September 6, 2026
Mumbai News Kannada
ಸುದ್ದಿ

ಮುಲ್ಕಿಯ ಜನಪ್ರಿಯ ಡ್ರೈ ಫ್ರುಟ್ಸ್ ಸ್ಟೋರ್, ಕ್ಯಾನ್ ಕೋಸ್ (KANCOS)ವತಿಯಿಂದ “ಗಿವ್ ಅವೇ” ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ





​ಮುಲ್ಕಿಯ ಪ್ರಸಿದ್ಧ ಒಣಹಣ್ಣುಗಳ ಮಳಿಗೆ ” ಕ್ಯಾನ್ ಕೋಸ್ ಝೋನ್ ಡ್ರೈ ಫ್ರೂಟ್ಸ್”
(Kancos Dry Fruits) ತನ್ನ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಆಯೋಜಿಸಿದ್ದ “ಕ್ಯಾನ್ ಕೋಸ್ “ಗಿವ್ ಅವೇ” ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
​ಈ ವಿಶೇಷ ಸ್ಪರ್ಧೆಯಲ್ಲಿ ಸುರೇಶ್ ಪೂಜಾರಿ ಬೈಲೂರು ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.
​ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ ಜಿ ಎಂ , ಹಾಗೂ ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾದ ಅಧ್ಯಕ್ಷರಾದ ಚಂದ್ರಕಾಂತ್ ಶ್ರೀಯಾನ್ ಅವರು ವಿಜೇತರಿಗೆ ಬಹುಮಾನ ಹಸ್ತಾಂತರಿಸಿ ಶುಭ ಹಾರೈಸಿದರು.
​ಕಾರ್ಯಕ್ರಮದಲ್ಲಿ
​ಹರಿಶ್ಚಂದ್ರ ಸಾಲ್ಯಾನ್ (ಸಂಪಾದಕರು, ಹೊಸ ಅಂಗಣ ಪತ್ರಿಕೆ) ಉದಯ ಅಮೀನ್ ಮಟ್ಟು ​ ,
​ಜನಾರ್ದನ ಕೋಟ್ಯಾನ್(ಹೆಜಮಾಡಿ ಪಂಚಾಯತ್ ಸದಸ್ಯರು), ಪ್ರಭಾಕರ ದೇವಾಡಿಗ (ವಿಜಯ ಸೇವಾ ರೈತ ಸಹಕಾರಿ ಸೇವಾ ಸಂಘದ ನಿರ್ದೇಶಕರು), ಹರ್ಷರಾಜ್ ಶೆಟ್ಟಿ (ಅಧ್ಯಕ್ಷರು, ಲಯನ್ಸ್ ಕ್ಲಬ್ )ಕ್ಯಾನ್ ಕೋಸ್ ನ ​ವೆಂಕಟೇಶ್ ಬಂಗೇರ, ​ರಕ್ಷಿತ್ ಬೆಳ್ಮಣ್( ವಿ ಮೀಡಿಯಾ ಪ್ರತಿನಿಧಿ) ಮತ್ತಿತರರು ಉಪಸ್ಥಿತರಿದ್ದರು.
​ಕಾರ್ಯಕ್ರಮವನ್ನು ದಿನೇಶ್ ಕೋಲ್ನಾಡ್ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.
​ಮುಲ್ಕಿಯ ಕ್ಯಾನ್ ಕೋಸ್ ಸ್ಟೋರ್ ನಲ್ಲಿ ದೇಶ-ವಿದೇಶಗಳ ವಿವಿಧ ಬಗೆಯ ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್, ನಟ್ಸ್, ವಿವಿಧ ಬೀಜಗಳು ಹಾಗೂ ರುಚಿಕರವಾದ ಡ್ರೈ ಫ್ರೂಟ್, ಬರ್ಫಿ ಮತ್ತು ಸ್ವೀಟ್‌ಗಳಿಗೆ ಹೆಸರುವಾಸಿಯಾಗಿದೆ. ಊರಿನ ಹಾಗೂ ಪರವೂರಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿರುವ ಈ ಸಂಸ್ಥೆಯು, ವಿಶೇಷವಾಗಿ ಕ್ಯಾಟರಿಂಗ್ ಮತ್ತು ಶುಭ ಸಮಾರಂಭಗಳಿಗೆ ಬೇಕಾದ ಬೀಜ ದ್ರಾಕ್ಷಿ ಇತ್ಯಾದಿ ಹೋಲ್ಸೇಲ್ ದರದಲ್ಲಿಯೂ ಲಭ್ಯವಿದ್ದು ಗ್ರಾಹಕರ ನಿಕ್ಕಿನ ಸಂಸ್ಥೆಯಾಗಿ ಜನಮನ್ನಣೆ ಪಡೆದಿದೆ.



Related posts

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ * ಭಕ್ತವೃಂದದವರಿಂದ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನ ಸಂಪನ್ನ.

Mumbai News Desk

ರಂಗಚಾವಡಿ” ವರ್ಷದ ಹಬ್ಬ, ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ* 

Mumbai News Desk

ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ನವಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ.

Mumbai News Desk

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಾಲೋಚನಾ ಸಭೆ

Mumbai News Desk

ಶಾಲಾ ಹಂತದಲ್ಲೇ ಈಜು ಕಲಿಕೆ – ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಸಲಹೆ

Mumbai News Desk