23.5 C
Karnataka
April 4, 2025
ಸುದ್ದಿ

ಉಭಯ ಜಿಲ್ಲೆಗಳ ಹೆದ್ದಾರಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾದ ಉಡುಪಿ/ ಮಂಗಳೂರು ಸಂಸದರು




ಕರಾವಳಿ ಜಿಲ್ಲೆಯ ಜನಜೀವನದ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 66ರ ಗಂಭೀರ ಲೋಪದೋಷಗಳನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ತರಲು ಉಡುಪಿ ಸಂಸದ ಶ್ರೀನಿವಾಸ್ ಕೋಟ ಮತ್ತು ಮಂಗಳೂರು ಸಂಸದ ಬ್ರಿಜೇಶ್ ಚೌಟ ಕೇಂದ್ರ ಸಚಿವರನ್ನು ಭೇಟಿಯಾಗಿ ಸುಧೀರ್ಘ ವಾಗಿ ಚರ್ಚಿಸಿದರು.
ಕರಾವಳಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಯಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದು,, ಮಂಗಳೂರಿನ ನಂತೂರು ಜಂಕ್ಷನ್ ಸೇರಿದಂತೆ ಉಡುಪಿಯ ಅಂಬಲಪಾಡಿಯ ಮೇಲ್ಸೇತುವೆ, ಕಟಪಾಡಿ , ಬ್ರಹ್ಮಾವರದ ಆಕಾಶವಾಣಿಯ ತಿರುವಿನ ಅಂಡರ್ ಪಾಸ್ ನ ಸಮಸ್ಯೆಗಳ ಪರಿಹಾರಕ್ಕಾಗಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿ ಅದ್ಯಯನ ಮಾಡುವಂತ್ತೆ ಕೇಂದ್ರ ಸಚಿವರಲ್ಲಿ ಚರ್ಚೆ ನಡೆಸಿದರು.
ಸಂಸದರ ಮನವಿಗೆ ಸ್ಪಂದಿಸಿದ ಸಚಿವ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ 66ರ ಅಪಘಾತ ಹಾಗೂ ವಾಹನ ಒತ್ತಡಗಳ ಸ್ಥಳವನ್ನು ಪರಿಶೀಲನೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಿ ವರದಿ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸಚಿವರು ಆದೇಶ ನೀಡಿದರು.
ಇದೆ ವೇಳೆ ಕರ್ನಾಟಕ ರಾಜ್ಯ ಮತ್ತು ಕರಾವಳಿ ರಸ್ತೆಗಳ ಸುಧಾರಣೆಗಾಗಿ ಸೆಂಟ್ರಲ್ ರೋಡ್ ಫಂಡ್ ನಿಂದ ರಾಜ್ಯಕ್ಕೆ ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಸಂಸದರುಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬ್ರಿಜೇಶ್ ಚೌಟರೊಂದಿಗೆ ಲೋಕಸಭಾ ಸದಸ್ಯರಾದ ಬೆಂಗಳೂರು ಗ್ರಾಮಾಂತರ ಸಂಸದ ಮಂಜುನಾಥ ಕೋಲಾರ, ಸಂಸದ ಮಲ್ಲೇಶ್, ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಉದ್ಯಮಿ ಜಿ ಶಂಕರ್ , ಬಿಜೆಪಿ ಮುಖಂಡರಾದ ಸುರೇಶ್ ನಾಯಕ್ ಉಪಸ್ಥಿತರಿದ್ದರು.

Related posts

ಭಾಷೆಗಳು ಸ್ನೇಹ ಸೌಹಾರ್ದತೆಯ ಸಂಕೇತ’ -ಆಶಿಶ್ ಶೇಲಾರ್

Mumbai News Desk

ಶಾರದಾ ಎ.ಅಂಚನ್ ಇವರ ವೈದ್ಯಕೀಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

Mumbai News Desk

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದನೆ : ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಆರಂಭ

Mumbai News Desk

ಬಾಂಡೂಪ್: ಶೇಖರ್ ನಾಯ್ಕ್ ನಿಧನ

Mumbai News Desk

ಶಾಲಾ ಹಂತದಲ್ಲೇ ಈಜು ಕಲಿಕೆ – ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಸಲಹೆ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ, ಮುಂಡ್ಕೂರು ವತಿಯಿಂದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆಯಲ್ಲಿ ಮೃತರಾದ ತಾರಾನಾಥ ವಿ ಬಂಜನ್ ಅವರಿಗೆ ಶ್ರದ್ಧಾಂಜಲಿ.

Mumbai News Desk