ಚಿತ್ರ ವರದಿ : ಪಿ.ಆರ್.ರವಿಶಂಕರ್
ನಗರದ ಪ್ರತಿಷ್ಟಿತ ವೈದ್ಯಕೀಯ ಶುಷ್ರೂಷಾ ಸಂಸ್ಥೆಯಾಗಿರುವ ತುಂಗಾ ಹಾಸ್ಪಿಟಲ್ಸ್ ಆಯೋಜಿಸಿದ್ದ ರಾಷ್ಟ್ರೀಯ ಡಾಕ್ಟರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಇದೇ ನವೆಂಬರ್ ತಾ.28 ರಂದು ಆರಂಭವಾಗಿದ್ದು ಶನಿವಾರ ತಾ.30 ರಂದು ಸಂಜೆ ಮುಕ್ತಾಯಗೊಂಡಿತು.
ಬೊಯಿಸರ್ ಪಿ.ಡಿ.ಟಿ ಎಸ್ ಮೈದಾನದಲ್ಲಿ ಜರಗಿದ ಭವ್ಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಪುರಸ್ಕಾರಗಳನ್ನು ವಿತರಿಸಲಾಯಿತು.
ವಿಜೇತರನ್ನು ಅಭಿನಂದಿಸಿದ ತುಂಗಾ ಹಾಸ್ಪಿಟಲ್ಸ್ ಸಮೂಹ ಸಿ.ಎಮ್ ಡಿ ಡಾ•ಸತೀಶ್ ಬಿ. ಶೆಟ್ಟಿ ಮಾತನಾಡಿ ” ನಮ್ಮ ಮಾತಾಶ್ರೀ ಶ್ರೀಮತಿ ತುಂಗಾ ಭೋಜ ಶೆಟ್ಟಿಯವರ ಪ್ರೀತಿ ಹಾಗೂ ಪ್ರೇರಣೆಯಿಂದ ಕಳೆದ ಏಳು ವರ್ಷಗಳಿಂದ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ. ಮಂಗಳೂರು ನಮ್ಮ ಹುಟ್ಟೂರಿನ ಪ್ರವಾಸದಲ್ಲಿರುವ ಅವರು ಎಲ್ಲರಿಗೂ ಶುಭಸಂದೇಶ ಕಳಿಸಿ ಹಾರೈಸಿದ್ದಾರೆ. ಬಿಡುವಿಲ್ಲದೆ ನಿರಂತರ ಶುಷ್ರೂಷಾ ಕಾರ್ಯನಿರತರಾಗಿರುವ ವೈದ್ಯರಿಗೆಲ್ಲಾ ಕ್ರೀಡಾ ಚಟುವಟಿಕೆಗಳ ಮೂಲಕ ಒಂದೆಡೆ ಕಲೆಯುವಂತೆ ಮಾಡುವುದು , ಸ್ಪರ್ಧಾತ್ಮಕ ವಾತಾವರಣದಲ್ಲಿ ಹೊಸ ಹುರುಪು ಪಡೆದು ಹೊಸ ಸ್ನೇಹಿತರನ್ನು ಪರಿಚಯಿಸುವುದು ಈ ಟೂರ್ನಮೆಂಟ್ ನ ಆಶಯವಾಗಿದ್ದು , ಇಂದು ನೀವೆಲ್ಲರೂ ದೂರದ ಸ್ಥಳಗಳಿಂದ ಬಂದು ಭಾಗವಹಿಸಿರುವುದು ನಮಗೆ ಇನ್ನಷ್ಟು ಹುರುಪು ನೀಡಿ ಮುಂದೆಯೂ ಇಂತಹ ಟೂರ್ನಮೆಂಟ್ ನಡೆಸಲು ಪ್ರೇರಣೆ ನೀಡಿದೆ.” ಎನ್ನುತ್ತಾ ಮೂರು ದಿನದ ಯಶಸ್ವೀ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರನ್ನೂ ಸಭೆಗೆ ಪರಿಚಯಿಸಿ ಧನ್ಯವಾದ ಅರ್ಪಿಸಿದರು.
ಕ್ರಿಕೆಟ್ ಟೂರ್ನಮೆಂಟ್ ಬಹುಮಾನ ವಿಜೇತರಾದ ತುಂಗಾ ಹಾಸ್ಸ್ಪಿಟಲ್ಸ್ ( ಪ್ರಥಮ ವಿನ್ನರ್ಸ್), ಚಂದ್ರಾ ಹಾಸ್ಪಿಟಲ್ ಮುಂಬೈ ( ದ್ವಿತೀಯ ರನರ್ಸ್) , ಬೆಸ್ಟ್ ಬೌಲರ್ ಹಾಗೂ ಪುನೀತ್ ರಾಜ್ ಕುಮಾರ್ ಟ್ರೋಫಿ ವಿಜೇತ ಡಾ• ವಿನೋದ್ ರಾಜ್ ಕುಂದಾಪುರ , ಬೆಸ್ಟ್ ಫೀಲ್ಡರ್ ಇಷಾನ್ ಟಕ್ಕರ್ , ಬೆಸ್ಟ್ ಕೀಪರ್ ಕ್ರುಣಾಲ್ ಟಕ್ಕರ್ , ಬೆಸ್ಟ್ ಕ್ಯಾಪ್ಟನ್ ಡಾ• ಗುರುಪ್ರಸಾದ್ ಶೆಟ್ಟಿ ಹಾಗೂ ವಿವಿಧ ವಿಭಾಗಗಳಲ್ಲಿ ಇತರ ಹಲವು ವಿಜೇತರ ಬಹುಮಾನಗಳನ್ನು ನೀಡಲಾಯಿತು.
ವೇದಿಕೆಯಲ್ಲಿಮುಖ್ಯ ಅತಿಥಿಯಾಗಿ ಸರ್ಜನ್ ಡಾ • ರಾಜೇಶ್ ಗುಪ್ತಾ , ರಕ್ಷಿತ್ ಶೆಟ್ಟಿ (ವ್ಯವಸ್ಥಾಪಕರು ರೆಯಾಂಶ್ ಹೋಟೆಲ್), ತುಂಗಾ ಪ್ರೀಮಿಯರ್ ಲೀಗ್ ಮುಖ್ಯ ಆಯೋಜಕರಾದ ಸಂತೋಷ್ ಶೆಟ್ಟಿ , ಶ್ರೀಮತಿ ಅನುರಾಧ ಶೆಟ್ಟಿ , ವ್ಯವಸ್ಥಾಪಕರಾದ ಡಾ•ಮೆಹಬೂಬ್ ಶೇಖ್ ಮತ್ತು ಡಾ• ಹೇಮಲ್ ಬರ್ಚಾ ಇನ್ನಿತರರು ಉಪಸ್ಥಿತರಿದ್ದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಚಿತ್ರ ವಿವರ : ಪಿ.ಆರ್.ರವಿಶಂಕರ್
ಡಹಾಣೂ ರೋಡ್
8483980035