
ಆಧುನಿಕ ರೂಪುರೇಷೆಗಳಿಂದ ಮಹಾಲಿಂಗೇಶ್ವರ ಸನ್ನಿಧಾನ ಕಂಗೊಳಿಸಲಿ: ಸಾಣೂರು ಸಾತಿಂಜ ಜನಾರ್ಧನ ಭಟ್
ಚಿತ್ರ, ವರದಿ: ರಮೇಶ್ ಉದ್ಯಾವರ
ಮೀರಾ ರೋಡ್, ಡಿ. 3: ಕಾರ್ತಿಕ ಮಾಸದ ಅಮಾವಾಸ್ಯೆಯ ಪುಣ್ಯ ಪರ್ವಕಾಲದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಸನ್ನಿಧಾನದಲ್ಲಿ ಜರುಗಿದ ಅಯ್ಯಪ್ಪ ಆರಾಧನೆಯಿಂದ ಸರ್ವ ಭಕ್ತ ಮನುಕುಲಕ್ಕೆ ಧನಾತ್ಮಕ ಸುಭೀಕ್ಷೆ ದೊರೆಯುವ ಮೂಲಕ ಪ್ರಸನ್ನ ಕಾಲದ ಸಮಯದಲ್ಲಿ ಜರುಗಿದ ಈ ದೇವತಾ ಕಾರ್ಯಕ್ರಮಕ್ಕೆ ತನುಮನ ಧನದಿಂದ ಸಹಕರಿಸಿದ ಸರ್ವ ಭಕ್ತ ರಿಗೆ ಭಗವಂತನು ಆಯುರಾರೋಗ್ಯ ಧನ ಸಂಪತ್ತು ಪ್ರಾಪ್ತಿ ಅನುಗ್ರಹಿಸಲಿ.ವಿವಿಧ ಧಾರ್ಮಿಕ ಕಾರ್ಯಕ್ರಮ ಗಳ ಪರಿಸರದ ಮಹಾಲಿಂಗೇಶ್ವರ ಸನ್ನಿಧಾನವು ಆಧುನಿಕ ರೂಪುರೇಷೆ ಗಳಿಂದ ಅಭಿವೃದ್ಧಿ ಹೊಂದುವಂತಾಗಲಿ, ಈ ಸನ್ನಿಧಾನವು ಸರ್ವಭಕ್ತರ ಆಧ್ಯಾತ್ಮಿಕ ನೆಲೆಯಾಗಿ ಕಂಗೊಳಿಸಲಿ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ ಇದರ ಪ್ರಧಾನ ಅರ್ಚಕ ರಾದ ಸಾಣೂರು ಸಾತಿಂಜ ಜನಾರ್ಧನ ಭಟ್ ನ. 30ರಂದು ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ ಇಲ್ಲಿ ಜರುಗಿದ 33ನೇ ಅಯ್ಯಪ್ಪ ಮಹಾಪೂಜೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾತಿಂಜ ಜನಾರ್ಧನ ಭಟ್ ಭಕ್ತರನ್ನು ಆಶೀರ್ವದಿಸಿ ಅನುಗ್ರಹಿಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪ್ರಾತಃಕಾಲದಲ್ಲಿ ಗಣ ಹೋಮ ರುದ್ರಾಭಿಷೇಕ ಬಳಿಕ ಮಹಾಲಿಂಗೇಶ್ವರ ಭಜನಾ ಮಂಡಳಿ, ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿ ಸದಸ್ಯರಿಂದ ಭಜನಾ ಕೀರ್ತನ ಕಾರ್ಯಕ್ರಮ ನೆವೇರಿದ ಬಳಿಕ ಅಯ್ಯಪ್ಪ ವೃತಧಾರಿಯವರಿಂದ ಪಡಿಪೂಜೆ ನೆರವೇರಿತು. ದೇವಸ್ಥಾನದ ಅರ್ಕರಾದ ಸಾಣೂರು ಮಾಧವ ಭಟ್ ಮಹಾಮಂಗಳಾರತಿ ನೆರವೇರಿಸಿದರು.




ಸಾಯಂಕಾಲ ಭಜನೆ ಗಾಯಕ ಖ್ಯಾತ ವಿಜಯಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು. ಆ ಬಳಿಕ ದೀಪೋತ್ಸವ ಮಹಾಮಂಗಳಾರತಿ ನೆರವೇರಿತು. ಬಳಿಕ ವಿಶ್ವನಾಥ್ ಪೂಂಜಾ, ಶಕ್ತಿಪ್ರಸಾದ್ ವಿಶ್ವನಾಥ್ ಪೂಂಜಾ ಮತ್ತು ರಶ್ಮಿಶ್ ರಾಮ ಶೆಟ್ಟಿಯವರ ಸೇವಾರೂಪದ ಕೊಡುಗೆಯಲ್ಲಿ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದಲ್ಲಿ ಜರಗುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಪರಿಸರದ ಭಕ್ತರ ಕೊಡುಗೆ ಮಹತ್ವವಾಗಿದ್ದು . ಭಕ್ತಾದಿಗಳ ಸೇವಾ ಭಾವ ಮನೋಭಾವದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ 33ನೇ ವಾರ್ಷಿಕ ಅಯ್ಯಪ್ಪ ಮಾಪೂಜೆಯು ಶ್ರದ್ಧಾಭಕ್ತಿಯಿಂದ ಜರಗಿದೆ. ಸರ್ವಭಕ್ತರಿಗೂ ಕಲಿಯುಗದ ವರದ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರು ಧನಾತ್ಮಕ ಪಲಾಭೀಕ್ಷೆ ನೀಡಿ ಆಶೀರ್ವದಿಸಲಿ– ,ಶೀಮಂತೂರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿ
ಭಜನೆ ಕೀರ್ತನೆ ಮೂಲಕ ಭಗವಂತನ ಅನುಗ್ರಹ ಪಡೆಯಲು ಸಾಧ್ಯ. ವೃತಾಚರಣೆಯಲ್ಲಿ ಅಯ್ಯಪ್ಪ ವೃತ ಅತ್ಯಂತ ಶ್ರೇಷ್ಠವಾಗಿದ್ದು ವೃತಾಧಾರಿಗಳು ಶ್ರದ್ಧಾ ಭಕ್ತಿಯ ಮೂಲಕ ಪರಿಪೂರ್ಣ ಫಲ ಸಿದ್ದಿ ಪಡೆಯಲು ಸಾಧ್ಯ — ಜಯಶೀಲ ತಿಂಗಳಾಯ, ಗುರುಸ್ವಾಮಿ.
ಪೂಜಾ ಕಾರ್ಯಕ್ರಮದಲ್ಲಿ ಮೀರಾ-ಬಾಯಂಧರ್ ನೂತನ ಶಾಸಕರಾದ ನರೇಂದ್ರ ಮಹ್ತಾ ,ಪ್ರತಾಪ್ ಸರ್ ನಾಯ್ಕ ವಿವಿಧ ಜಾತೀಯ ಸಂಘ ಸಂಸ್ಥೆ ಪದಾಧಿಕಾರಿಗಳು ವಿವಿಧ ಅಯ್ಯಪ್ಪ ಶಿಬಿರದ ಗುರುಸ್ವಾಮಿಗಳು ಮಾಲಾಧಾರಿಗಳು ಹೋಟೆಲ್ ಮಾಲಕರು ಸಿಬಂಧಿಗಳು ತುಳುಕನ್ನಡಿಗರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು. ಪೂಜಾ ಕಾರ್ಯಕ್ರಮ ಯಶಸ್ವಿಗೊಳ್ಳುವಲ್ಲಿ ದೇವಸ್ಥಾನದ ಅರ್ಚಕವೃಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ ಮತ್ತು ಮೀರಾ ಸೊಸೈಟಿಯ ಸರ್ವ ಸದಸ್ಯರು ಸಹಕರಿಸಿದರು.