
ಮೀರಾ ರೋಡಿನ ಮೀರಾಗಾವ್ಂ ನ ಅಮರ್ ಪ್ಯಾಲೆಸ್ ಹೋಟೆಲ್ ಬಳಿಯ ಮೀರಾ ಸೊಸೈಟಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ ಆಡಳಿತದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 33ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆಯು ನ.30 ರ ಶನಿವಾರ ಟ್ರಸ್ಟಿನ ಆಡಳಿತ ಮೊಕ್ತೇಸರ ಶಿಮಂತೂರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿ ಯವರ ಮುಂದಾಳತ್ವದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ್ ಭಟ್ ಪುರುಹಿತ್ವದಲ್ಲಿ,ಜಯಶೀಲ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಆ ಪ್ರಯುಕ್ತ ಬೆಳಿಗ್ಗೆ 6 ರಿಂದ 7 ಗಣಹೋಮ, 7 ರಿಂದ 8 ರುದ್ರಾಭಿಷೇಕ, 9.30 ರಿಂದ 10.30 ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯಿಂದ ಭಜನೆ, 10.30 ರಿಂದ ಗುರುಸ್ವಾಮಿ ಶ್ರೀ ಜಯಶೀಲ ತಿಂಗಳಾಯರವರ ನೇತೃತ್ವದಲ್ಲಿ ಲಕ್ಮಿ ನಾರಾಯಣ ಭಜನಾ ಮಂಡವಳಿಯವರಿಂದ ಭಜನೆ.ಮಧ್ಯಾಹ್ನ 11.30 ರಿಂದ 12.30 ರ ವರೆಗೆ ಕಲಿಯುಗವರದ ಶ್ರೀ ಅಯ್ಯಪ್ಪ ಸ್ವಾಮಿಗೆ ಪಡಿಪೂಜೆ ಹಾಗೂ ಮಹಾಪೂಜೆ ನಡೆಯಲಿದೆ..
ಮಹಾಪೂಜೆ ಬಳಿಕ ಮಧ್ಯಾಹ್ನ 12.30 ಕ್ಕೆ ಸಾಯಿ ಪ್ರಸಾದ್ ವಿಶ್ವನಾಥ್ ಪೂಂಜಾ, ಶಕ್ತಿ ಪ್ರಸಾದ್ ವಿಶ್ವನಾಥ್ ಪೂಂಜಾ, ಮತ್ತು ರಶ್ಮಿಶ್ ರಾಮಾ ಶೆಟ್ಟಿ (ಅನ್ನು) ಇವರ ಸೇವಾ ರೂಪದಲ್ಲಿ ಮಹಾ ಪ್ರಸಾದ ಅನ್ನದಾನ ನಡೆಯಲಿದೆ.
ಪೂಜಾ ಸೇವೆಗೆ ದೇವಸ್ಥಾನದ ಹೊರ ಹವರಣದಲ್ಲಿ ಆನಂದ ಶೆಟ್ಟಿ ಐಕಳ(ಹೋಟೆಲ್ ದ್ವಾರಕ) ಸುರೇಶ್ ಶೆಟ್ಟಿ (ಸಮಾಧಾನ್ ಹೋಟೆಲ್ ) ಇವರು ಸೇವಾ ರೂಪದಲ್ಲಿ ಮಂಟಪ ಮಾಡುವಲ್ಲಿ ಸಹಕರಿಸಿದ್ದಾರೆ,
ಸಂಜೆ 6 ರಿಂದ 7ರ ವರೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಿಳಾ ಸದಸ್ಯರಿಂದ ಭಜನೆ,
7 ರಿಂದ 8.30 ರ ವರೆಗೆ ಶ್ರೀ ವಿಜಯ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾ ಕಾರ್ಯಕ್ರಮ.
8.30 ರಿಂದ 9 ರ ವರೆಗೆ ದೀಪೋತ್ಸವ ಹಾಗೂ ಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಲಿದೆ..
ಭಕ್ತಾದಿಗಳೆಲ್ಲರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಹಾಗೂ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು , ದೇವಸ್ಥಾನದ ಅರ್ಚಕ ವೃಂದ,
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್, ,ಮೀರಾ ಗಾವ್, ಮತ್ತು ಮೀರಾ ಸೊಸೈಟಿ ಯ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.