ಮಲಾಡ್ ಕುರಾರ್ ವಿಲೇಜ್ ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ಡಿ. 1 ನೇ ಭಾನುವಾರ ಬೆಳಿಗ್ಗೆ 8 ರಿಂದ ರಾತ್ರಿ 8 ರ ತನಕ ಸುಮಾರು 11 ಭಜನಾ ಮಂಡಳಿಯವರಿಂದ ಅಖಂಡ ಹರಿನಾಮ ಸಂಕೀರ್ತನ ಜರಗಲಿದೆ.
ಆಜ್ಞಾನದ ಅಂಧಕಾರದಲ್ಲಿ ಚಡಪಡಿಸುತ್ತಿರುವ ಮಾನವ ಜನಾಂಗಕ್ಕೆ ಜ್ಜ್ಯಾನವೆಂಭ ದೀಪದ ಬೆಳಕನ್ನು ಭಗವತ್ ಚಿಂತನೆಯಿಂದ ಮಾತ್ರ ಕಾಣಲು ಸಾಧ್ಯ. ನಿತ್ಯ ಭಗವಂತನ ಚಿಂತನೆಯಿಂದ ನಮ್ಮ ಶರೀರ, ಬುದ್ದಿ, ಮನಸ್ಸನ್ನು ದೈವೀ ಕಾರ್ಯಗಳಿಂದ ಸ್ವಚ್ಛ ಗೊಳಿಸಬೇಕು. ಸ್ನಾನದ ಮೂಲಕ ದೇಹವನ್ನು ಸ್ವಚ್ಛ ಗೊಳಿಸಿದಂತೆ ಧ್ಯಾನ, ಜಪ, ತಪಗಳ ಅನುಷ್ಠಾನದಿಂದ ಆತ್ಮದ ಕೊಳೆಯನ್ನು ಶುಚಿಭೂರ್ತಗೊಳಿಸಬೇಕು, ಆತ್ಮದಲ್ಲಿರುವ ಕೊಳೆಗಳು ದೂರವಾದಾಗ ಸದ್ಗುಣಗಳು ನಮ್ಮಲ್ಲಿ ಜಾಗೃತಗೊಂಡು ನಮ್ಮ ಜೀವನವು ಸಾಕ್ಷಾತ್ಕಾರ ವಾಗುತ್ತದೆ.
ಕಳೆದ 50ವರುಷಗಳಿಂದ ಧಾರ್ಮಿಕ ಪ್ರಜ್ಯೆಯನ್ನು ಬೆಳೆಸುವಲ್ಲಿ ಧರ್ಮದ ಜನಜಾಗೃತಿ ಮೂಡಿಸುವಲ್ಲಿ ಈ ಸಂಸ್ಥೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಪ್ರತೀ ವರುಷ ನಡೆಯುವ ಈ ಪುಣ್ಯ ಹರಿನಾಮ ಸಂಕೀರ್ತನೆಯಲ್ಲಿ ಈ ವರುಷ ಶ್ರೀ ಮಹತೋಭಾರ ಶನೀಶ್ವರ ಭಜನಾ ಮಂಡಳಿ, ಮಲಾಡ್, ಶ್ರೀ ಹನುಮಾನ್ ಭಜನಾ ಮಂಡಳಿ ದಹಿಸರ್, ಶ್ರೀ ರಜಕ ಸಂಘ ಭಜನಾ ಮಂಡಳಿ, ಶ್ರೀ ಸಾಪಲ್ಯ ಸೇವಾ ಸಂಘ ಭಜನಾ ಮಂಡಳಿ, ಶ್ರೀ ವರ ಮಹಾಲಕ್ಷ್ಮಿ ಭಜನಾ ಮಂಡಳಿ ಮಲಾಡ್, ಶ್ರೀ ಬಂಟ್ಸ್ ಫೋರಮ್ ಭಜನಾ ಮಂಡಳಿ ಮೀರಾ ಭಾಯೆಂದಾರ್, ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನ ಭಜನಾ ಮಂಡಳಿ ಮಲಾಡ್, ಶ್ರೀ ವಿಠೋಭ ಭಜನಾ ಮಂಡಳಿ ಮೀರಾ ರೋಡ್, ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮಲಾಡ್, ಶ್ರೀ ಅಯ್ಯಪ್ಪ ಭಜನಾ ಮಂಡಳಿ, ಫೋರ್ಟ್, ಶ್ರೀ ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಾಕಿನಾಕ, ಇದರ ಸದಸ್ಯರು ಭಾಗವಹಿಸಲಿದ್ದಾರೆ, ಹಾಗೂ ಶ್ರೀ ನಿತ್ಯ ಪ್ರಕಾಶ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ದಿನ ಪೂರ್ತಿ ಕಾರ್ಯಕ್ರಮ ಜರಗಲಿದೆ.
ಈ ಪುಣ್ಯ ಕಾರ್ಯಕ್ರಮಕ್ಕೆ, ಸುರೇಶ ಶೆಟ್ಟಿ( ಮಾಲಕರು ಜ್ಯೋತಿ ಹೋಟೆಲು, ಉದಯ ಮೊಗವೀರ), (ಪಂಚ ಗಂಗಾವಳಿ ಬ್ಯಾಂಕ್ ನ ನಿರ್ದೇಶಕರು), ಸಂತೋಷ್ ಪೂಜಾರಿ (ಭಾರತ್ ಬ್ಯಾಂಕ್ ನಿರ್ದೇಶಕರು), ರಮೇಶ್ ತೇತಿ , ಉದ್ಯಮಿ , ಸತೀಶ್ ಶೆಟ್ಟಿ ಉದ್ಯಮಿ ಹಾಗೂ ಹೋಟೆಲು ಉದ್ಯಮಿ ಸುರೇಂದ್ರ ಶೆಟ್ಟಿಯವರು ಈ ಪುಣ್ಯ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಲಿರುವರು. ಈ ಪುಣ್ಯ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಗಂದ ಪ್ರಸಾದವನ್ನು ಸ್ವೀಕರಿಸಬೇಕೆಂದು
ಕಾರ್ಯಕಾರಿ ಸಮಿತಿಯ ಪರವಾಗಿ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ, ಪ್ರದಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಜೆ ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಎನ್ ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ವಿನಂತಿಸಿದ್ದಾರೆ.