
ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಸಂಘ ಡೊಂಬಿವಲಿಯ ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ನಾಡ ಹಬ್ಬ ಕಾರ್ಯಕ್ರಮ ಡಿ.1ರಂದು ಮಧ್ಯಾಹ್ನ 3-30 ರಿಂದ ಡೊಂಬಿವಲಿ ಪೂರ್ವದ ಎಂ ಆಯ್ ಡಿ ಸಿ ಪರಿಸರದ ಹೊಟೇಲ್ ಶಿವಂ ಸಭಾಗೃಹದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಕುಮಾರ ಎನ್ ಶೆಟ್ಟಿ ವಹಿಸಲಿದ್ದು, ಸಂಘದ ಕಾರ್ಯಾಧ್ಯಕ್ಷ ಡಾ ಇಂದ್ರಾಳಿ ದಿವಾಕರ ಶೆಟ್ಟಿ ಅವರು ನಾಡಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಕಲಾ ಕೇಂದ್ರ ಮುಂಬಯಿಯ ಅಧ್ಯಕ್ಷರಾದ ಮಧುಸೂದನ ಟಿ.ಆರ್ ಹಾಗೂ ಕನ್ನಡ ಸಂಘ ಸಾಂತಾಕ್ರೂಜ್ ಮುಂಬಯಿಯ ಇದರ ಅಧ್ಯಕ್ಷೆ ಸುಜಾತಾ ರಾಮಣ್ಣ ಶೆಟ್ಟಿ ಆಗಮಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ಸಂಘದ ಮಹಿಳಾ ವಿಭಾಗದ ವತಿಯಿಂದ ಕನ್ನಡ ನಾಡು ನುಡಿ ಹಾಗೂ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ವೈವಿಧ್ಯಮಯ ನೃತ್ಯ ವೈಭವ ಕಾರ್ಯಕ್ರಮ ಜರುಗಲಿದ್ದು ಸರ್ವ ತುಳು- ಕನ್ನಡಿಗರು ಈ ನಾಡ ಹಬ್ಬ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ವನ್ನು ಯಶಸ್ವಿ ಗೋಳಿಸಬೇಕೆಂದು ಸಂಘದ ಉಪಾಧ್ಯಕ್ಷರಾದ ಲೋಕನಾಥ ಎ ಶೆಟ್ಟಿ, ಉಪಕಾರ್ಯಾಧ್ಯಕ್ಷರಾದ ದೇವದಾಸ್ ಕುಲಾಲ್. ಗೌ.ಕಾರ್ಯದರ್ಶಿ ಪ್ರೋ.ಅಜೀತ ಉಮರಾಣಿ, ಕೋಶಾಧಿಕಾರಿ ತಾರಾನಾಥ ಎಸ್ ಅಮೀನ್ ಜಿತೆ ಕಾರ್ಯದರ್ಶಿ ದಿನೇಶ್ ಕುಡ್ವ, ಜತೆ ಕೋಶಾಧಿಕಾರಿ ವಿಮಲಾ ವಿ ಶೆಟ್ಟಿ.ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ಎಲ್ ಶೆಟ್ಟಿ. ಉಪಕಾರ್ಯಾಧ್ಯಕ್ಷೆ ಯೋಗಿನಿ ಎಸ್ ಶೆಟ್ಟಿ, ಕಾರ್ಯದರ್ಶಿ ಮಧುರಿಕಾ ಬಂಗೆರಾ. ಲಲಿತಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ ಶೆಟ್ಟಿ, ಕಾರ್ಯದರ್ಶಿ ರಮೇಶ್ ಅಚ್ಚಣ್ಣ ಶೆಟ್ಟಿ ಹಾಗೂ ಸಂಘದ ಕಾರ್ಯಕಾರಿ ಸಮುತಿಯ ಸರ್ವ ಸದಸ್ಯರು, ಮಹಿಳಾ ವಿಭಾಗ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.