ರೀ ಮಾರಿಗುಡಿ ದೇವಸ್ಥಾನ, ಮೂರನೇ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಲಾವಧಿ ಜಾರ್ದೆ ಮಾರಿ ಪೂಜೆ ನವಂಬರ್ 26 ಮತ್ತು 27 ರಂದು ನಡೆಯಲಿದೆ.
ಮಂಗಳವಾರ ರಾತ್ರಿ ಹಳೇ ಶ್ರೀ ಮಾರಿಗುಡಿಗೆ ಶ್ರೀ ವೆಂಕಟ್ರಮಣ ದೇವಸ್ಥಾನ ಹಾಗೂ ಹೊಸ ಶ್ರೀ ಮಾರಿಗುಡಿ ಮತ್ತು ಮೂರನೇ ಶ್ರೀ ಮಾರಿಗುಡಿಗೆ ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದಿಂದ ದೇವರ ಆಭರಣಗಳನ್ನು ಮೆರವಣಿಗೆ ಮೂಲಕ ತಂದು ಬಳಿಕ ಮಾರಿ ಪೂಜೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ.
ಬುಧವಾರ ಸಂಜೆವರೆಗೆ ಮಾರಿ ಪೂಜೆಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ಮಾರಿಯಮ್ಮ ದೇವಿಯ ದರ್ಶನದ ಬಳಿಕ ವಿಸರ್ಜನೆ ನಡೆಯಲಿದೆ.
ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದೇ ಎಂಬ ಹೆಗ್ಗಳಿಕೆ ಗಳಿಸಿರುವ ಕಾಪುವಿನ ಮೂರು ಮಾರಿಗುಡಿಯಲ್ಲಿ ನಡೆಯುವ ಮಾರಿ ಪೂಜೆಗೆ ಊರ – ಪರವೂರ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ರೂಪದಲ್ಲಿ ಹೂವಿನ ಪೂಜೆ ಸಹಿತ ನಾನಾ ಸೇವೆಗಳನ್ನು ನಡೆಸುತ್ತಾರೆ.



Related posts

ತುಳು ಸಂಘ ಬೊರಿವಲಿ ಸೆ. 28 ರಂದು 14ನೇ ವಾರ್ಷಿಕ ಮಹಾಸಭೆ

Mumbai News Desk

ಸ್ಪಂದನ ಯುವ ವೃಂದದ ‘ಸ್ಪಂದನ ದಶ ಸಂಭ್ರಮ-2026’: ಮೇ 3ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ

Mumbai News Desk

ಮಾ. 31 : ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಾಪುವಿನವರೆಗೆ ಭಜನಾ ಸಂಕೀರ್ತನಾ ಪಾದಯಾತ್ರೆ

Mumbai News Desk

ಮಾ.17 ರಂದು ಕ್ಯಾ. ಬ್ರಿಜೇಶ್ ಚೌಟ ಮುಂಬೈ ಬೇಟಿ, ನ್ಯೂ ಪನ್ವೆಲ್ ನಲ್ಲಿ ಅಭಿಮಾನಿಗಳ ಸಭೆ,

Mumbai News Desk

ಜಗಜ್ಯೋತಿ ಕಲಾವೃಂದ ಡೊಂಬಿವಲಿ : ಫೆ. 26ಕ್ಕೆ ಮಹಾಶಿವರಾತ್ರಿ ಪೂಜೆ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ; ನಾಲಾಸೋಪಾರ ಮೇ 27. ಶ್ರೀ ಶನಿ ಜಯಂತಿ ಉತ್ಸವ.

Mumbai News Desk